ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯದ ಹದಿನಾಲ್ಕನೆಯ ಘಟಿಕೋತ್ಸವ ಸಮಾರಂಭವು ನವೆಂಬರ್ 16ರಂದು ಮಧ್ಯಾಹ್ನ 3 ಗಂಟೆಗೆ ವಿಶ್ವವಿದ್ಯಾಲಯದ ದೇರಳಕಟ್ಟೆ ಕ್ಯಾಂಪಸ್ಸಿನ ಗೌಂಡ್ಸ್‌ನಲ್ಲಿ ನಡೆಯಲಿದೆ“ ಎಂದು ಉಪ ಕುಲಪತಿ ಪ್ರೊ.(ಡಾ.) ಎಂ.ಎಸ್.ಮೂಡಿತ್ತಾಯ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ವಿಶ್ವವಿದ್ಯಾನಿಲಯದ ಮಾನ್ಯ ಕುಲಾಧಿಪತಿಗಳಾದ ಎನ್.ವಿನಯ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಲಿದ್ದು, ಸೇನಾಪಡೆಗಳ ವೈದ್ಯಕೀಯ ಸೇವೆಗಳ ಡೈರೆಕ್ಟರ್ ಜನರಲ್ ಡಾ. ಅರ್ತಿ ಸರಿನ್ ಅವರು ಸಮಾರಂಭದ ಮುಖ್ಯ ಭಾಷಣ ಮಾಡಲಿದ್ದಾರೆ. ಪ್ರೊ. ಡಾ.ಎಂ.ಶಾಂತಾರಾಂ ಶೆಟ್ಟಿ, ಸಹ ಕುಲಾಧಿಪತಿ ಹಾಗೂ ವಿಶಾಲ್ ಹೆಗ್ಡೆ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮನಡೆಯಲಿದೆ. ಕುಲಪತಿಗಳಾದ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಅವರು ಸ್ವಾಗತ ಭಾಷಣ ಮಾಡಲಿದ್ದಾರೆ. ವಿಶ್ವವಿದ್ಯಾನಿಲಯದ ಇತರ ಪ್ರಮುಖ ಅಧಿಕಾರಿಗಳಾದ ಪ್ರೊ.ಡಾ.ಹರ್ಷ ಹಾಲಹಳ್ಳಿ, ಪ್ರೊ.ಡಾ.ಪ್ರಸಾದ್ ಬಿ. ಶೆಟ್ಟಿ, ಪರೀಕ್ಷಾ ನಿಯಂತ್ರಕರು, ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ ಮುಖ್ಯಸ್ಥರು ಮತ್ತು ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ.
ಪದವಿ ಪ್ರದಾನ:
ಸಮಾರಂಭದಲ್ಲಿ ಒಟ್ಟು 1052 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಪಿಹೆಚ್.ಡಿ-34, ವೈದ್ಯಕೀಯ-163 (ಪಿಜಿ-15+ಯುಜಿ-148), ದಂತ ವೈದ್ಯಕೀಯ-147 (ಫೆಲೋಶಿಪ್-1+ಪಿಜಿ-49+-97), 3-209 (23-107+aw-102), Fon-143 (83-05+adwa-138),ಫಿಸಿಯೋಥೆರಪಿ-85 (ಪಿಜಿ-30+ಯುಜಿ-55), ಅರೆ ವೈದ್ಯಕೀಯ ವಿಜ್ಞಾನ -146 (ಪಿಜಿ-42+ಯುಜಿ-104),ಮಾನವಿಕ-14 (ಪಿಜಿ-11+ ಯುಜಿ-03), ಜೈವಿಕ ವಿಜ್ಞಾನ -49 (ಪಿಜಿ-45 +ಯುಜಿ-04), ವಾಸ್ತುಶಿಲ್ಪ -41 (ಯುಜಿ),ವಾಕ್ ಮತ್ತು ಶ್ರವಣ –15 (ಪಿಜಿ) ಮತ್ತು ವ್ಯವಹಾರ ನಿರ್ವಹಣೆ –06 (ಪಿಜಿ-06).ಶೈಕ್ಷಣಿಕ ಶ್ರೇಷ್ಠತೆಗೆ ಗೌರವ ನೀಡುವುದಕ್ಕಾಗಿ, ವಿಶ್ವವಿದ್ಯಾಲಯವು 22 ಚಿನ್ನದ ಪದಕಗಳು (11 ನಿಟ್ಟೆವಿಶ್ವವಿದ್ಯಾನಿಲಯ ಚಿನ್ನದ ಪದಕಗಳು ಮತ್ತು 1 ದತ್ತಿ ಚಿನ್ನದ ಪದಕಗಳು) ಹಾಗೂ 72 ಮೆರಿಟ್ ಪ್ರಮಾಣಪತ್ರಗಳನ್ನು ಪ್ರಶಸ್ತಿಯಾಗಿ ನೀಡಲಿದೆ.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ರಿಜಿಸ್ಟ್ರಾರ್ ಡಾ.ಹರ್ಷ ಹಾಲಹಳ್ಳಿ, ಡಾ.ಪ್ರಸಾದ್ ಬಿ.ಶೆಟ್ಟಿ ಉಪಸ್ಥಿತರಿದ್ದರು.