22.8 C
Karnataka
Wednesday, November 13, 2024

ಪಕ್ಷದ ನಿಷ್ಟಾವ೦ತ ಕಾಯ೯ಕತ೯ರ ಪರವಾಗಿ ನನ್ನ ಸ್ಪಧೆ೯:ರಘುಪತಿ ಭಟ್

ಮಂಗಳೂರು: ಪಕ್ಷದ ನಿಷ್ಟಾವ೦ತ ಕಾಯ೯ಕತ೯ರನ್ನು ನಾಯಕರು ನಡೆಸಿಕೊಳ್ಳುವ ರೀತಿ ಬೇಸರ ತರಿಸಿದೆ. ಹಿರಿಯ ಕಾಯ೯ಕತ೯ರನ್ನು ಕಡೆಗಣಿಸಲಾಗುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಕರಾವಳಿಗೆ ಭಾಗವನ್ನು ನಿಲ೯ಕ್ಷಿಸಲಾಗಿದೆ.
ಈ ರೀತಿಯ ಧೋರಣೆಗಳ ವಿರುದ್ದ ನನ್ನ ಸ್ಪಧೆ೯ಯಾಗಿದ್ದು ನೈರುತ್ಯ ಪಧವೀಧರರ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ ಎ೦ದು ಎಂದು ಪರಿಷತ್ ಚುನಾವಣೆಗೆ ಪಕ್ಷೇತರವಾಗಿ ಸ್ಪಧಿ೯ಸುತ್ತಿರುವ ಮಾಜಿ ಶಾಸಕ , ಬಿಜೆಪಿ ನಾಯಕ ರಘುಪತಿ ಭಟ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವವರು ಬೇಕಾಗಿದೆ. ಗೆಲ್ಲಲಿ ಸೋಲಲಿ ನಾನು ಇಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ. ನಾವು ಏನು ಮಾಡಿದ್ರು ಇಲ್ಲಿನ ಕರಾವಳಿಯ ಕಾರ್ಯಕರ್ತರು ನಮಗೆ ಮತ ಹಾಕುತ್ತಾರೆ ಅನ್ನೋ ಭಾವನೆ ಬಿಜೆಪಿರಾಜ್ಯ ನಾಯಕರಿಗೆ ಬಂದಿದೆ. ಇದಕ್ಕೆ ಕಡಿವಾಣ ಬೀಳಬೇಕು. ಪಕ್ಷದಲ್ಲಿ ಹಿರಿಯರು ಇದ್ದರು. ಅವರಿಗೆ ಟಿಕೆಟ್ ಕೊಡುತ್ತಿದ್ದರೂ ನಮಗೆ ಬೇಸರವಾಗುತ್ತಿರಲಿಲ್ಲ. ಒಂದೂವರೆ ವರ್ಷದ ಹಿಂದೆ ಬಿಜೆಪಿ ಸೇರಿದ ಧನಂಜಯ ಸರ್ಜಿಗೆ ಟಿಕೆಟ್‌ ನೀಡಲಾಗಿದೆ .ಕರಾವಳಿಗೆ ಆದ ಅನ್ಯಾಯ, ಆಯ್ಕೆಯಲ್ಲಿ ತೆಗೆದುಕೊಂಡ ಮಾನ ದಂಡ ನನಗೆ ನೋವು ತರಿಸಿದೆ ಎ೦ದರು.
ನಾನು ಶಾಸಕನಾಗಿದ್ದಾಗ ಉಡುಪಿಯಲ್ಲಿ ಅಭಿವೃದ್ದಿ ಕೆಲಸಗಳಿಗೆ ಒತ್ತು ನೀಡಿದ್ದೇನೆ. 2023ರ ವಿಧಾನ ಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಎಲ್ಲಾ ತಯಾರಿ ಮಾಡಿದ್ದೆ. ನನಗೆ ಟಿಕೆಟ್ ನಿರಾಕರಿಸಲಾಯಿತು. ಆದರೆ ನಾನು ಪಕ್ಷ ನಿಷ್ಠೆ ಮರೆ
ಯಲಿಲ್ಲ. ಟಿಕೆಟ್ ನೀಡದೆ ನನ್ನನ್ನ ನಡೆಸಿಕೊಂಡ ರೀತಿ ನನಗೆ ಬೇಸರ ತರಿಸಿತ್ತು. ಆದರೂ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಲು ಶ್ರಮ ವಹಿಸಿದ್ದೆ. ನೈರುತ್ಯ ಪಧವೀಧರರ ಕ್ಷೇತ್ರದ ಸ್ಥಾನ ತೆರವಾದಗ ಪಕ್ಷದ ಹಿರಿಯರಲ್ಲಿ ನನಗೆ ಅವಕಾಶ ನೀಡಬೇಕು ಎಂದಿದ್ದೆ. ಕರಾವಳಿಗೆ ಭಾಗಕ್ಕೆ ಶಿಕ್ಷಕರ ಕ್ಷೇತ್ರ, ಮಲೆನಾಡಿಗೆ ಪಧವೀಧರ ಕ್ಷೇತ್ರ ನೀಡುತ್ತೇವೆ ಅಂದಿದ್ರು. ನಿಮಗೆ ಅವಕಾಶ ನೀಡುತ್ತೇವೆ. ಕೆಲಸ ಪ್ರಾರ೦ಭಿಸಿ ಎಂದಿದ್ದರು. ಲೋಕಸಭೆ ಚುನಾವಣೆ ನಂತರ ಘೋಷಣೆ ಮಾಡ್ತೇವೆ ಅಂದರು.ನನ್ನನ್ನ ಶಿವಮೊಗ್ಗ ಲೋಕಸಭಾ ಚುನಾವಣೆಯ ಪ್ರಭಾರಿ ಮಾಡಿದರು. ಪರಿಷತ್ ಚುನಾವಣೆಗೆ ಸಹಕಾರ ಆಗಲಿ ಎಂದು ಮಾಡಿದ್ದಾರೆ ಅಂದುಕೊಂಡೆ. ಕೊನೆಯ ಕ್ಷಣದವರೆಗೂ ನಾನು ಬಿಜೆಪಿಗೆ ಕಚೇರಿಗೆ ಅಲೆದಾಡಿದ್ದೆ. ಪದವೀಧರ ಕ್ಷೇತ್ರಕರಾವಳಿಗೆ ಕೊಡುತ್ತಾರೆ ಅನ್ನೋ ಭರವಸೆ ಇತ್ತು. ಆದರೆ ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗಳು ಆಯಿತು ಎ೦ದವರು ಹೇಳಿದರು.
ನಾನು ಪಕ್ಷದ ವಿರುದ್ಧ ಹೋಗಿದ್ದೇನೆ ಎಂದು ನನಗೆ ಅನಿಸಲ್ಲ. ಪಕ್ಷದ ಚಿಹ್ನೆಯಲ್ಲಿ ಚುನಾವಣೆ ನಡೆಯಲ್ಲ. ಇದು ಸರ್ಕಾರ ರಚಿಸುವ ಚುನಾವಣೆಯಲ್ಲ.ನಾನು ಗೆದ್ದರೂ ಬಿಜೆಪಿ, ಗೆದ್ದ ಮೇಲೂ ನಾನು ಬಿಜೆಪಿ ಕಚೇರಿಗೆ ಹೋಗುತ್ತೇನೆ. ಸೋತರೂ ನನ್ನನ್ನು ಉಚ್ಚಾಟನೆ ಮಾಡಿದ್ರೂ,ನಾನು ಬಿಜೆಪಿ ಕಾರ್ಯಕರ್ತನ್ನಾಗಿ ಕೆಲಸ ಮಾಡುತ್ತೇನೆ. ನಾನು. ಈ ಸಾಧನೆಯ ಆಧಾರದಲ್ಲಿ ಮತ ಯಾಚಿಸುತ್ತಿದ್ದೇನೆ. ಜನಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.ಯಾರನ್ನೂ ಸೋಲಿಸಲು ನಾನು ನಿಲ್ತಾ ಇಲ್ಲ. ಶಾಸಕನಾಗಿ ಯಾವ ರೀತಿ ಕೆಲಸ ಮಾಡಿದ್ದೇನೆ.ಅದೆ ರೀತಿ ಇಲ್ಲೂ ಗೆದ್ದು ಕೆಲಸ ಮಾಡುತ್ತೇನೆ. ಉಡುಪಿ 2004 ರ ಮುಂಚೆ ಹೇಗಿತ್ತು, ಈಗ ಹೇಗಿದೆ ಅನ್ನೋದೇ ನನ್ನ ಕೆಲಸಕ್ಕೆ ಸಾಕ್ಷಿ. ಜೂನ್ 3ನೇ ತಾರೀಕು ನಡೆಯುವ ಚುನಾವಣೆಯಲ್ಲಿ ನನಗೆ ಮತ ಹಾಕಿ ಕೆಲಸ ಮಾಡಲು ಅವಕಾಶ ಕೊಡಿ ಎ೦ಬುದು ಮತದಾರರಲ್ಲಿ ನನ್ನ ಮನವಿ ಎ೦ದರು.
ಮಾಜಿ ಕಾಪೋರೇಟರ್‌ ನವೀನ್ ಚ೦ದ್ರ, ಡಾ. ಶಿವಶರಣ್‌ ಶೆಟ್ಟಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles