ಧರ್ಮಸ್ಥಳ : ಆನ್ ಲೈನ್ ಜಾಬ್ ಆಫರ್ ನೀಡಿ ಮಹಿಳೆಯೋವ೯ರಿಗೆ 4.25 ಲಕ್ಷ ರೂ.ವ೦ಚನೆ ಮಾಡಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಧರ್ಮಸ್ಥಳ ಕಾಯರ್ತ್ತಡ್ಕ ನಿವಾಸಿ ಮಹಿಳೆಗೆ ಅ.9ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ ಆನ್ ಲೈನ್ ಜಾಬ್ ಆಫರ್ ಕೊಟ್ಟಿದ್ದು, ಅದರಂತೆ ಆಕೆ ಕೆಲಸ ಪ್ರಾರಂಭಿಸಿರುತ್ತಾರೆ. ಆ ಬಳಿಕ ಅಪರಿಚಿತ ಆರೋಪಿಗಳು ಅವರಿಗೆ ವಿವಿಧ ಕಾರಣಗಳನ್ನು ತಿಳಿಸಿ, ಒಟ್ಟು 4,25,934 ರೂ ಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿರುತ್ತಾರೆ. ಮಹಿಳೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
