ಉಸ್ತುವಾರಿ ಸಚಿವರ ಪ್ರವಾಸ
ಮ೦ಗಳೂರು: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜನವರಿ 17 ಮತ್ತು 18 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.
ಶುಕ್ರವಾರ ಬೆಳಗ್ಗೆ 10:30 - ಮಂಗಳೂರು ವಿಮಾನ ನಿಲ್ದಾಣ ಆಗಮನ, 11.30- ಮೇರಿಹಿಲ್‍ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಗಳೂರು ಪ್ರಾದೇಶಿಕ ಕಚೇರಿ ಕಟ್ಟಡ ಶಿಲಾನ್ಯಾಸ, 12:15 - ಪುರಭವನದಲ್ಲಿ ಬಹುಸಂಸ್ಕೃತಿ ಉತ್ಸವ -...
ಜ. 17 ರಿಂದ 23 ರವರೆಗೆ ಮತ್ತು ಮಂಗಳೂರು ಮತ್ತು ಉಡುಪಿಯಲ್ಲಿ 2025 ಕರ್ನಾಟಕ ಕ್ರೀಡಾಕೂಟ
ಮ೦ಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳು ಜಂಟಿಯಾಗಿ ಕರ್ನಾಟಕ ಕ್ರೀಡಾಕೂಟ 2025 ಅನ್ನು ಆಯೋಜಿಸುತ್ತಿದ್ದು, ಜನವರಿ 17 ರಿಂದ ಜನವರಿ 23 ರವರೆಗೆ ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿದೆ.
ಜನವರಿ 17ರಂದು ಸಂಜೆ ೫ಗಂಟೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...
ಸ್ವರ ಸಂಕ್ರಾಂತಿ ಉತ್ಸವ-25 ಸ್ವರ ಸಾಧನಾ ಪ್ರಶಸ್ತಿ ವಿತರಣೆ
ಮಂಗಳೂರು: ಕಲಾ ಶಾಲೆ, ಸ್ವರಾಲಯ ಸಾಧನಾ ಫೌಂಡೇಷನ್ ವತಿಯಿಂದ ಸ್ವರ ಸಂಕ್ರಾಂತಿ ಉತ್ಸವ ಹಾಗೂ ಸ್ವರ ಸಾಧನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಗದ್ಗುರು ದುರುಧುಂದೇಶ್ವರ ಮಠದ ಶ್ರೀನಿಜಲಿಂಗೇಶ್ವರ ಸ್ವಾಮೀಜಿ, ಈಗಿನ ಆಧುನಿಕ ಸೌಲಭ್ಯ ಬಳಸಿ ಆಧ್ಯಾತ್ಮಿಕವಾಗಿ ಮುನ್ನಡೆಯಬಹುದು. ಇವೆಲ್ಲಾವುಗಳಿಗೆ ಸಂಗೀತವು ಮಹತ್ವದ ಮಾಧ್ಯಮವಾಗಿದೆ. ಕಲಾಸೇವೆಯ...
ವುಶು ಚಾಂಪಿಯನ್ ಶಿಪ್ : ಹರ್ಷಲ್‌ಗೆ ಚಿನ್ನದ ಪದಕ
ಮಂಗಳೂರು: ಮೂರನೇ ಅಂತರ್ ಶಾಲಾ ಮತ್ತು ಅಂತರ್ ಜಿಲ್ಲಾ ವುಶು ಚಾಂಪಿಯನ್‌ಶಿಪ್-೨೦೨೫ ಮಂಗಳೂರಿನ ಯು.ಎಸ್.ಮಲ್ಯ
ಒಳಾಂಗಣ ಕ್ರೀಡಾಂಗಣದಲ್ಲಿ ಜ.12 ರಂದು ನಡೆಯಿತು. ಅಂತರ್ ಶಾಲಾ ಸಬ್ ಜೂನಿಯರ್ ವಿಭಾಗದಲ್ಲಿ ಬೋಂದೆಲ್ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹರ್ಷಲ್ ಎನ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇವರು ಪಚ್ಚನಾಡಿ ಬಂಗೇರು ಸೀಮೆ...
ಮುಖ್ಯಮಂತ್ರಿಯವರ ಪ್ರವಾಸ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 17 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.ಶುಕ್ರವಾರ ಬೆಳಗ್ಗೆ 11:30 - ಮಂಗಳೂರು ವಿಮಾನ ನಿಲ್ದಾಣ ಆಗಮನ. ನಂತರ ಮೇರಿಹಿಲ್‍ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಗಳೂರು ಪ್ರಾದೇಶಿಕ ಕಚೇರಿ ಕಟ್ಟಡ ಶಿಲಾನ್ಯಾಸ, ಮಧ್ಯಾಹ್ನ 12:15 - ಪುರಭವನದಲ್ಲಿ ಬಹುಸಂಸ್ಕೃತಿ ಉತ್ಸವ - ಕರ್ನಾಟಕ ಸುವರ್ಣ ಸಂಭ್ರಮ 50...
ನಾಳೆ “ಶಿಲ್ಪಾ ಗಣೇಶ್” ನಿರ್ಮಾಣದ “ಪ್ರೊಡಕ್ಷನ್ ನಂ 1” ತುಳು ಚಲನಚಿತ್ರದ ಮುಹೂರ್ತ
ಈ ಕಾರ್ಯಕ್ರಮದಲ್ಲಿ “ಗೋಲ್ಡನ್ ಸ್ಟಾರ್ ಗಣೇಶ್” ಪಾಲ್ಗೊಳ್ಳುತ್ತಿದ್ದಾರೆ. ಶಾಸಕರಾದ ವೇದವ್ಯಾಸ ಕಾಮತ್, ಉಮನಾಥ್ ಕೋಟ್ಯಾನ್, ರಾಜೇಶ್ ನಾಯಕ್, ಡಾ.ಭರತ್ ಶೆಟ್ಟಿ, ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ ಮಾಜಿ ಸ೦ಸದ ನಳಿನ್ ಕುಮಾರ್ ಕಟೀಲ್, ಹರಿಕೃಷ್ಣ ಬಂಟ್ವಾಳ್, ಹಾಗೂ ಇನ್ನಿತರ ಗಣ್ಯರು ಹಾಗೂ ಚಲನಚಿತ್ರರಂಗದ ಗಣ್ಯರು ಆಗಮಿಸುತ್ತಿದ್ದಾರೆ.“ನಿತ್ಯ ಪ್ರಕಾಶ್ ಬಂಟ್ವಾಳ” ಮೊದಲ ಬಾರಿಗೆ...
“ಮಿಡ್ಲ್ ಕ್ಲಾಸ್ ಫ್ಯಾಮಿಲಿ'” ತುಳು ಚಿತ್ರದೊಂದಿಗೆ ಕೈಜೋಡಿಸಿದ ರೋಹನ್ ಮೊಂತೇರೊ
ಮಂಗಳೂರು: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ' ತುಳು ಸಿನಿಮಾ ಜನವರಿ 24 ರಂದು ತೆರೆಕಾಣಲಿದೆ.
ರೋಹನ್ ಕಾರ್ಪೊರೇಷನ್ ನ ಮ್ಯಾನೇಜಿಂಗ್ ಡೈರೆಕ್ಟರ್ ರೋಹನ್ ಮೊಂತೇರೊ ಅವರು ಬೆಂಬಲ...
ಫೆ.21ಕ್ಕೆ ಬಹುನಿರೀಕ್ಷಿತ “ಮೀರಾ” ಚಲನಚಿತ್ರ ತೆರೆಗೆ
ಮಂಗಳೂರು: ಅಸ್ತ್ರ ಪ್ರೊಡಕ್ಷನ್‌ನ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ'ಮೀರಾ' ಚಲನಚಿತ್ರ ಫೆಬ್ರವರಿ 21ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಲಂಚುಲಾಲ್ ಕೆ.ಎಸ್. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಅಶ್ವಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ, ಈ ಚಿತ್ರ ತುಳು ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ, ಇದು ತುಳು...
ಕಡಬ ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ಜಾಗ ಗುರುತಿಸಲು ಸಂಸದ ಕ್ಯಾ. ಚೌಟ ಸೂಚನೆ
ಮಂಗಳೂರು: ಸವಣೂರು, ಸುಬ್ರಮಣ್ಯ ನೆಲ್ಯಾಡಿ ಮತ್ತು ಕಡಬದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವುದಕ್ಕೆ ಜಾಗ ಗುರುತಿಸುವಂತೆ ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಪತ್ರ ಬಂದಿರುವ ಹಿನ್ನಲೆಯಲ್ಲಿ ಒಂದು ವಾರದೊಳಗೆ ಈ ಬಗ್ಗೆ ವರದಿ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕಡಬ ತಾಲೂಕು ತಹಸೀಲ್ದಾರ್ಗೆ ಸೂಚನೆ ನೀಡಿದ್ದಾರೆ.
ಕಡಬ ತಾಲೂಕು ಕಚೇರಿಯಲ್ಲಿ ಜನವರಿ...
ವಿಶಿಷ್ಟ ಸಾಧಕ ಕಾರ್ಪೊರೇಟರ್ ಗಣೇಶ್ ಕುಲಾಲ್ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆ
ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸುವುದರ ಜತೆಗೆ ಅನಾಥ ಶವಗಳ ಅಂತ್ಯ ಸಂಸ್ಕಾರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣೇಶ ಕುಲಾಲ್ ಅವರು 2024-25ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿವೆ. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ....






