25.1 C
Karnataka
Friday, April 18, 2025

ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗೆ ಸೂಚನೆ

ಮಂಗಳೂರು: ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು ಹಾಗೂ ಸೌಲಭ್ಯ ವಿತರಿಸಲು 23 ವಲಯದ ಅಸಂಘಟಿತ ಕಾರ್ಮಿಕರನ್ನು ಈಗಾಗಲೇ ಗುರುತಿಸಿ ಮಂಡಳಿಯಲ್ಲಿ ನೊಂದಾಯಿಸಲು ಹಾಗೂ ಸೌಲಭ್ಯ ವಿತರಿಸುವ ಸಲುವಾಗಿ ವರ್ಗವಾರು ದತ್ತಾಂಶದ ಅವಶ್ಯಕತೆ ಇರುವ ಕಾರಣ ಸದರಿ ದತ್ತಾಂಶವನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ.
ಅಸಂಘಟಿತ ವಲಯದ ಕಾರ್ಮಿಕರು: ಹಮಾಲರು, ಚಿಂದಿ ಆಯುವವರು, ಮನೆಕೆಲಸದವರು, ಮೆಕಾನಿಕ್, ಟೈಲರ್‍ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಗಿಗ್ ವೃತ್ತಿ ನಿರ್ವಹಿಸುವ ಡೆಲಿವರಿ ಕಾರ್ಮಿಕರು, ದಿನಪತ್ರಿಕೆ ವಿತರಿಸುವ ಕಾರ್ಮಿಕರು, ಫೋಟೋಗ್ರಾಫರ್, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ/ ಸಭಾಭವನ/ ಟೆಂಟ್, ಪೆಂಡಾಲ್ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿ ಬದಿ ವ್ಯಾಪಾರಸ್ಥರು, ಹೋಟೆಲ್ ಕಾರ್ಮಿಕರು, ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರು ಹಾಗೂ ಮೆಕಾನಿಕ್ ಇತರದ ಅಸಂಘಟಿತ ಕಾರ್ಮಿಕರು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ, ಮಂಗಳೂರು ವಿಭಾಗ, ಕಾರ್ಮಿಕ ಭವನ, ಮಹಿಳಾ ಐಟಿಐ ಹತ್ತಿರ, ಯೆಯ್ಯಾಡಿ, ಶರ್ಬತ್ ಕಟ್ಟೆ, ಮಂಗಳೂರು ಈ ಕಚೇರಿಯನ್ನು ಸಂಪರ್ಕಿಸುವಂತೆ ಮಂಗಳೂರು ವಿಭಾಗ, ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles