ಮಂಗಳೂರು:ಭಾರತ ಸರ್ಕಾರವು ಪಿಎಂ ವಿಶ್ವಕರ್ಮ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದೆ .ಸದರಿ ಯೋಜನೆ ಅಡಿಯಲ್ಲಿ ಹೊಸ 18 ಚಟುವಟಿಕೆಗಳಲ್ಲಿ ತೊಡಗಿಸಿರುವ ಕುಶಲಕರ್ಮಿಗಳಿಗೆ ಈ ಸವಲತ್ತುಗಳನ್ನು ನೀಡಲಾಗುವುದು. ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಐಡಿ ಕಾರ್ಡ್, ಕೌಶಲ್ಯ ಅಭಿವೃದ್ಧಿ ತರಬೇತಿ, ಉಪಕರಣಗಳಿಗೆ ಪೆÇ್ರೀತ್ಸಾಹ, ಕ್ರೆಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪೆÇ್ರೀತ್ಸಾಹ, ಮಾರುಕಟ್ಟೆ ಬೆಂಬಲ ಸೌಲಭ್ಯ ನೀಡಲಾಗುವುದು.
ಬಡಗಿತನÀ, ದೋಣಿ ತಯಾರಿಕೆ, ಶಸ್ತ್ರಾಸ್ತ್ರ ತಯಾರಿಕೆ, ಕಮ್ಮಾರ ಸುತ್ತಿಗೆ ಮತ್ತು ಟೂಲ್ ಕಿಟ್ ತಯಾರಿಕೆ, ಬೀಗ ತಯಾರಿಕರು, ಶಿಲ್ಪಕಲೆ ಕಲ್ಲುಪುಡಿ ಮಾಡುವರು ಬಂಗಾರದ ಆಭರಣ ತಯಾರಿಕೆ, ಕುಂಬಾರಿಗೆ, ಪಾದರಕ್ಷೆ, ಚರ್ಮಗಾರಿಕೆ ತಯಾರಿಕೆ ಗೌಂಡಿ ಕೆಲಸಗಾರರು, ಕಸಬರಿಗೆ, ಬಾಸ್ಕೆಟ್, ಮ್ಯಾಟ್, ಬಿದರಿನ ಉತ್ಪನ್ನ ತಯಾರಿಕೆ, ತೆಂಗಿನ ನಾರಿನ ಉತ್ಪನ್ನ ತಯಾರಕರು, ಗೊಂಬೆ ತಯಾರುಕರು, ಕ್ಷೌರಿಕ, ಹೂಮಾಲೆ ತಯಾರಿಕರು ದೋಬಿ, ಟೈಲರ್, ಮೀನಿನ ಬಲೆಗಳನ್ನು ತಯಾರಿಸುವರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು.
ಕುಶಲಕರ್ಮಿಗಳು ಮೇಲ್ಕಂಡ 18 ವೃತ್ತಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಹುದ್ದೆಗೆ ಆಗಿರಬೇಕು. 18 ವರ್ಷ ಮೇಲ್ಪಟ್ಟವರಾಗಿರಬೇಕು ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಹರು. ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿ ಇರಬಾರದು. ಕುಶಲಕರ್ಮಿಗಳು ಮುದ್ರಾ ಮತ್ತು ಸ್ವ ನಿಧಿ ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ಯೋಜನೆಯಲ್ಲಿ ಸಾಲ ಪಡೆದಿರಬಾರದು.
ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢಕರಿಸಿದ ನಂತರ 5 ರಿಂದ 7 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು ತರಬೇತಿ ಅವಧಿಯಲ್ಲಿ ಸ್ಟೈಫಂಡ್ ನೀಡಲಾಗುವುದು. ತರಬೇತಿ ನಂತರ ಪ್ರಮಾಣ ಪತ್ರದೊಂದಿಗೆ 15 ಸಾವಿರ ರೂಪಾಯಿ ಬೆಲೆಬಾಳುವ ಉಪಕರಣಗಳನ್ನು ನೀಡಲಾಗುವುದು ನಂತರ ಶೇ.5ರ ಬಡ್ಡಿ ದರದಲ್ಲಿ ಪ್ರಥಮ ಹಂತದಲ್ಲಿ 1 ಲಕ್ಷ ಹಾಗೂ ಎರಡನೇ ಹಂತದಲ್ಲಿ 2 ಲಕ್ಷÀ ಸಾಲವನ್ನು ಶೇ.5ರ ಬಡ್ಡಿ ದರದಲ್ಲಿ ನೀಡಲಾಗುವುದು.
ಆಸಕ್ತರು ಗ್ರಾಮ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ತ್ವರಿತವಾಗಿ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮಂಗಳೂರು. ದೂರವಾಣಿ ಸಂಖ್ಯೆ 0824 – 2225071 ಗೆ ಕಚೇರಿಯ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.