18.4 C
Karnataka
Wednesday, November 27, 2024

ಜೀವವಿಜ್ಞಾನಗಳ ಇತ್ತೀಚಿನ ಪ್ರವೃತ್ತಿಗಳ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗವು ಮಂಗಳಾ ಸಭಾಂಗಣದಲ್ಲಿ ನವೆಂಬರ್‌ 8 ರಿಂದ 10 ರವರೆಗೆ ಮೂರು ದಿನಗಳ ಜೀವವಿಜ್ಞಾನದ ಇತ್ತೀಚಿನ ಪ್ರವೃತ್ತಿಗಳ ಕುರಿತು  ರಾಷ್ಟ್ರೀಯ ಸಮ್ಮೇಳನ
(NCTRBS-2023)ʼ ವನ್ನು ಆಯೋಜಿಸಿದೆ.
ಸಮ್ಮೇಳನವು ದೇಶಾದ್ಯಂತದ ವಿಜ್ಞಾನಿಗಳು ಮತ್ತು ಸಂಶೋಧಕರಿಗೆಜೈವಿಕ ವಿಜ್ಞಾನದಲ್ಲಿನ ಇತ್ತೀಚಿನ ಸಂಶೋಧನೆಗಳನ್ನು  ಪ್ರಸ್ತುತಪಡಿಸಲು ಒಂದು   ವೇದಿಕೆಯನ್ನು ನೀಡುವ ಜೊತೆಗೆ ಉನ್ನತ ಮಟ್ಟದ ಸಂಶೋಧನೆಗಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನೂ  ಹೊಂದಿದೆ.ಸಂಪನ್ಮೂಲ ವ್ಯಕ್ತಿಗಳಿಂದ ಗೋಷ್ಠಿಗಳ ಜೊತೆಗೆ ಯುವ ಸಂಶೋಧಕರಿಗೆ ತಮ್ಮ ಸಂಶೋಧನಾ ಫಲಿತಾಂಶಗಳನ್ನುಪ್ರಸ್ತುತಪಡಿಸಲು ಅವಕಾಶವನ್ನು ನೀಡಲಾಗುತ್ತದೆ. ಪೋಸ್ಟರ್ ಮತ್ತು ಮೌಖಿಕ ಪ್ರಸ್ತುತಿಗಳು ಮತ್ತು ನವೀನ ಸಂಶೋಧನೆ ಮತ್ತು ಪ್ರಸ್ತುತಿ ಕೌಶಲ್ಯಕ್ಕೆ ಬಹುಮಾನಗಳನ್ನು ನೀಡಲಾಗುತ್ತದೆ.

ನವೆಂಬರ್‌ 8 ರಂದು ಬೆಳಗ್ಗೆ 9:15 ಕ್ಕೆ ಕೇರಳದ ತಿರುವಂತಪುರದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (IISER) ಉಪನಿರ್ದೇಶಕ ಪ್ರೊ. ಎಸ್. ಮೂರ್ತಿ ಶ್ರೀನಿವಾಸುಲ ಸಮ್ಮೇಳನ ಉದ್ಘಾಟಿಸಲಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಯರಾಜ್ ಅಮೀನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಲಿದ್ದಾರೆ, ಎಂದು ಸಹಾಯಕ ಪ್ರಾಧ್ಯಾಪಕ ಡಾ.ನರಸಿಂಹಯ್ಯ ಎನ್, ಅಪ್ಲೈಡ್ ವಿಭಾಗದ ಅಧ್ಯಕ್ಷ ಸಮ್ಮೇಳನದಸಂಚಾಲಕ ಪ್ರೊ.ಎಂ.ಎಸ್. ಮುಸ್ತಾಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ದೂರವಾಣಿ ಸಂಖ್ಯೆ 6364400105 ಯನ್ನು ಸಂಪರ್ಕಿಸಬಹುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles