27.4 C
Karnataka
Tuesday, November 19, 2024

ಚುನಾವಣಾ ಫಲಿತಾಂಶದ ಸಂಭ್ರಮವನ್ನು ಪಟಾಕಿಗಳನ್ನು ಸಿಡಿಸದ ಆಚರಿಸುವಂತೆ ಮನವಿ

ಮ೦ಗಳೂರು: ಈ ಬಾರಿಯ ಚುನಾವಣಾ ಫಲಿತಾಂಶದ ಸಂಭ್ರಮವನ್ನು, ಸಂಬಂಧಪಟ್ಟವರು ಪಟಾಕಿಗಳನ್ನು ಸಿಡಿಸದೇ ಆಚರಿಸುವಂತೆ ಮಾಡಲು, ತಾವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು “ಪರಿಸರಕ್ಕಾಗಿ ನಾವು ” ಸ೦ಘಟನೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಹಾಗೂ , ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಮನವಿ ಮಾಡಿದೆ.
ಜೂನ್ ಐದು “ವಿಶ್ವ ಪರಿಸರ” ದಿನವಾದ್ದರಿಂದ ಅಭ್ಯರ್ಥಿಗಳು, ಚುನಾವಣೆಯ ತಮ್ಮ ಗೆಲುವನ್ನು ಅವರ ಕ್ಷೇತ್ರದಲ್ಲಿ ಯೋಗ್ಯ ಮರವಾಗಬಲ್ಲ ಐದು ಸಸಿಗಳನ್ನು ನೆಟ್ಟು ಪೋಷಿಸುವುದರ ಮೂಲಕ ತಮ್ಮ ಸಂಭ್ರಮ ಹಂಚಿಕೊಳ್ಳಲಿ ಹಾಗೂ ಪರಿಸರ ಸಂರಕ್ಷಣೆಗೆ ಕೂಡ ನಾಂದಿ ಹಾಡಬಹುದು. ಹವಾಮಾನ ವೈಪ್ಯರೀತ್ಯ ಮತ್ತು ಭೂ ಬಿಸಿಯ ಬಿಸಿಯನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಕರ್ನಾಟಕದಾದ್ಯಂತ ನೀರಿನ ಬವಣೆಯನ್ನು ಕಂಡಿದ್ದೇವೆ.ಸಾರ್ವಜನಿಕರ ಸಹಕಾರ ಮತ್ತು ಸರ್ಕಾರದ ಆಡಳಿತ ಯಂತ್ರದಿಂದ ಮಾತ್ರ ಸರಕಾರ ಹಮ್ಮಿಕೊಂಡ ಪರಿಹಾರ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ‌ ಎ೦ದು ಮನವಿಯಲ್ಲಿ ಗಮನ ಸೆಳೆದಿದೆ.
ಜೂನ್ ನಾಲ್ಕರಂದು ಮತ ಎಣಿಕೆಯಾಗಿ, ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಹರ್ಷೋದ್ಗಾರವನ್ನು ವ್ಯಕ್ತಪಡಿಸುವುದು ಸಹಜ. ಈ ಸಂದರ್ಭದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದು ರೂಢಿಯಾಗಿದೆ. ಆದರೆ, ಪಟಾಕಿಯಲ್ಲಿರುವ ಸಿಡಿಮದ್ದುಗಳು, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ ನಂತಹ ಅನೇಕ ವಿಷರಾಸಾಯನಿಕಗಳನ್ನು ಹೊರಸೂಸುತ್ತವೆ. ಇವು ಮಾನವರಿಗೆ ಹಾನಿಕಾರಕವಷ್ಟೇ ಅಲ್ಲ, ಪರಿಸರ ಹಾಗೂ ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತವೆ. ಹಾಗಾಗಿ ಈ ಸಂದರ್ಭಗಳಲ್ಲಿ ನಾವು ಪಟಾಕಿ ಸಿಡಿಸದೇ ಸಂಭ್ರಮಿಸುವುದು ಉತ್ತಮ ವಿಧಾನ. , ಪಟಾಕಿಯನ್ನು ಸಿಡಿಸುವುದರಿಂದ ಉಂಟಾಗುವ ಪರಿಸರ ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವುದು ಅಗತ್ಯವೆಂದು, ನ್ಯಾಯಮೂರ್ತಿ ಬೋಪಣ್ಣನವರನ್ನು ಒಳಗೊಂಡ ಸುಪ್ರೀಮ್ ಕೋರ್ಟಿನ ನ್ಯಾಯಪೀಠ, ನವೆಂಬರ್ , ೨೦೨೩ ರಲ್ಲಿ ತೀರ್ಪು ನೀಡಿದೆ ಎ೦ದು ಸ೦ಘಟನೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles