26.3 C
Karnataka
Saturday, November 23, 2024

ʻಸಾಹಿತ್ಯದ ಮೂಲಕವೂ ಪ್ರತಿಭಟನೆ ವ್ಯಕ್ತಪಡಿಸಬಹುದುʼ : ಮೆಲ್ವಿನ್ ಪಿಂಟೊ ನೀರುಡೆ

ಮ೦ಗಳೂರು: ನಾವು ನೇರವಾಗಿ ಹೇಳಲಾಗದುದನ್ನು ಸಾಹಿತ್ಯದ ಮೂಲಕ ಹೇಳಿ ಅನ್ಯಾಯದ ವಿರುದ್ದ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಬಹುದುʼ ಎಂದು ಕೊಂಕಣಿಯ ಪ್ರಮುಖ ಸಮಕಾಲೀನ ಕಥೆಗಾರ ಮೆಲ್ವಿನ್ ಪಿಂಟೊ ನೀರುಡೆ ಹೇಳಿದರು. ಅವರು ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಆರಂಭಿಸಿರುವ ʻಬೋಲ್ಕಾಂವ್ʼ ಮಾಸಿಕ ಸಾಹಿತ್ಯಾವಲೋಕನದ ಮೊದಲ ಸಭೆಯಲ್ಲಿಸಣ್ಣ ಕಥೆಗಳು ಮತ್ತು ನಾನುʼ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.

“ಅರುಂಧತಿ ರಾಯ್ ಅವರು ತಮ್ಮ ಎರಡನೇ ಕಾದಂಬರಿ ʻದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್ʼನಲ್ಲಿ ಸಾಹಿತ್ಯದ ವ್ಯಾಪ್ತಿಯಲ್ಲೇ ನಿಂತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದಾರೆ. ಚಾ. ಫ್ರಾ. ದೆಕೊಸ್ತಾರವರು ತನ್ನ ನಾಟಕಗಳಲ್ಲಿ, ಕವಿತೆಗಳಲ್ಲಿ ಈ ಪ್ರಯತ್ನವನ್ನು ಮಾಡಿದ್ದಾರೆ. ದಲಿತ ಸಾಹಿತ್ಯದಲ್ಲೂ ನಾವು ಇದನ್ನು ಕಾಣುತ್ತೇವೆ. ನನ್ನ ಪ್ರಕಾರ ಇಂದಿನ ಸಂದರ್ಭದಲ್ಲಿ ಸಾಹಿತ್ಯಕ್ಕೆ ಬಹಳ ಮಹತ್ವವಿದೆ ಎ೦ದರು.

ಕಾರ್ಯಕ್ರಮವನ್ನು ಸಂತ ಅಲೋಶಿಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂ| ಡಾ| ಪ್ರವೀಣ್ ಮಾರ್ಟಿಸ್ ಅಬ್ಬಲ್ಲಿಗೆ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬೊಲ್ಕಾಂವ್ಉದ್ಘಾಟಿಸಿದ ವಂ| ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ ʻ 144 ವರ್ಷಗಳ ಹಿಂದೆ ಸಂತ ಅಲೋಶಿಯಸ್ ಕಾಲೇಜು ಸ್ಥಾಪನೆಯಾದಾಗಿನಿಂದ ಕೊಂಕಣಿ ಭಾಷೆ ಮತ್ತು ವಿವಿಧ ಭಾಷಾ ಚಟುವಟಿಕೆಗಳನ್ನು ಜೆಸ್ಯೂಟ್ ಧರ್ಮಗುರುಗಳು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ.ಬೊಲ್ಕಾಂವ್` ಮಾಸಿಕ ಸಾಹಿತ್ಯ ಮಂಚದ ಮೂಲಕ ಕೊಂಕಣಿ ಭಾಷೆಯನ್ನು, ಅದರ ಸಾಹಿತಿಗಳನ್ನು ಮತ್ತು ಅವರ ಸಾಹಿತ್ಯವನ್ನು ಅನುಭವಿಸಲು ಸಾಧ್ಯವಾಗಲಿ ಮತ್ತು ಇಲ್ಲಿನ ಸಂವಾದ ಕೊಂಕಣಿ ಭಾಷೆಯ ಬೆಳವಣಿಗೆಗೆ ಸ್ಪೂರ್ತಿದಾಯಕವಾಗಲಿ ʼ ಎಂದು ಶುಭ ಹಾರೈಸಿದರು.
ಕೊಂಕಣಿ ಸಂಸ್ಥೆಯ ನಿರ್ದೇಶಕ ವಂ| ಡಾ| ಮೆಲ್ವಿನ್ ಪಿಂಟೋ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಲ್ವಿನ್ ಡೆಸಾ, ʻಬೊಲ್ಕಾಂವ್ʼ ಸಾಹಿತ್ಯ ಮಂಚದ ಸಂಚಾಲಕ ಮತ್ತು ಹಿರಿಯ ಪತ್ರಕರ್ತ ಎಚ್.ಎಂ.ಪೆರ್ನಾಲ್ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆಯ ಕಾರ್ಯ ಸಂಯೋಜಕ ಜೋಕಿಮ್ ಪಿಂಟೋ ವೇದಿಕೆಯಲ್ಲಿದ್ದರು.

ಬೊಲ್ಕಾಂವ್ ಮಾಸಿಕ ಸಭೆಯ ಸಂಚಾಲಕರಾದ ಎಚ್.ಎಂ.ಪೆರ್ನಾಲ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಎರಡನೇ ಬೊಲ್ಕಾಂವ್ ಸಭೆಯು ಅಕ್ಟೋಬರ್ 12 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅಲ್ವಿನ್ ಡೆಸಾ, ಅವರು `ಸಾಹಿತ್ಯ ಮತ್ತು ವಿಮರ್ಶೆʼ ಕುರಿತು ಈ ಸಭೆಯಲ್ಲಿ ಮಾತನಾಡಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles