17.5 C
Karnataka
Friday, November 22, 2024

ಪಿಂಚಣಿ ಯೋಜನೆ: ದ.ಕ. ಜಿಲ್ಲೆಯಲ್ಲಿ 1.77 ಲಕ್ಷ ಫಲಾನುಭವಿಗಳು

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳ ಮೂಲಕ ಪ್ರತಿ ತಿಂಗಳು 177026 ಫಲಾನುಭವಿಗಳು ಹಣಕಾಸು ನೆರವು ಪಡೆದು ಆರ್ಥಿಕ ಭದ್ರತೆ ಹೊಂದಿರುತ್ತಾರೆ. ದುರ್ಬಲರಿಗೆ ಆಶಾಕಿರಣವಾಗಿರುವ ವಿವಿಧ ಪಿಂಚಣಿ ಯೋಜನೆಗಳಿಂದ ಬಹಳಷ್ಟು ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ವಿಕಲಚೇತನರಿಗೆ ಸೇರಿದಂತೆ ಸಮಾಜದ ವಿವಿಧ ದುರ್ಬಲರಿಗೆ ಆಸರೆಯಾಗುವ ಹಲವಾರು ಪಿಂಚಣಿ ಯೋಜನೆಗಳು ಜಾರಿಗೆ ತಂದಿದೆ.
ಸಾಮಾಜಿಕ ಭದ್ರತಾ ಯೋಜನೆಗಳು ಎಂದು ಕರೆಯಲ್ಪಡುವ ಈ ಪಿಂಚಣಿ ಯೋಜನೆಗಳ ಮೂಲಕ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣಕಾಸು ನೆರವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
.ವೃದ್ದಾಪ್ಯ ವೇತನ: ಬಿಪಿಎಲ್ ಕುಟುಂಬಕ್ಕೆ ಸೇರಿದ 60 ರಿಂದ 64 ವರ್ಷದೊಳಗಿನ ಮಹಿಳೆ ಅಥವಾ ಪುರುಷರು ರೂ. 600 ಹಾಗೂ 65 ವರ್ಷ ಮೇಲ್ಪಟ್ಟವರಿಗೆ ರೂ. 1200 ಮಾಸಿಕ ಪಿಂಚಣಿ ಪಡೆಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 37231 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆವಿಧವಾ ವೇತನ: ಪತಿ ಮರಣ ಹೊಂದಿದ 18 ರಿಂದ 64 ವರ್ಷದÀ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಪತಿಯ ಮರಣ ಪ್ರಮಾಣ ಪತ್ರ ಹಾಗೂ ದಾಖಲೆಗಳ ಆಧಾರದ ಮೇಲೆ ಮಾಸಿಕ ರೂ.800 ದೊರೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 49062 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.ಅಂಗವಿಕಲ ವೇತನ: ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಗೆ ತರಲು ಈ ಮಾಶಾಸನ ಯೋಜನೆ ಜಾರಿಗೆ ತರಲಾಗಿದೆ. ಅಂಗವೈಕಲತೆಯೊಂದಿಗೆ ಹುಟ್ಟಿದ ಮಗು ಮತ್ತು ಅಪಘಾತದಿಂದ ಅಂಗವಿಕಲತೆ ಉಳ್ಳ ವಾರ್ಷಿಕ ಆದಾಯ ಮಿತಿ ರೂ. 32 ಸಾವಿರದ ಒಳಗಡೆ ಇರುವವರಿಗೆ, ಮಂದದೃಷ್ಟಿ, ಕುಷ್ಟರೋಗ, ಶ್ರವಣದೋಷ, ಚಲನವಲನ ಅಂಗವಿಕಲತೆ, ಬುದ್ಧಿಮಾಂದ್ಯತೆ, ಮಾನಸಿಕ ಅಸ್ವಸ್ಥತೆ ಉಳ್ಳವರಿಗೆ ಈ ವೇತನ ದೊರಕಲಿದೆ. ಶೇಕಡ 40ರಷ್ಟು ವಿಕಲಚೇತನ ಇರುವವರಿಗೆ ರೂ 800 ಹಾಗೂ ಶೇಕಡ 75ಕ್ಕಿಂತ ಮೇಲ್ಪಟ್ಟು ಅಪಘಾತದಿಂದ ಅಂಗವಿಕಲತೆ ಉಳ್ಳವರಿಗೆ ರೂ. 1.400 ಪಿಂಚಣಿ ಮತ್ತು ಮನೋವೈಕಲ್ಯತೆ ಉಳ್ಳವರಿಗೆ ರೂ. 2,000 ಮಾಸಿಕ ಪಿಂಚಣಿ ದೊರೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17751 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಸಂಧ್ಯಾ ಸುರಕ್ಷಾ ವೇತನ: 65 ವರ್ಷ ಮೇಲ್ಪಟ್ಟ ಹಿರಿಯ ವಯಸ್ಸಿನ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ರೂ.1,200 ಪಿಂಚಣಿ ದೊರೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 62907 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಮನಸ್ವಿನಿ ವೇತನ: ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆಗೆ ಸಹಾಯ ಮಾಡುವ ಉದ್ದೇಶದಿಂದ ಬಡತನ ರೇಖೆಗಿಂತ ಕೆಳಗಿರುವ 40 ರಿಂದ 59 ವರ್ಷದೊಳಗಿನ ಮಹಿಳೆಗೆ ಮಾಸಿಕ ರೂ. 800 ದೊರೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6228 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಮೈತ್ರಿ ವೇತನ: 25 ರಿಂದ 64 ವರ್ಷದೊಳಗಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ ಪಿಂಚಣಿ ರೂ. 800 ಪ್ರತೀ ತಿಂಗಳು ದೊರಕಲಿದೆ. ಈ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಜಿದಾರರು ಸಮುದಾಯ ಆಧಾರಿತ ಸಂಸ್ಥೆಗಳಾದ ಸಂಗಮ ಮತ್ತು ಕೆಎಸ್‍ಎಂಎಫ್ ಸಂಸ್ಥೆಗಳು ನೊಂದಾಯಿತ ಸದಸ್ಯತ್ವವನ್ನು ಅಫಿಡವಿತ್ ಮೂಲಕ ಪ್ರಮಾಣಿಕರಿಸಿರಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

  1. ಎಂಡೋಸಲ್ಫಾನ್ ವೇತನ: ಎಂಡೋಸಲ್ಫಾನ್ ಕೀಟನಾಶಕ ಸಿಂಪಡಣೆಯಿಂದ ಅಂಗವಿಕಲತೆ ಪ್ರಮಾಣ ಶೇಕಡಾ 25 ರಿಂದ 59ರ ವರೆಗೆ ಹೊಂದಿದ್ದ ಸಂತ್ರಸ್ತರಿಗೆ ಮಾಸಿಕ ರೂ. 2000 ಮತ್ತು ಶೇಕಡಾ 60ಕ್ಕಿಂತ ಮೇಲ್ಪಟ್ಟ ಅಂಗವಿಕಲತೆಗೆ ರೂ.4000 ಪಿಂಚಣಿ ದೊರಕುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3808 ಫಲಾನುಭವಿಗಳು ಇದರ ಪ್ರಯೋಜನೆ ಪಡೆಯುತ್ತಿದ್ದಾರೆ
    ಮೃತ ರೈತರ ಪತ್ನಿಗೆ ವಿಧವಾ ವೇತನ: ಬೆಳೆಹಾನಿ, ಸಾಲಬಾಧೆ, ಬೆಲೆಕುಸಿತ ಇತ್ಯಾದಿ ಕಾರಣಗಳಿಂದ ಸಂಕಷ್ಟಕ್ಕೊಳಗಾದ ಹಲವಾರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಇಂತಹ ರೈತ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಪರಿಹಾರ ನೀಡಲು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಮೃತರಾದ ರೈತರ ಪತ್ನಿಗೆ ಮಾಸಿಕ ರೂ. 2000 ಪಿಂಚಣಿ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28 ಫಲಾನುಭವಿಗಳು ಇದರ ಪ್ರಯೋಜನೆ ಪಡೆಯುತ್ತಿದ್ದಾರೆ.
    ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರಿಗೆ ಮಾಸಾಶನ: ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಸುರಕ್ಷಾ ಯೋಜನೆಯಡಿ ಆರ್ಥಿಕ ಭದ್ರತೆ ಒದಗಿಸಲು ಮಾಸಿಕ ರೂ. 10,000 ಮೊತ್ತ ಮಾಸಾಶನ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಫಲಾನುಭವಿಗಳು ಇದರ ಪ್ರಯೋಜನೆ ಪಡೆಯುತ್ತಿದ್ದಾರೆ.
    ದಕ್ಷಿಣ ಕನ್ನಡ ಎಲ್ಲ ಪಿಂಚಣಿ ಯೋಜನೆಗಳ ಮೊತ್ತವನ್ನು ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ಪಿಂಚಣಿ ಜಮಾ ಆಗುತ್ತದೆ. ಪಿಂಚಣಿ ದೊರಕಲು ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿ 2023 ಜೂನ್ 1ರವರೆಗೆ ಸುಮಾರು 18577 ಮಂದಿ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವುದು, ಬ್ಯಾಂಕ್‍ಗೆ ಕೆವೈಸಿ ನೀಡದಿರುವುದು ಮತ್ತಿತರ ಸಮಸ್ಯೆಗಳಿಂದಾಗಿ ಪಿಂಚಣಿ ಜಮೆಯಾಗಲು ತೊಂದರೆ ಆಗುತ್ತಿತ್ತು.
    ಕಂದಾಯ ಇಲಾಖೆಯು ಈ ಸಮಸ್ಯೆಯನ್ನು ಅಭಿಯಾನದ ಮೂಲಕ ಸರಿಪಡಿಸುತ್ತಿದೆ. ಈ ನಿಟ್ಟಿನಲ್ಲಿ ಆಯಾ ಗ್ರಾಮಕರಣಿಕರು ಫಲಾನುಭವಿಗಳ ಮನೆ ಮನೆಗೆ ತೆರಳಿ ಅವರ ಬ್ಯಾಂಕ್ ಖಾತೆಗಳನ್ನು ಆಧಾರ್‍ಗೆ ಜೋಡಿಸಲು ಮತ್ತು ಕೆವೈಸಿ ಅಪ್‍ಡೇಟ್ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಪಿಂಚಣಿ ಫಲಾನುಭವಿಗಳಿಗೆ ಸಕಾಲದಲ್ಲಿ ಪಿಂಚಣಿ ದೊರಕಲಿದ್ದು, ಪ್ರಸ್ತುತ 1534 ಮಂದಿ ಆಧಾರ್ ಜೋಡಣೆ ಬಾಕಿ ಇದೆ ಶೀಘ್ರದಲ್ಲಿ ಇದು ಶೂನ್ಯಕ್ಕೆ ಬರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles