20.5 C
Karnataka
Friday, November 15, 2024

ಪುತ್ತೂರು ಜಾತ್ರೆ :ರಸ್ತೆ ಸಂಚಾರದಲ್ಲಿ ಬದಲಾವಣೆ


ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಏ.16ರಂದು ಸಂಜೆ 4 ಗಂಟೆಯಿಂದ ಏ.18ರಂದು ಪೂರ್ವಾಹ್ನ 6 ಗಂಟೆಯವರೆಗೆ ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಸಾರಿಗೆ ಬಸ್ ಸಂಚರಿಸುವ ಮಾರ್ಗ
ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಸಾರಿಗೆ ಬಸ್‍ಗಳು ಎಂ.ಟಿ ರಸ್ತೆಯ ಮೂಲಕ ತೆರಳಿ, ಮುಂದೆ ಎಡಕ್ಕೆ ತಿರುಗಿ, ಪರ್ಲಡ್ಕ ಬೈಪಾಸ್ ಮೂಲಕ ತೆರಳಬೇಕು. ಕಬಕ ಮಂಗಳೂರು ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‍ಗಳು ಲಿನೆಟ್, ಬೊಳ್ವಾರು, ಪಡೀಲ್ ಕೊಟೆಚಾ ಹಾಲ್ ಕ್ರಾಸ್, ಸಾಲ್ಮರ, ಎಂಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು.
ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‍ಗಳು ಪಡೀಲ್, ಕೊಟೆಚಾ ಹಾಲ್ ಸಾಲ್ಕರ, ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು.
ಸುಳ್ಯ, ಸಂಪ್ಯ, ಮಡಿಕೇರಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‍ಗಳು ಅಶ್ವಿನಿ ಜಂಕ್ಷನ್, ದರ್ಬೆ ಅರುಣಾ ಥಿಯೇಟರ್ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು.

ಅಟೋರಿಕ್ಷಾ ಸಂಚರಿಸುವ ಮಾರ್ಗಗಳು:
ನೆಹರೂ ನಗರ, ಬೊಳುವಾರು ಕಡೆಯಿಂದ ಬರುವ ಆಟೋ ರಿಕ್ಷಾಗಳು ಮಯೂರ ಇನ್‍ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ, ಉಲಾರ್ಂಡಿ ಕ್ರಾಸ್ ಮೂಲಕ ವಾಪಸ್ಸು ಸಂಚರಿಸುವುದು. ದರ್ಬೆ ಕಡೆಯಿಂದ ಬರುವ ಆಟೋರಿಕ್ಷಾಗಳು ಎಪಿಎಂಸಿ ರಸ್ತೆಯ ಮುಖಾಂತರ ನೆಲ್ಲಿಕಟ್ಟೆ ಕೆ.ಎಸ್.ಆರ್.ಟಿ.ಸಿ ಬಸ್‍ನಿಲ್ದಾಣದ ಮುಂಭಾಗದಿಂದ ಗಾಂಧಿಕಟ್ಟೆ ಕಡೆಗೆ ಬಂದು ಪ್ರಯಾಣಿಕರನ್ನು ಇಳಿಸಿ ವಾಪಾಸು ಮುಖ್ಯ ರಸ್ತೆಯಾಗಿ ದರ್ಬೆ ಕಡೆಗೆ ಸಂಚರಿಸಬೇಕು. ಪರ್ಲಡ್ಡ, ಬಪ್ಪಳಿಗೆ ಕಡೆಯಿಂದ ಬರುವ ಅಟೋರಿಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ, ವಾಪಾಸು ಸಂಚರಿಸಬೇಕು.

ಭಕ್ತಾದಿಗಳ ವಾಹನ ಪಾರ್ಕಿಂಗ್ ಸ್ಥಳ:
ಬರುವ ಮಾರ್ಗ ಉಪ್ಪಿನಂಗಡಿ, ಕೋಡಿಂಬಾಡಿ ಹಾಗೂ ಬನ್ನೂರು, ಪಾಕಿ೯೦ಗ್ ಸ್ಥಳ: ಎಪಿಎಂಸಿ ಆವರಣ, ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ ಮೈದಾನ, ಬಂಟರ ಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನ.
ಬರುವ ಮಾರ್ಗ ಸುಳ್ಯ, ಬೆಟ್ಟಂಪಾಡಿ, ಪಾಣಜೆ, ಪರ್ಲಡ್ಕ, ಪುರುಷರ ಕಟ್ಟೆ ಹಾಗೂ ಪಾಕಿರ್ಂಗ್ ಸ್ಥಳ: ತೆಂಕಿಲ, ಗೌಡ ಸಮುದಾಯ ಭವನ, ಥಿಂಕಿಲ ವಿವೇಕಾನಂದ ಶಾಲಾ ಮೈದಾನ, ಕಿಲ್ಲೆ ಮೈದಾನ, ತೆಂಕಿಲ ಗೌಡ ಸಮುದಾಯ ಭವನದ ಎದುರುಗಡೆ ಇರುವ ಖಾಲಿ ಜಾಗ.
ಬರುವ ಮಾರ್ಗ ವಿಟ್ಲ, ಕಬಕ, ನೆಹರೂ ನಗರ. ಪಾಕಿರ್ಂಗ್ ಸ್ಥಳ: ಜೈನ ಭವನ ಪಾಕಿರ್ಂಗ್ ಜಾಗ, ಅಶ್ಮಿ ಲಾಡ್ಜ್ ಬಳಿ ಇರುವ ಖಾಲಿ ಜಾಗ ಹಾಗೂ ತೆಂಕಿಲಾ ದರ್ಶನ್ ಹಾಲ್ ಪಕ್ಕದ ಖಾಲಿ ಜಾಗದಲ್ಲಿ ಭಕ್ತಾದಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles