ರೈಲ್ವೆ ಹಳಿ ಬಳಿ ಭೂ ಕುಸಿತ: ಭರದಿ೦ದ ಸಾಗುತ್ತಿದೆ ದುರಸ್ತಿ ಕಾಯಾ೯ಚರಣೆ
ಹಾಸನ: ಸಕಲೇಶಪುರ ತಾಲೂಕು ಯಡಕುಮರಿ ಬಳಿ ರೈಲ್ವೆ ಹಳಿ ಸಮೀಪ ಭೂ ಕುಸಿತವನ್ನು ಸರಿಪಡಿಸಿ ರೈಲುಗಳ ಸಂಚಾರಕ್ಕೆ ಅನುವು
ಮಾಡಿಕೊಡುವ ಕಾಯ೯ ಭರದಿ೦ದ ಸಾಗಿದೆ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆಯ
ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಕಾರ್ಯಾಚರಣೆ ರಾತ್ರಿ ಹಗಲು ನಡೆಯುತ್ತಿದೆ.
ಭೂ ಕುಸಿತ ಪರಿಣಾಮ ಮಂಗಳೂರು – ಬೆಂಗಳೂರು ನಡುವೆ...
ಮನೆಗೆ ಮರ ಬಿದ್ದು ಹಾನಿ:ಶಾಸಕ ಕಾಮತ್ ಭೇಟಿ
ಮಂಗಳೂರು: ಮಂಗಳೂರು ನಗರದಾದ್ಯಂತ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಬಳ್ಳಾಲ್ ಬಾಗ್ ಬಳಿ ಶೆಟ್ಟಿಗಾರ್ ಕಾಂಪೌಂಡ್ ನ ಭವಾನಿ ಶಂಕರ್ ಎಂಬುವವರ ಮನೆ ಮೇಲೆ ಮರ ಬಿದ್ದು ತೀವ್ರ ಹಾನಿಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳಿಗೆ ಕರೆ ಮಾಡಿ ಹಾನಿಗೊಳಗಾದ ಮನೆಯ ಪರಿಹಾರ ಕಾರ್ಯದ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ...
ಸುರತ್ಕಲ್ ಬಂಟರ ಸಂಘದಿಂದ “ಆಟಿದ ಪೊರ್ಲು“, ಅಭಿನಂದನಾ ಕಾರ್ಯಕ್ರಮ
ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ"ಆಟಿದ ಪೊರ್ಲು ಮತ್ತು ಅಭಿನಂದನಾ ಸಮಾರಂಭ" ಭಾನುವಾರ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿಯ ಚೇರ್ ಮ್ಯಾನ್ ವಿಕೆ ಸಮೂಹ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಕರುಣಾಕರ ಎಂ.ಶೆಟ್ಟಿ ಮಧ್ಯಗುತ್ತು ಅವರು ಬಿತ್ತನೆಯಾದ...
ಶಿಕ್ಷಕ, ಉದ್ಯಮಿ ಬೆಂಜಮಿನ್ ಡಿಸೊಜಾ ನಿಧನ
ಮ೦ಗಳೂರು: ಶಿಕ್ಷಣ, ಉದ್ಯಮ ಮತ್ತು ಸಮಾಜಸೇವೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕೆಲರಾಯ್‌ನ ಬೆಂಜಮಿನ್ ಡಿ ಸೊಜಾ( 75 ) ಇವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಅವರು ಪತ್ನಿ,ಸುರತ್ಕಲ್ ಗೋವಿಂದಾಸ ಕಾಲೇಜಿನ ವಿಶ್ರಾಂತ ಸಹಾಯಕ ಪ್ರಾಧ್ಯಾಪಕಿ ವಾಯ್ಲೆಟ್ ಡಿ ಸೊಜಾ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಬೆಂಜಮಿನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆಲರಾಯ್ ಸಂತ ಜೋಕಿಮ್...
ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ ಪದಾಧಿಕಾರಿಗಳ ಪದಗ್ರಹಣ
ಮಂಗಳೂರು: ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ 2024-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.20ರ೦ದು ಹೋಟೆಲ್ ದೀಪಾ ಕಂಫರ್ಟ್ನಲ್ಲಿ ಜರಗಿತು.
ಅಧ್ಯಕ್ಷರಾಗಿ ಟಾಲಿ ಕಂಪ್ಯೂಟರ್ಸ್ ಮಾಲಕರಾದ ಜಗದೀಶ್ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಶ್ರೀ ಭಾರತಿ ಸಿಸ್ಟಮ್ಸನ ಮಾಲಕರಾದ ಶಂಕರನಾರಾಯಣ ಕಾರಂತ್, ಕಾರ್ಯದರ್ಶಿಯಾಗಿ ಡಿಯೊ ಟೆಕ್ ಗ್ಲೋಬಲ್‌ನ ಪಾಲುದಾರರಾದ ರವಿ ಭಟ್, ಖಜಾಂಚಿಯಾಗಿ ಚತುರ್ ಟೆಕ್ನಾಲಜಿಸ್ ಮಾಲಕರಾದ...
ಸುರತ್ಕಲ್ ನಲ್ಲಿ ಜೆಸಿಐ ಸ್ಥಾಪನಾ ದಿನಾಚರಣೆ
ಮ೦ಗಳೂರು: ಶ್ರದ್ಧೆಯಿಂದ ಸೇವೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ದುಡಿದಾಗ ಜನರ ಗೌರವ ಸಿಗುವುದಲ್ಲದೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್ ಪೂಂಜ ಹೊಸಬೆಟ್ಟು ನುಡಿದರು.ಅವರು ಜೆಸಿಐ ಸುರತ್ಕಲ್ ವತಿಯಿಂದ ಗೋವಿಂದದಾಸ ಕಾಲೇಜು ಸುರತ್ಕಲ್ ಇಲ್ಲಿ ನಡೆದ ಜೆಸಿಐ ಸ್ಥಾಪನಾ ದಿನಾಚರಣೆ ಮತ್ತು ವಿದ್ಯಾರ್ಥಿ...
ಕ್ಯಾಪ್ಟನ್ ಸುಧೀರ್ .ಜಿ. ಅಮೀನ್ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಜು.30ರಂದು ಬೆಳಗ್ಗೆ 11.30 ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾರತೀಯ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್. ಜಿ.ಅಮೀನ್ ಭಾಗವಹಿಸಿ ಗೌರವ ಸ್ವೀಕರಿಸಲಿದ್ದಾರೆ.
ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ...
ಸೆಪ್ಟೆಂಬರ್ 6ರಿಂದ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಕರಾಟೆ
ಮಂಗಳೂರು: ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ ಸೆಪ್ಟೆಂಬರ್ 6ರಿಂದ 8 ರವರೆಗೆ ಆಯೋಜಿಸಲಾಗಿದೆ.
ಈ ಕುರಿತು ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕರಾಟೆ ಕ್ರೀಡಾಕೂಟದ ಸಂಘಟಕ ಡಾ. ರಾಹುಲ್ ಟಿ. ಜಿ ಸಭೆಯಲ್ಲಿ ಮಾತನಾಡಿ “ಶೌರ್ಯ ಅಂತರಾಷ್ಟ್ರೀಯ ಕರಾಟೆ...
ಕರಾವಳಿಯ ಟೆಂಪಲ್ ಟೂರಿಸಂಗೆ ಆದ್ಯತೆ ನೀಡಿ: ಶಾಸಕ ಕಾಮತ್ ಮನವಿ
ಬೆ೦ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ ಟೆಂಪಲ್ ಟೂರಿಸಂ ಬಗ್ಗೆಯೂ ವಿಶೇಷ ಗಮನ ಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಅಧಿವೇಶನದ ವೇಳೆ ಸರ್ಕಾರದ ಗಮನ ಸೆಳೆದರು.
ದೇಶದ ಪ್ರಸಿದ್ಧ ತೀರ್ಥಕ್ಷೇತ್ರಗಳಂತೆ ಕರಾವಳಿಯಲ್ಲೂ ಸುಪ್ರಸಿದ್ಧ ತೀರ್ಥಕ್ಷೇತ್ರಗಳಿವೆ. ಇಲ್ಲಿನ ದೈವ-ದೇವರುಗಳಿಗೆ ದೇಶ, ವಿದೇಶಗಳಲ್ಲೂ ಭಕ್ತರಿದ್ದಾರೆ. ಹೀಗಾಗಿ ಪ್ರತಿವರ್ಷ ಸಾವಿರಾರು ಭಕ್ತರು ರಸ್ತೆ, ಜಲ,...
ಐಟಿಐ, ಜಿಟಿಟಿಸಿ ಕೋರ್ಸುಗಳಿಗೆ ವಿದ್ಯಾರ್ಥಿಗಳನ್ನುಆಕರ್ಷಿಸಲು ಜಿ.ಪಂ. ಸಿಇಓ ಸೂಚನೆ
ಮಂಗಳೂರು: ಐಟಿಐ ಮತ್ತು ಜಿಟಿಟಿಸಿ ಕೋರ್ಸುಗಳನ್ನು ಕಲಿತವರಿಗೆ ಉದ್ಯೋಗದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಇದರತ್ತ ಆಕರ್ಷಿಸಲು ಒತ್ತು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಆನಂದ್ ಸೂಚಿಸಿದ್ದಾರೆ.
ಅವರು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು....







