ಬೆ೦ಗಳೂರು: ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಎಂಸಿಎ ವಿದ್ಯಾರ್ಥಿಗಳ ಎರಡನೇ ಬ್ಯಾಚ್‌ನ ಓರಿಯಂಟೇಶನ್ ಜುಲೈ 8 ರಂದು ನಡೆಯಿತು.
ಸ್ಕೂಲ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯ ಡೀನ್ ಮತ್ತು ನಿರ್ದೇಶಕರಾದ ಫಾದರ್ ಡೆನ್ಜಿಲ್ ಲೋಬೋ ಎಸ್.ಜೆ ಅವರು ನೂತನ ವಿದ್ಯಾರ್ಥಿಗಳಿಗೆ ಆಶೀರ್ವಾದವನ್ನು ಕೋರುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. “ನೀವು ನಿಮ್ಮಲ್ಲಿ ನಂಬಿಕೆಯನ್ನು ಹೊಂದಿರಬೇಕು, ಏಕೆಂದರೆ ಆ ನಂಬಿಕೆಯು ಆಂತರಿಕ ದೈವತ್ವವನ್ನು ನೀಡುತ್ತದೆ. ನೀವು ಏನು ಬೇಕಾದರೂ ಮಾಡಬಹುದು; ನಿಮಗೆ ನಂಬಿಕೆ ಇಲ್ಲದಿದ್ದಾಗ ಮಾತ್ರ ನೀವು ವಿಫಲರಾಗುತ್ತೀರಿ,” ಎಂದರು.
ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಮೆಲ್ವಿನ್ ಕೊಲಾಕೊ ಅವರು ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಡಾ. ಮೋಹನದಾಸ ಪರೀಕ್ಷಾ ವ್ಯವಸ್ಥೆಯನ್ನು ವಿವರಿಸಿದರು.
ವಿದ್ಯಾರ್ಥಿ ಸಂಯೋಜಕ ಜಾನ್ ವಿಸ್ಟನ್, ಸಂಸ್ಥೆಯ ಚಟುವಟಿಕೆಗಳಲ್ಲಿ ಭಾಗವಹಿಸುವ ಪ್ರಯೋಜನಗಳ ವಿವರವನ್ನು ನೀಡಿದರು. ಡಾ.ಮುಯಿನ್ ಪಾಷಾ ಸ್ವಾಗತಿಸಿದರು.