22.7 C
Karnataka
Wednesday, April 2, 2025

ವಿದ್ಯಾರ್ಥಿಗಳಿಗೆ ‘ಮನೋವಿಜ್ಞಾನ ಶಿಬಿರ’

ಮಂಗಳೂರು, 28ನೇ ಮಾರ್ಚ್: ಮಂಗಳೂರು ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಯ ಪಿಜಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ; ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಸೌತ್ ಕೆನರಾ (ಕ್ಯಾಸ್ಕ್) ಮತ್ತು ಕಣಚೂರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮನೋವೈದ್ಯಕೀಯ ವಿಭಾಗದ ತಜ್ಞರ ಬೆಂಬಲದೊಂದಿಗೆ ಸಹಯೋಗದ ಮೂಲಕ, ಎಂ.ಎಸ್. ಡಬ್ಲ್ಯೂ. (ಪ್ರಥಮ ವರ್ಷ) ಇಂಡಸ್ಟ್ರಿಯಲ್ ಸೈಕಾಲಜಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಒಂದು ಮನೋವಿಜ್ಞಾನ ಶಿಬಿರವನ್ನು ಏರ್ಪಡಿಸಲಾಯಿತು.
ಕಣಚೂರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಹಾಗೂ ಕ್ಯಾಸ್ಕ್’ನ ಉಪಾಧ್ಯಕ್ಷ ಡಾ. ರೋಹನ್ ಎಸ್. ಮೋನಿಸ್ ಅವರು ತಂಡಗಳು ಮತ್ತು ವಿದ್ಯಾರ್ಥಿಗಳನ್ನು ಈ ಸಂವಾದಾತ್ಮಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಎಂ.ಎಸ್. ಡಬ್ಲ್ಯೂ., ಫ್ಯಾಕಲ್ಟಿ ಮುಖಂಡರಿಗೆ ಈ ವಿದ್ಯಾರ್ಥಿ ತೊಡಗಿಸುವಿಕೆಗಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು, ಇದು ವಿದ್ಯಾರ್ಥಿಗಳನ್ನು ಸಶಕ್ತಗೊಳಿಸುವುದರ ಜೊತೆಗೆ ಮಾನಸಿಕ ಕ್ಷೇಮದ ಬಗ್ಗೆ ಅರಿವು ಹೆಚ್ಚಿಸುವ ಮೂಲಕ ಸಾಮಾಜಿಕ ಪ್ರಭಾವವನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಯ ವಿಭಾಗದ ಅಧ್ಯಕ್ಷ ಹಾಗೂ ಕ್ಯಾಸ್ಕ್’ನ ಮಂಗಳೂರು ಮ್ಯಾಗಜೀನ್ ಸಂಪಾದಕ ಡಾ. ಪಾಲ್ ಜಿ. ಅಕ್ವಿನಾಸ್ ಅವರು, ಕಣಚೂರ್ ಆಸ್ಪತ್ರೆಗೆ ಧನ್ಯವಾದಗಳನ್ನು ತಿಳಿಸಿದರು. ಈ ಶಿಬಿರದ ಮೂಲಕ ವಿದ್ಯಾರ್ಥಿಗಳು ಅಮೂಲ್ಯವಾದ ಕಲಿಕೆಯ ಅನುಭವವನ್ನು ಪಡೆದಿದ್ದಾರೆ ಎಂದು ಅವರು ಪ್ರಶಂಸಿಸಿದರು. ಈ ಕಾರ್ಯಕ್ರಮವು ಭವಿಷ್ಯದಲ್ಲಿ ವಿದ್ಯಾರ್ಥಿಗಳ ವೃತ್ತಿಪರ ಏಳಿಗೆಗೆ ಹೇಗೆ ಸಹಾಯ ಮಾಡುತ್ತವೆ ಎಂದವರು ವಿವರಿಸಿದರು.
ಮೊದಲ ಸೆಷನ್ ಅನ್ನು ಕನಾಚೂರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಮನೋವೈದ್ಯಕೀಯ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ಐಶ್ವರ್ಯ ವಿ. ರಾವ್ ಅವರು ನಡೆಸಿದರು. ಡಾ. ರಾವ್ ಅವರು ಮಾನಸಿಕ ಅಸ್ವಸ್ಥತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ದೈನಂದಿನ ಜೀವನದಲ್ಲಿ ಅಂತಹ ಸ್ಥಿತಿಗಳನ್ನು ನಿಭಾಯಿಸಲು ಪ್ರಾಯೋಗಿಕ ಪರಿಹಾರಗಳ ಬಗ್ಗೆ ಮಾತನಾಡಿದರು.
ಕಣಚೂರ್ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ರೋಜಿನಾ ಅನ್ನಾ ರೇ ಅವರು ಒತ್ತಡ ಮತ್ತು ಸಮಯ ನಿರ್ವಹಣೆಯ ಬಗ್ಗೆ ಒಂದು ಸಂವಾದಾತ್ಮಕ ಸೆಷನ್ ನಡೆಸಿದರು. ಆಕರ್ಷಕ ಚಟುವಟಿಕೆಗಳ ಮೂಲಕ, ವಿದ್ಯಾರ್ಥಿಗಳಿಗೆ ಒತ್ತಡವನ್ನು ಗುರುತಿಸಲು ಮತ್ತು ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ವಿಧಾನಗಳನ್ನು ನೀಡಿದರು.
ಎಂ.ಎಸ್. ಡಬ್ಲ್ಯೂ. ಪ್ರಥಮ ವರ್ಷದ ವಿದ್ಯಾರ್ಥಿ ಶ್ರೇಯಸ್ ಶೆಣೈ ಅವರು ವ೦ದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles