26 C
Karnataka
Saturday, April 19, 2025

ಮಾ. 15 ರಂದು ಸುರತ್ಕಲ್ ನಲ್ಲಿ ಪಟ್ಲ ಫೌಂಡೇಶನ್ ಘಟಕದ ವಾರ್ಷಿಕೋತ್ಸವ

ಮ೦ಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ ಮಾ. 15 ರಂದು . ಸಂಜೆ 6.30 ಗಂಟೆಗೆ ಸುರತ್ಕಲ್ ಬಂಟರ ಭವನದ ವಠಾರದಲ್ಲಿ ನಡೆಯಲಿದೆ.
ಸಂಜೆ 7.30 ಕ್ಕೆ ನಡೆಯುವ ಕಾರ್ಯಕ್ರಮವನ್ನು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶಂಕರ ನಾರಾಯಣ ಭಟ್ ದೀಪ ಪ್ರಜ್ವಲನೆ ಗೈಯ್ಯದು ಉದ್ಘಾಟಿಸಲಿದ್ದಾರೆ. ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಮುಂಬೈ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಅಗರಿ ರಾಘವೇಂದ್ರ ರಾವ್, ಡಿ ಕೆ ಶೆಟ್ಟಿ ಸುರತ್ಕಲ್, ಮನೋಹರ ಶೆಟ್ಟಿ ಸೂರಿಂಜೆ, ಜಗಧೀಶ ಶೆಟ್ಟಿ ಪೆರ್ಮುದೆ, ಶ್ರೀಕಾಂತ್ ಕಾಮತ್ ಭಾಗವಹಿಸಲಿದ್ದಾರೆ.


ಪುತ್ತಿಗೆ ರಘುರಾಮ ಹೊಳ್ಳರಿಗೆ ಗೌರವಾರ್ಪಣೆ ನಡೆಯಲಿದೆ. ಸಮಾರಂಭದಲ್ಲಿ ಶಂಕರ ನಾರಾಯಣ ಮೈರ್ಪಾಡಿ, ಶ್ರೀಧರ ಶೆಟ್ಟಿ ಕೊಕ್ಕಾರುಗುತ್ತು ಪೆರ್ಮುದೆ, ಜಗಧೀಶ್ ಆಚಾರ್ಯ ಜೋಕಟ್ಟೆ, ಕೃಷ್ಣಪ್ಪ ಪೂಜಾರಿ ಬೊಟ್ಟಿಕೆರೆ, ಜರ್ನಾಧನ ಡಿ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಗುವುದು. ಸಂಜೆ 6.30 ರಿಂದ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಮಹಿಳಾ ಘಟಕದ ವಾರ್ಷಿಕೋತ್ಸವ
ಅದೇ ದಿನ ಸಂಜೆ 4 ಗಂಟೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಮಹಿಳಾ ಘಟಕದ 8 ನೇ ವಾರ್ಷಿಕೋತ್ಸವ ನಡೆಯಲಿದೆ.ಶಕುಂತಳಾ ರಮಾನಂದ ಭಟ್, ಚಂದ್ರಕಲಾ ಬಾಲಕೃಷ್ಣ ಶೆಟ್ಟಿ, ಭಾರತಿ ಗಂಗಾಧರ್, ಮಮತಾ ಹೆಗ್ಡೆ, ಸತ್ಯವತಿ ಡಿ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಂಜೆ 4.15 ರಿಂದ ಮಹಿಳಾ ಕಲಾವಿದೆಯರಿಂದ ದಶಾವತಾರ ಯಕ್ಷರೂಪಕ ನಡೆಯಲಿದೆ.
ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಭಾ ಎಲ್ ಸಾಮಗ ವಹಿಸಲಿದ್ದಾರೆ. ಪಟ್ಲ ಸತೀಶ್ ಶೆಟ್ಟಿ, ಪೂರ್ಣಿಮಾ ಯತೀಶ್ ರೈ, ಆರತಿ ಆಳ್ವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಶೋಕ್ ಶೆಟ್ಟಿ ತಡಂಬೈಲ್, ಪದ್ಮಪ್ರಸಾದ್ ಜೈನ್ , ದೀಪಕ್ ಶೆಟ್ಟಿ ಲಿಂಗಮಾರು ಗುತ್ತು, ವಿದ್ಯಾ ರಾಕೇಶ್, ಪೂರ್ಣಿಮಾ ಪ್ರಭಾಕರ್ ರಾವ್ ಪೇಜಾವರ, ಸುಜಾತ ಧನಂಜಯ ಶೆಟ್ಟಿ ಹೊಸಬೆಟ್ಟು, ಚೈತ್ರಾ ಶೆಟ್ಟಿ ಭಾಹವಹಿಸಲಿದ್ದಾರೆ.
ಸಮಾರಂಭದಲ್ಲಿ ಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ, ಜ್ಯೋತಿ ಸುನೀಲ್ ಶೆಟ್ಟಿ ಕಾರ್ಕಳ ಇವರನ್ನು ಸನ್ಮಾನಿಸಲಾಗುವುದು. ಚೈತ್ರಾ ಎಚ್ ರಾವ್, ವೈಷ್ಣವಿ ಸಾತ್ವಿಕ್ ರಾವ್, ಮೈತ್ರಿ ಭಟ್ ಮವ್ವಾರು ಅವರಿಗೆ ಯಕ್ಷಧ್ರುವ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles