26.5 C
Karnataka
Wednesday, January 8, 2025

ಪೆಟ್ಟಿಸ್ಟ್ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ

ಮಂಗಳೂರು: ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ ಮತ್ತು ಯುವ ದಸರಾ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸ್ಯಾಂಡೀಸ್ ಕಂಪನಿ ಯ 3ನೇ ತುಳು ಚಲನಚಿತ್ರ “ಪೆಟ್ಟಿಸ್ಟ್” ನ ಪ್ರಪ್ರಥಮ ಬಾರಿಗೆ ವಿಭಿನ್ನ ಶೈಲಿಯ ಮೋಶನ್ ಟೈಟಲ್ ಪೋಸ್ಟರ್ ನ್ನು ಶಾಸಕ ಉಮಾನಾಥ ಎ ಕೋಟ್ಯಾನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.
ಕನ್ನಡ ಚಿತ್ರರಂಗದಲ್ಲಿ ಡಿಸೈನರ್ ಆಗಿ ತನ್ನ ಚಾಪನ್ನು ಮೂಡಿಸಿರುವ ಜೊತೆಗೆ ಹಲವಾರು ಕನ್ನಡ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ದೇವಿ ರೈ ಅವರು ಪೆಟ್ಟಿಸ್ಟ್ ಚಿತ್ರಕ್ಕೆ ನಿರ್ದೇಶಕರಾಗಿರುತ್ತಾರೆ. ಕನ್ನಡ ತುಳು ಮಲಯಾಳಂ ಚಿತ್ರರಂಗದಲ್ಲಿ ಕ್ಯಾಮರಾ ಕೈಚಳಕ ತೋರಿಸಿರುವ ಉದಯ್ ಬಳ್ಳಾಲ್ ಇವರು ಕ್ಯಾಮರಾ ಮ್ಯಾನ್ ಆಗಿದ್ದಾರೆ. ಸಂದೇಶ್ ರಾಜ್ ಬಂಗೇರ, ಸೂರಜ್ ಕುಮಾರ್ ಕಲ್ಯ, ಸದಾನಂದ ಪೂಜಾರಿ, ಶಶಿಕಾಂತ್ ಕರ್ಕೇರಾ, ಸಂತೋಷ್ ಪೂಜಾರಿ ಬಂಡವಾಳ ಹೂಡಲಿದ್ದಾರೆ. ಲಾಯ್ ವ್ಯಾಲೆಂಟೈನ್ ಸಲ್ದಾನ ಇವರ ಸಂಗೀತ ಈ ಚಿತ್ರಕ್ಕೆದೆ. ಈಗಾಗಲೇ ನಟ ನಟಿಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಜನವರಿಯಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.
ನಿರ್ದೇಶಕ ದೇವಿ ರೈ ಅವರು ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿದ್ದಾರೆ. ಜನವರಿ ತಿಂಗಳಲ್ಲಿ 35 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ತುಳು ಮತ್ತು ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರು ಅಭಿನಯಿಸಲಿದ್ದಾರೆ. ಮಂಗಳೂರು, ವಾಮಂಜೂರು ಬಜಪೆ ಮೊದಲಾದೆಡೆ ಚಿತ್ರೀಕರಣ ನಡೆಯಲಿದೆ.
2025 ಆಗೊಸ್ಟ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಹಾಸ್ಯ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಉತ್ತಮ ಕತೆಯನ್ನು ಒಳಗೊಂಡ ಸಿನಿಮಾ ತುಳು ಚಿತ್ರರಂಗದಲ್ಲಿ ಒಂದು ವಿಭಿನ್ನ ಬಗೆಯ ಚಿತ್ರವಾಗಿ ಮೂಡಿ ಬರಲಿದೆ ಎಂದು ಯುವ ನಿರ್ಮಾಪಕ ಸಂದೇಶ್ ರಾಜ್ ಬಂಗೇರ ತಿಳಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles