ಮಂಗಳೂರು: ಕೆನರಾ ಇಂಟರ್ ನ್ಯಾಷನಲ್ ಶಾಲೆಯ ಓರಿಯೆಂಟೆಷನ್ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್ ನ್ಯಾಷನಲ್ ಶಾಲೆಯ ನಿರ್ದೇಶಕಿ ಅಂಜನಾ ಕಾಮತ್ ಅವರು ಶಾಲೆಯ ವ್ಯವಸ್ಥೆಗಳ ಬಗ್ಗೆ ಮಾತನಾಡುತ್ತಾ ಇಲ್ಲಿಯ ಅಧ್ಯಯನ ವಿಧಾನ, ತಂತ್ರ ಇತರ ಅಂತಾರಾಷ್ಟ್ರೀಯ ಶಾಲೆಗಳಿಗಿಂತ ಹೇಗೆ ವಿಭಿನ್ನ ಮತ್ತು ವಿಶಿಷ್ಟವೆಂಬುದನ್ನು ವಿವರಿಸಿದರು. ಶಾಲೆಯ ಪಠ್ಯಕ್ರಮವು ವಿದ್ಯಾರ್ಥಿಗಳ ಹಿತವನ್ನು ಕೇಂದ್ರವಾಗಿಸಿಕೊಂಡು ರೂಪಿಸಲಾಗಿದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಶಿಕ್ಷಣವನ್ನು ನೀಡುತ್ತಾ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ, ವಿಜ್ಞಾನ, ಗಣಿತ ಮತ್ತು ಭಾಷೆಗಳ ಮೇಲಿನ ಆಳವಾದ ಅರಿವು ಮೂಡಿಸುವುದು ಹಾಗೆಯೇ ಶಿಕ್ಷಕರ ಸಾಮರ್ಥ್ಯ, ಶ್ರೇಷ್ಟ ಶಿಕ್ಷಣ ವಿಧಾನಗಳು, ಪ್ರಾಯೋಗಿಕ, ಕೌಶಲ ಆಧಾರಿತ ಮತ್ತು ಹಸಿರು ಪರಿಸರವು ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಲಾಗುತ್ತದೆ. ಮಂಗಳೂರಿನಲ್ಲಿ ಅತ್ಯುತ್ತಮ ಶಿಕ್ಷಣದ ಕೇಂದ್ರವಾಗುತ್ತದೆ ಹಾಗೂ ಪೋಷಕರು,ವಿದ್ಯಾರ್ಥಿಗಳ ನಂಬಿಕೆಗೆ ಅನುಗುಣವಾಗಿ ಶಾಲೆ ಬೆಳೆಯುತ್ತದೆ ಎಂದು ಹೇಳಿದರು.
ಶಾಲೆಯ ನಿರ್ದೇಶಕಿ ಅಂಜನಾ ಕಾಮತ್, ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಉಜ್ವಲ ರಾವ್, ಮತ್ತು ಶಿಕ್ಷಕವೃಂದ ಭಾಗವಹಿಸಿದ್ದರು. ಶಾಲೆಯ ಶಿಕ್ಷಕಿ ಲಾರೆನ್ ಲೋಬೋ ಅವರು ಸ್ವಾಗತಿಸಿ, ಧನ್ಯವಾದಗಳನ್ನು ತಿಳಿಸಿದರು.