ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಕುಳಮರ್ವ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರಾಮಕೃಷ್ಣ ಭಟ್ ಬದನಾಜೆ, ವಿಶ್ವೇಶ್ವರ ಭಟ್ ಉಂಡೆಮನೆ , ಕಾರ್ಯದರ್ಶಿಯಾಗಿಸುಭಾಷಿಣಿ, ಜತೆ ಕಾರ್ಯದರ್ಶಿಗಳಾಗಿ ವಿನುತಾ ರಜತ್ ಗೌಡ, ಸಂತೋಷಿಣಿ, ಕೋಶಾಧಿಕಾರಿಯಾಗಿ ಕೇಶವ ಭಟ್ ಅತ್ತಾಜೆ, ಸಮಿತಿ ಸದಸ್ಯರಾಗಿ ಗುರುನಾಥ್ ಪ್ರಭು , ಭಾರತಿ ಕಾಪಿನಡ್ಕ , ಸುಂದರಿ , ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಶಾ ಅಡೂರು , ಕಾರ್ಯದರ್ಶಿಯಾಗಿ ಮೇಘನಾ ಪ್ರಶಾಂತ್, ಜತೆ ಕಾರ್ಯದರ್ಶಿಯಾಗಿ ವನಜಾ ಜೋಷಿ ,ಕೋಶಾಧಿಕಾರಿಯಾಗಿ ನಯನಾ ಟಿ. ಹಾಗೂ ಅಶ್ವಿಜ ಶ್ರೀಧರ್ (ಸಾಹಿತ್ಯ ಕೂಟ ಪ್ರಮುಖ್), ವನಿತಾ ವಿ. ಶೆಟ್ಟಿ (ಮಹಿಳಾ ಪ್ರಕಾರ ಪ್ರಮುಖ್ ), ಮೇಧಾ (ಮಕ್ಕಳ ಪ್ರಕಾರ ಪ್ರಮುಖ್ ), ಮಹಾಬಲ ಗೌಡ (ವಿದ್ಯಾರ್ಥಿ ಪ್ರಕಾರ ಪ್ರಮುಖ್), ಶ್ರೀನಿವಾಸ್ ತಂತ್ರಿ (ಮಾಧ್ಯಮ ಪ್ರಮುಖ್) ಆಯ್ಕೆಯಾಗಿದ್ದಾರೆ.
