ಮ೦ಗಳೂರು: ರಚನಾ’ – ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಮಂಗಳೂರು ಮೂಲದ ವಿವಿಧೆಡೆಗಳಲ್ಲಿ ಹಬ್ಬಿಕೊಂಡಿರುವ ಕ್ಯಾಥೊಲಿಕ್ ಕ್ರೈಸ್ತ ಸಮುದಾಯದ, ತಂತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡಿರುವ ಗಣ್ಯರನ್ನು ಪರಿಗಣಿಸಿ, ಆಯ್ದು ‘ರಚನಾ’ ಪ್ರಶಸ್ತಿಯನ್ನು ನೀಡುವ ಮೂಲಕ ಪುರಸ್ಕರಿಸುತ್ತಿದೆ. 2023-25ನೇ ಸಾಲಿನ ಈ ಕೆಳಗಿನ ಪ್ರಶಸ್ತಿಗಳಿಗಾಗಿ ನಾಮಪತ್ರಗಳನ್ನು ಆಹ್ವಾನಿಸಲಾಗಿದೆ.

- ರಚನಾ ಕೃಷಿಕ,
- ರಚನಾ ವೃತ್ತಿಪರ (ವೈದ್ಯರು, ವಕೀಲರು, ಇಂಜಿನಿಯರ್ಸ್, ಚಾಟರ್ಡ್ ಎಕೌಂಟೆಂಟ್ಸ್)
- ರಚನಾ ಉದ್ಯಮಿ
- ರಚನಾ ಅನಿವಾಸಿ ಉದ್ಯಮಿ/ ವೃತ್ತಿಪರ
- ರಚನಾ ವಿಶೇಷ ಮಹಿಳಾ ಸಾಧಕಿ (ಉದ್ಯಮಿ, ವೃತ್ತಿಪರ, ಕೃಷಿಕ) ಪ್ರಶಸ್ತಿಗಳನ್ನು ನೀಡಲಾಗುತ್ತದೆ.
25 ಮಂದಿ ಜ್ಯೂರಿ ಸದಸ್ಯರ ತಂಡವು ನಾಮಪತ್ರ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಪ್ರಶಸ್ತಿಗಳಿಗಾಗಿ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವರು.ಪ್ರಶಸ್ತಿಯು ಬಿರುದು, ಸನ್ಮಾನ ಪತ್ರ, ಸ್ಮಾರಕ, ಸಾರ್ವಜನಿಕ ಸನ್ಮಾನವನ್ನೊಳಗೊಂಡಿರುವುದು.
ಅರ್ಜಿ / ನಾಮಪತ್ರಗಳನ್ನು ಭಾವಚಿತ್ರದೊಂದಿಗೆ ಅಧ್ಯಕ್ಷರು, ರಚನಾ, ಮೊದಲ ಮಹಡಿ, ಪಿಯೊ ಮಾಲ್, ಜೈಲ್ ರಸ್ತೆ, ಮಂಗಳೂರು 575 004. ಇಮೇಯ್ಲ್: rachanamangalore@gmail.com, ಈ ವಿಳಾಸಕ್ಕೆ ದಿನಾಂಕ 31.05.2025 ಕ್ಕೂ ಮುಂಚಿತವಾಗಿ ತಲುಪುವಂತೆ ಕಳುಹಿಸಲು ಕೋರಲಾಗಿದೆ.
ಪ್ರಶಸ್ತಿ ಪ್ರದಾನ ಕಾರ‍್ಯಕ್ರಮವು, 2025ರ ಅಕ್ಟೋಬರ್ 05, ಭಾನುವಾರದಂದು ಸಂಜೆ 6ಕ್ಕೆ ಮಿಲಾಗ್ರಿಸ್ ಜ್ಯುಬಿಲಿ ಸಭಾಭವನ ಮಂಗಳೂರು, ಇಲ್ಲಿ ಮಂಗಳೂರಿನ ಬಿಷಪ್ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಅಧ್ಯಕ್ಷತೆಯಲ್ಲಿ ಹಾಗೂ ಇತರ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಲಿರುವುದು.‘ರಚನಾ ಪ್ರಶಸ್ತಿ’ ಬಗ್ಗೆ ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ರಚನಾ ಕಛೇರಿಯ ದೂರವಾಣಿ ಸಂಖ್ಯೆ: 83106 42093 / 99720 17484 ಸಂಪರ್ಕಿಸಲು ಕೋರಲಾಗಿದೆ ಎ೦ದು ಪ್ರಕಟನೆ ತಿಳಿಸಿದೆ
