29 C
Karnataka
Friday, April 18, 2025

ಆಸ್ಪತ್ರೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 30 ಹಾಸಿಗೆಗಿಂತ ಹೆಚ್ಚಿರುವ ಆಸ್ಪತ್ರೆಗಳು ನಿಯಾಮಾನುಸಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 1974 ರ ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1981 ರ ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಸ್ಥಾಪನ ಸಮ್ಮತಿ/ ಚಾಲನಾ ಸಮ್ಮತಿ ಪತ್ರ ಮತ್ತು ಜೀವ ವೈದ್ಯಕೀಯ ತ್ಯಾಜ್ಯ ಕಾಯ್ದೆ 2016 ರಡಿಯಲ್ಲಿ ಅಧಿಕಾರ ಪತ್ರ ಪಡೆಯುವುದು ಕಡ್ಡಾಯವಾಗಿದೆ.

30 ಹಾಸಿಗೆಗಿಂತ ಕಡಿಮೆ ಹಾಗೂ ಹಾಸಿಗೆ ರಹಿತ ಆಸ್ಪತ್ರೆಗಳು ನಿಯಾಮಾನುಸಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜೀವ ವೈದ್ಯಕೀಯ ತ್ಯಾಜ್ಯ ಕಾಯ್ದೆ 2016 ರಡಿಯಲ್ಲಿ ಶ್ವೇತವರ್ಣದಡಿಯಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ಅಧಿಕಾರ ಪತ್ರ ((Bio Medical Waste Authorization) ¥) ಪಡೆಯುವುದು ಹಾಗೂ ಕಡ್ಡಾಯವಾಗಿದೆ.

ಈ ಹಿನ್ನಲೆಯಲ್ಲಿ ಮಂಡಳಿಯಿಂದ ಸ್ಥಾಪನ ಸಮ್ಮತಿ/ ಚಾಲನಾ ಸಮ್ಮತಿ ಪತ್ರ/ಅಧಿಕಾರ ಪತ್ರ ಪಡೆದು ನವೀಕರಣ ಗೊಳಿಸದೇ ಹಾಗೂ ಪಡೆಯದೇ ಕಾರ್ಯ ನಿರ್ವಹಿಸುತ್ತಿರುವವರಿಗೆ ಮಂಡಳಿಯಿಂದ ಸ್ಥಾಪನ ಸಮ್ಮತಿ/ ಚಾಲನಾ ಸಮ್ಮತಿ ಪತ್ರ/ಅಧಿಕಾರ ಪತ್ರ ಪಡೆದು ಕಾರ್ಯನಿರ್ವಹಿಸುತ್ತಿರುವಂತೆ ಈ ಮೂಲಕ ಸೂಚಿಸಲಾಗಿದೆ. ತಪ್ಪಿದಲ್ಲಿ ಮಂಡಳಿಯು ಅನ್ವಯವಾಗುವ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೈಕಂಪಾಡಿ ಕೈಗಾರಿಕಾ ಪ್ರದೇಶ ಮಂಗಳೂರು (ದೂರವಾಣಿ ಸಂಖ್ಯೆ: 2408239) ಸಂಪರ್ಕಿಸುವಂತೆ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles