ಮ೦ಗಳೂರು: ಉಡುಗೊರೆ ಪ್ರಕಾಶನ ಪ್ರಕಟಿಸಿದ ಕವಯಿತ್ರಿ ಫಾತಿಮಾ ರಲಿಯಾ ಅವರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನವನ್ನು ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆಯವರು ಬಿಡುಗಡೆಗೊಳಿಸಿದರು.
ಈ ದೇಶವನ್ನು ಮುಸ್ಲಿಮರು 600 ವರ್ಷಗಳ ಕಾಲ ಆಳಿದ್ದಾರೆ. ಅವರು ಮರಣವಪ್ಪಿದ್ದು ಕೂಡಾ ಇಲ್ಲೇ. ಹಾಗಾಗಿ ಅವರು ದೋಚಲಿಲ್ಲ. ಈ ದೇಶದ ಹಿಂದುಗಳು ಶೇಕಡಾ 24ರಷ್ಟು ಹಿಂದುಳಿದಿದ್ದರೆ ಮುಸ್ಲಿಮರು ಶೇ.38ರಷ್ಟು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರು ದೋಚಿದ್ದರೆ ಹಿಂದುಗಳಿಗಿಂತ ಶ್ರೀಮಂತರಾಗಬೇಕಿತ್ತು. ಈ ಕಹಿಸತ್ಯವನ್ನು ಜಗತ್ತಿಗೆ ತಿಳಿಸುವುದಕ್ಕಾಗಿಯಾದರೂ ಮುಸ್ಲಿಮರು ಬರವಣಿಗೆಯಲ್ಲಿ ಸಕ್ರಿಯವಾಗಬೇಕು ಎಂದು ಡಾ. ಪುರುಷೋತ್ತಮ ಬಿಳಿಮಲೆಯವರು ಅಭಿಪ್ರಾಯಪಟ್ಟರು.
ಕಥೆಗಾರ್ತಿ ಸುಧಾ ಆಡುಕಳ ಕೃತಿಯನ್ನು ಪರಿಚಯಿಸಿದರು. ಕವಯಿತ್ರಿ ಫಾತಿಮಾ ರಲಿಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೇಖಕಿ ಉಮೈರತ್ ಕುಮೇರು ಸ್ವಾಗತಿಸಿದರು. ಕವಿ ವಿಲ್ಸನ್ ಕಟೀಲ್ ಮುಖ್ಯ ಅತಿಥಿಗಳಾಗಿದ್ದರು, ಪತ್ರಕರ್ತ ಮುಆದ್ ಜಿ.ಎಂ ಕವನ ವಾಚಿಸಿದರು. ಎಚ್.ಎಂ ಪೆರ್ನಾಳ್ ನಿರೂಪಿಸಿದರು.