ಡಿಪ್ಲೋಮಾ ಪ್ರವೇಶ: ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ನಲ್ಲಿ 2024-25ನೇ ಸಾಲಿನ ಅರೆಕಾಲಿಕ (ಪಾರ್ಟ್ ಟೈಮ್) ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್‍ಗಳಿಗೆ ಆಫ್-ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 17ರ ವರೆಗೆ ವಿಸ್ತರಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ...
ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ತ್ವರಿತ ಸಾಲ ಮಂಜೂರು : ಬ್ಯಾಂಕ್‍ಗಳಿಗೆ ಜಿ.ಪಂ ಸಿಇಓ ಸೂಚನೆ
ಮಂಗಳೂರು: ಸರಕಾರದ ವಿವಿಧ ಸಾಲ ಆಧಾರಿತ ಫಲಾನುಭವಿಗಳ ಯೋಜನೆಗಳ ಫಲಾನುಭವಿಗಳಿಗೆ ಬ್ಯಾಂಕುಗಳು ಸಾಲವನ್ನು ವಿಳಂಬವಿಲ್ಲದೆ ಮಂಜೂರು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ ಅವರು ಸೂಚಿಸಿದರು.
ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕುಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಯಂ ಉದ್ಯೋಗ, ಟ್ಯಾಕ್ಸಿ ಖರೀದಿ...
ಬಹರೈನ್ ಕನ್ನಡ ಸಂಘ : ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ
ಮಂಗಳೂರು: ಕರ್ನಾಟಕ ರಾಜ್ಯಪ್ರಶಸ್ತಿ ಪುರಸ್ಕೃತ ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶನಿಪೂಜೆಯು ಶ್ರೀ ಕ್ಷೇತ್ರ ಕದ್ರಿಯ ಅರ್ಚಕ ವೇ.ಮೂ. ಕೃಷ್ಣ ಅಡಿಗರ ಪೌರೋಹಿತ್ಯದಲ್ಲಿ ನೆರವೇರಿತು.ಇದೇ ಸಂದರ್ಭದಲ್ಲಿ ಅತಿಥಿ ಕಲಾವಿದರು ಹಾಗೂ ಸಂಘದ ಕಲಾವಿದರ ಕೂಡುವಿಕೆಯಲ್ಲಿ "ಶ್ರೀ ಶನೀಶ್ವರ ಮಹಾತ್ಮೆ" ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ...
ಕೆನರಾ ಹೈಸ್ಕೂಲ್ ಸಿ ಬಿಎಸ್‌ಸಿ ಶಾಲೆ: ಮಂತ್ರಿಮಂಡಲ ಹಾಗೂ ವಿವಿಧ ಸಂಘಗಳ ಪದಗ್ರಹಣ ಸಮಾರಂಭ
ಮಂಗಳೂರು : ನಗರದ ಕೆನರಾ ಹೈಸ್ಕೂಲ್ ಸಿ ಬಿಎಸ್‌ಸಿ ಶಾಲೆಯ ವಿದ್ಯಾರ್ಥಿ ಮಂತ್ರಿ ಮಂಡಲದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವು ಜೂ. 22 ರಂದು ಟಿ ವಿ ರಮಣ್ ಪೈ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಸಿಎ ಗಿರಿಧರ್ ಕಾಮತ್ ಅವರು, ಕಾರ್ಯಕ್ರಮವನ್ನು ಉದ್ದೇಶಿಸಿ...
ಔಷಧೀಯ ಗಿಡಗಳ ಸಂರಕ್ಷಣೆ ನಮ್ಮ ಹೊಣೆ:ಶೀನ ಶೆಟ್ಟಿ
ಮಂಗಳೂರು : ಪ್ರಕೃತಿಯ ಜತೆ ಮನುಷ್ಯನಿಗೆ ಅವಿನಾಭಾವ ಸಂಬಂಧ ಇದೆ. ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯನ್ನು ಗುಣ ಪಡಿಸುವ ಔಷಧೀಯ ಗಿಡಗಳು ಪ್ರಕೃತಿಯಲ್ಲಿದ್ದು, ಇಂತಹ ಅಮೂಲ್ಯ ಸಸ್ಯ ಸಂಪತ್ತನ್ನು ಸಂರಕ್ಷಿಸುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಶೀನ ಶೆಟ್ಟಿ ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಮಂಗಳೂರು ತಾಲೂಕು ಘಟಕದ ವತಿಯಿಂದ...
ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸಂಸ್ಮರಣಾ ದಿನ
ಮಂಗಳೂರು : ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರದ ದಕ್ಷಿಣದ ವತಿಯಿಂದ ನಗರದ ಅಟಲ್ ಸೇವಾ ಕೇಂದ್ರದಲ್ಲಿ ಜನಸಂಘದ ಸ್ಥಾಪಕಾಧ್ಯಕ್ಷ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸಂಸ್ಮರಣಾ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ರಾಷ್ಟ್ರೀಯ ವಿಚಾರಧಾರೆ ಹೊಂದಿರುವ ಭಾರತೀಯ ಜನಸಂಘವನ್ನು ಸ್ಥಾಪಿಸಿ ರಾಷ್ಟ್ರಾದ್ಯಂತ ಸಂಚರಿಸಿ ನಮ್ಮೆಲ್ಲರನ್ನೂ ಒಂದು ತತ್ವಸಿದ್ಧಾಂತದಡಿ...
ಶ್ರೀನಿವಾಸ ವಿಶ್ವವಿದ್ಯಾಲಯ : ಸಂಶೋಧನಾ ಸಮ್ಮೇಳನ
ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಸಂಶೋಧನೆ ಮತ್ತು ನಾವೀನ್ಯತೆ ಮಂಡಳಿಯು ಹೋಟೆಲ್ ಶ್ರೀನಿವಾಸ್‌ನಲ್ಲಿ ಜೂನ್ 22ರಂದು ಸಂಶೋಧನಾ ಕಾನ್ಕ್ಲೇವ್ ಅನ್ನು ಆಯೋಜಿಸಿತ್ತು.ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿಎ ಎ.ರಾಘವೇಂದ್ರರಾವ್, ಕಾರ್ಯಕ್ರಮದ ಉದ್ಘಾಟಿಸಿ,ದೇಶದ ಅಭಿವೃದ್ಧಿಗೆ ಸಹಕಾರಿಯಾಗುವುದರಿಂದ ಸಂಶೋಧನೆಯಲ್ಲಿ ಆಸಕ್ತಿ ತೋರಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು. .ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಮಾತನಾಡಿ ವೈಜ್ಞಾನಿಕ ಸಂಶೋಧನೆಗೆ ಭಾರತೀಯ...
ಜೂನ್ 29: ಸಿ.ಎಸ್.ಕೆ. ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ 30 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ
ಮ೦ಗಳೂರು: ಕ್ಯಾಥೋಲಿಕ್ ಎಸೋಸಿಯೇಶನ್ ಆಫ್ ಸೌತ್ ಕೆನರಾ (ಸಿ.ಎಸ್.ಕೆ) ಹಾಗೂ ಸಿ.ಎಸ್.ಕೆ ಸೆಂಟನರಿ ಟ್ರಸ್ಟ್ ಜಂಟಿಯಾಗಿ ನಡೆಸುವ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, 30 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ವಿದ್ಯಾಥಿ೯ವೇತನ ವಿತರಿಸಲಾಗುವುದು. ಈ ವಿದ್ಯಾರ್ಥಿವೇತನವನ್ನು ಯಾವುದೇ ಧರ್ಮ, ಭಾಷೆ, ಅಂಕ ಪರಿಗಣಿಸದೆ ಅಜಿ೯ದಾರರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ, ಮಂಜೂರು...
ಟೆನಿಸ್ ಆಟಗಾರ ಸುಮಿತ್ ನಾಗಲ್ – ಬ್ಯಾಂಕ್ ಆಫ್ ಬರೋಡಾದ ರಾಯಭಾರಿ
ಮ೦ಗಳೂರು: ಬ್ಯಾಂಕ್ ಆಫ್ ಬರೋಡಾ ಉದಯೋನ್ಮುಖ ಭಾರತೀಯ ಟೆನಿಸ್ ಆಟಗಾರ ಸುಮಿತ್ ನಾಗಲ್ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಮಾಡಿಕೊಂಡಿದೆ ಎಂದು ಘೋಷಿಸಿದೆ.
ಪ್ರತಿಭಾನ್ವಿತ ಭಾರತೀಯ ಕ್ರೀಡಾಪಟುಗಳನ್ನು ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿಯೇ ಬೆಂಬಲಿಸುವ ಬ್ಯಾಂಕಿನ ದೀರ್ಘಕಾಲದಸಂಪ್ರದಾಯವಾಗಿದೆ. ಭಾರತದ ಅಗ್ರ ಶ್ರೇಯಾಂಕದ ಏಕ ಟೆನಿಸ್ ಆಟಗಾರರಾಗಿರುವ ಸುಮಿತ್ ಇವರ ರಾಯಭಾರಿಯಿಂದ, ಹೊಸ ಪೀಳಿಗೆಯ ಉತ್ಪನ್ನಗಳೊಂದಿಗೆ ತನ್ನಗ್ರಾಹಕರನ್ನು...
ಯಕ್ಷಗಾನದಲ್ಲಿ ತೊಡಗಿಸಿಕೊಂಡಾಗ ಮನೋಬಲ ವೃದ್ದಿಯಾಗುತ್ತದೆ: ಕರುಣಾಕರ ಶೆಟ್ಟಿ ಮದ್ಯಗುತ್ತು
ಸುರತ್ಕಲ್: ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಯಕ್ಷಗಾನದಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳ ಮನೋಬಲ ವೃದ್ದಿಯಾಗುತ್ತದೆ ಎಂದು ಮುಂಬಯಿ ವಿ.ಕೆ ಸಮೂಹ ಸಂಸ್ಥೆಯ ಸಿ.ಎಂ.ಡಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ನುಡಿದರು.ಅವರು ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ( ರಿ) ಮಂಗಳೂರು ವತಿಯಿಂದ ಯಕ್ಷಧ್ರುವ...






