22.8 C
Karnataka
Wednesday, November 13, 2024

ಎಂ.ಆರ್.ಪೂವಮ್ಮಗೆ ಪ್ರೆಸ್ ಕ್ಲಬ್ ಗೌರವ ಸಮ್ಮಾನ

ಮಂಗಳೂರು: ಒಲಿಂಪಿಕ್ ಕ್ರೀಡೆಯಲ್ಲಿ ಮೂರು ಬಾರಿ ದೇಶವನ್ನು ಪ್ರತಿನಿಧಿಸಿರುವ ಹೆಮ್ಮೆಯ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರಿಗೆ ಗೌರವ ಸಮ್ಮಾನ ಕಾರ್ಯಕ್ರಮ ಶನಿವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ರೇಷ್ಮಾ ಉಳ್ಳಾಲ್ ಅವರು, “ಒಲಿಂಪಿಕ್ ನಲ್ಲಿ ಪಾಲ್ಗೊಳ್ಳುವುದೇ ಒಂದು ದೊಡ್ಡ ಸಾಧನೆ. ಈ ಬಾರಿ ಪದಕ ವಿಜೇತರಷ್ಟೇ ಕುಸ್ತಿಪಟು ವಿನೇಶ್ ಪೊಗಟ್ ಅವರ ಸಾಧನೆಯೂ ಗಮನಾರ್ಹವಾದುದು. ಎಂ.ಆರ್. ಪೂವಮ್ಮ ಅವರ ಕ್ರೀಡಾ ಜೀವನದ ಕುರಿತು ನಾವೆಲ್ಲರೂ ಅರಿತುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಎಳವೆಯಲ್ಲೇ ಕ್ರೀಡಾಸ್ಫೂರ್ತಿಯನ್ನು ಹೊಂದಿರಬೇಕು“ ಎಂದರು.

ಬಳಿಕ ಮಾತಾಡಿದ ಎಂ.ಆರ್. ಪೂವಮ್ಮ ಅವರು, “ನಾನು ಆರನೇ ಕ್ಲಾಸ್ ನಲ್ಲಿದ್ದಾಗಲೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದೆ. ಎಲ್ಲ ಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದೆ. ನನ್ನ ತಂದೆ ಬಜ್ಪೆ ಏರ್ ಪೋರ್ಟ್ ನಲ್ಲಿ ಉದ್ಯೋಗದಲ್ಲಿದ್ದ ಕಾರಣ ನನಗೆ ಅಲ್ಲಿ ಗ್ರೌಂಡ್ ಸಾಕಾಗುತ್ತಿರಲಿಲ್ಲ. ಹೀಗಾಗಿ ನನ್ನ ತಂದೆ ಮನೆಯನ್ನು ಮಂಗಳೂರಿಗೆ ಶಿಫ್ಟ್ ಮಾಡಿದ್ರು. ನಾನು ಏನೇ ಸಾಧನೆ ಮಾಡಿದ್ರು ಅದರಲ್ಲಿ ನನ್ನ ಮನೆಯವರ ಶ್ರಮ ಅಧಿಕವಾದದ್ದು. ಈಗ ನನ್ನ ಪತಿ ನನಗೆ ಸಹಕಾರ ನೀಡುತ್ತಿದ್ದಾರೆ. ತರಬೇತಿಯಿಂದ ಹಿಡಿದು ಮನೆಗೆಲಸ ಮಾಡುವವರೆಗೆ ನನ್ನ ಪತಿ ನನ್ನ ಬೆಂಬಲಕ್ಕಿದ್ದಾರೆ. ನನಗೀಗ 34 ವರ್ಷ ವಯಸ್ಸು, ನನಗೆ ಕ್ರೀಡೆಯನ್ನು ಈಗಲೇ ಬಿಡಲು ಮನಸ್ಸಿಲ್ಲ. ನಾನು ಮುಂದಿನ ಪೀಳಿಗೆಯ ಮಕ್ಕಳಿಗೂ ಮಾದರಿಯಾಗಬೇಕು” ಎಂದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಇಬ್ರಾಹಿಂ ಅಡ್ಕಸ್ಥಳ ಮತ್ತಿತರರು ಉಪಸ್ಥಿತರಿದ್ದರು.ಪಿ.ಬಿ. ಹರೀಶ್ ರೈ ಪ್ರಾಸ್ತಾವಿಕ ಮಾತನ್ನಾಡಿದರು. ಆರ್.ಸಿ. ಭಟ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles