ಸುಳ್ಯ :ಮನೆಯ ಗೋಡೆಗಳಿಗೆ ಪೈಂಟಿಂಗ್ ಮಾಡುತ್ತಿದ್ದ ವ್ಯಕ್ತಿ ಮೇಲಿಂದ ಕಾಲು ಜಾರಿ ಬಿದ್ದು ಗಾಯಗೊಂಡು ಮೃತಪಟ್ಟ ಘಟನೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರ್ ನಲ್ಲಿ ಸ೦ಭವಿಸಿದೆ.ಅಬ್ದುಲ್ ಜಬ್ಬಾರ್ ಎನ್.ಎಂ (42)
ಮೃತಪಟ್ಟವರು.
ಜಾಲ್ಸೂರು ಗ್ರಾಮದ ಅಡ್ಕಾರ್ ನಿವಾಸಿ ಜಿ,ಪಿ ಅಬ್ದುಲ್ಲಾ ಕುಂಞ ರವರ ಮನೆಯ ಗೋಡೆಗಳಿಗೆ ಪೈಂಟಿಂಗ್ ಮಾಡಲು ಅಬ್ದುಲ್ ಜಬ್ಬಾರ್ ತನ್ನ ಸ್ನೇಹಿತರೊಂದಿಗೆ ಹೋಗಿದ್ದು, ಅಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಮೇಲಿಂದ ಬಿದ್ದು ಗಾಯಗೊಂಡರು. , ಅಲ್ಲೇ ಇದ್ದ ಆತನ ಸ್ನೇಹಿತರು ಹಾಗೂ ಮನೆಯ ಮಾಲಿಕ ಅಬ್ದುಲ್ಲಾ ಅವರು ಅಬ್ದುಲ್ ಜಬ್ಬಾರ್ ಅವರನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ,ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆ ನೀಡಿ ಅಬ್ದುಲ್ ಜಬ್ಬಾರ್ ನನ್ನು ಮನೆಗೆ ಕರೆದುಕೊಂಡು ಬಂದಿದ್ದು, ಮಾ. 8 ರಂದು ಸಂಜೆ ಅಬ್ದುಲ್ ಜಬ್ಬಾರ್ ನ ದೇಹವು ನಿಷ್ಕ್ರಿಯವಾಗಿರುವುದನ್ನು ಕಂಡು ಕೂಡಲೇ ಅಂಬ್ಯುಲೇನ್ಸ್ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿ ನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮನೆಯ ಮಾಲಕ ಜಿ.ಪಿ ಅಬ್ದುಲ್ಲಾರವರು ಯಾವುದೇ ಮುಂಜಾಗ್ರತೆ ಇಲ್ಲದೇ, ನಿರ್ಲಕ್ಷತನವಹಿಸಿ ಕೆಲಸ ಮಾಡಿಸಿರುವುದರಿಂದ ಅಬ್ದುಲ್ ಜಬ್ಬಾರ್ ರವರು ಬಿದ್ದು ಗಾಯಗೊಂಡು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ