24 C
Karnataka
Thursday, May 22, 2025

ದೇವನಹಳ್ಳಿಯಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್‌ ಸಮೀಕ್ಷೆಗೆ ರೈಲ್ವೆ ಮಂಡಳಿಯಿಂದ ಅನುಮೋದನೆ

ಬೆ೦ಗಳೂರು: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ದೂರ ದೃಷ್ಟಿಯ ನಾಯಕತ್ವ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಸಕ್ರಿಯ ಶ್ರಮದಿಂದ, ದೇವನಹಳ್ಳಿ ನಿಲ್ದಾಣದ ಸಮೀಪ ಅಥವಾ ಯಲಹಂಕ–ದೇವನಹಳ್ಳಿ–ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಯಾವುದೇ ಸೂಕ್ತ ಸ್ಥಳದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣದ ಉದ್ದೇಶದಿಂದ ಅಂತಿಮ ಸ್ಥಳ ಸಮೀಕ್ಷೆ ಪ್ರಾರಂಭಿಸಲು 1.35 ಕೋಟಿ ವೆಚ್ಚದ ಯೋಜನೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಈ ಯೋಜನೆಯು ಬೆಂಗಳೂರಿನ ಗರಿಷ್ಠ ಮಟ್ಟದ ದಟ್ಟತೆಯನ್ನು ಹೊಂದಿರುವ ರೈಲು ಮೂಲಸೌಕರ್ಯಕ್ಕೆ ಪರಿಹಾರ ಒದಗಿಸಲು ಹಾಗೂ ವಿಸ್ತರಿಸುತ್ತಿರುವ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಲು ಉದ್ದೇಶಿತವಾಗಿದೆ.

ಹೊಸ ಟರ್ಮಿನಲ್ ಅಗತ್ಯ ಏಕೆ?

ಭಾರತದ ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೆಟ್ರೋಪಾಲಿಟನ್ ನಗರವಾಗಿರುವ ಬೆಂಗಳೂರು, ಸುಮಾರು 11.5 ಮಿಲಿಯನ್ ಜನಸಂಖ್ಯೆ ಹೊಂದಿದ್ದು, ದಿನದಿಂದ ದಿನಕ್ಕೆ ರೈಲು ಸಂಚಾರದ ಅವಲಂಬನೆ ಹೆಚ್ಚುತ್ತಿದೆ. ನಗರದಲ್ಲಿರುವ ಕೇವಲ ಮೂರು ಟರ್ಮಿನಲ್‌ಗಳು ಮತ್ತು 12 ಪಿಟ್ ಲೈನ್‌ಗಳೊಂದಿಗೆ ಪ್ರಸ್ತುತ 140 ಆರಂಭಿಕ, 139 ಕೊನೆಗೊಳ್ಳುವ ಹಾಗೂ 142 ಪಾಸ್‌ಥ್ರು ರೈಲುಗಳನ್ನು ನಿರ್ವಹಿಸಲಾಗುತ್ತಿದೆ. ಇವತ್ತಿನ ಸ್ಥಿತಿಯಲ್ಲಿ 110 ಪ್ರಾಥಮಿಕ ನಿರ್ವಹಣಾ ರೈಲುಗಳು ಈ ಮೂಲಸೌಕರ್ಯವನ್ನು ಬಳಸುತ್ತಿದ್ದು, 2024–25ರ ವೇಳೆ 103.72 ಮಿಲಿಯನ್ ಪ್ರಯಾಣಿಕರ ಉಗಮದೊಂದಿಗೆ ಒಟ್ಟು 212.06 ಮಿಲಿಯನ್ ಪ್ರಯಾಣಿಕರ ಪಾದಚಾರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ದಿನಕ್ಕೆ 210 ರೈಲುಗಳವರೆಗೆ ಏರುವ ಸಾಧ್ಯತೆ ಇದೆ, ಇದರಿಂದ ಇತ್ತೀಚಿನ ಟರ್ಮಿನಲ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ.

ಪ್ರಸ್ತುತ ಸಮಸ್ಯೆಗಳು:

ಬಳಕೆಯಲ್ಲಿರುವ ಪಿಟ್ ಲೈನ್‌ಗಳು ಈಗಾಗಲೇ ಗರಿಷ್ಠ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಸದಾ ಪ್ಲಾಟ್‌ಫಾರ್ಮ್ ಮತ್ತು ಮಾರ್ಗ ಲಭ್ಯವಿಲ್ಲದ ಕಾರಣದಿಂದಾಗಿ ರೈಲುಗಳು ವಿಳಂಬವಾಗುತ್ತಿವೆ. ಸ್ಟೇಬಲಿಂಗ್ ಲೈನ್‌ಗಳ ಕೊರತೆಯಿಂದ ಖಾಲಿ ರೇಕ್‌ಗಳ ಅತಿಯಾದ ಚಲನವಲನವಾಗುತ್ತಿದ್ದು, ಇದು ಸಿಬ್ಬಂದಿ ಹಾಗೂ ಮಾರ್ಗದ ನಷ್ಟಕ್ಕೆ ಕಾರಣವಾಗಿದೆ. ಇದಲ್ಲದೆ, ಸಿಂಚಿತ ಸರಕು ಮಾರ್ಗದ ಕೊರತೆಯಿಂದ ರೈಲು ಸಂಚಾರ ಮತ್ತು ಸರಕು ಸಂಚಾರ ಪರಸ್ಪರ ಅಡ್ಡಿಪಡಿಸುತ್ತಿವೆ. ನಗರದಲ್ಲಿನ ಭೂಮಿಯ ಅಭಾವದಿಂದ ಈಗಿರುವ ಟರ್ಮಿನಲ್‌ಗಳ ವಿಸ್ತರಣೆ ಬಹುಷಃ ಅಸಾಧ್ಯವಾಗಿದೆ.

ದೇವನಹಳ್ಳಿ ಮೆಗಾ ಕೋಚಿಂಗ್ ಟರ್ಮಿನಲ್ – ದೀರ್ಘಕಾಲೀನ ದೃಷ್ಟಿಕೋನ:

ನಗರದ ಹೊರವಲಯದಲ್ಲಿರುವ ದೇವನಹಳ್ಳಿ ಟರ್ಮಿನಲ್ ನಾಲ್ಕನೇ ಪ್ರಮುಖ ಟರ್ಮಿನಲ್ ಆಗಿ ಅಭಿವೃದ್ಧಿಪಡಿಸಲಿದ್ದು, ಇದು ಸಂಚಾರವನ್ನು ಸಮರ್ಥವಾಗಿ ಮರುಹಂಚಿ ಕಾರ್ಯಾಚರಣೆಗೆ ಹೊಂದಾಣಿಕೆಯವನ್ನೂ ಒದಗಿಸುತ್ತದೆ. ಈ ಟರ್ಮಿನಲ್‌ನಲ್ಲಿ ನಾಲ್ಕು ಸೆಟ್‌ಗಳಲ್ಲಿ ಒಟ್ಟು 12 ಪಿಟ್ ಲೈನ್‌ಗಳು, ಐದು ಸ್ವಯಂಚಾಲಿತ ಕೋಚ್ ವಾಷಿಂಗ್ ಸೌಲಭ್ಯವಿರುವ ವಾಷಿಂಗ್ ಲೈನ್‌ಗಳು, 24 ಸ್ಟೇಬಲಿಂಗ್ ಲೈನ್‌ಗಳು, ಆವರಣದೊಳಗಿನ ಆರು ದುರಸ್ತಿ ಲೈನ್‌ಗಳು, ಎರಡು ಪಿಟ್ ವೀಲ್ ಲೇತ್‌ಗಳು ಮತ್ತು ಆರು ಸಿಕ್ ಲೈನ್‌ಗಳ ಜೊತೆಗೆ ಲೋಕೋ ಬೇ, 50 ಟನ್ ಸಾಮರ್ಥ್ಯದ ಬೂಟ್ ಲಾಂಡ್ರಿ, ಆಡಳಿತ ಭವನಗಳು ಮತ್ತು ಮಳಿಗೆಗಳಂತಹ ಪೂರಕ ಸೌಲಭ್ಯಗಳು ಒಳಗೊಂಡಿವೆ.

ಪ್ರತಿದಿನ 36 ರೇಕ್‌ಗಳ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿರುವ ಈ ಟರ್ಮಿನಲ್ ಬೆಂಗಳೂರು ರೈಲ್ವೆ ಜಾಲದ ನಿರ್ವಹಣಾ ಸಾಮರ್ಥ್ಯವನ್ನು ಉನ್ನತಮಟ್ಟಕ್ಕೆ ಏರಿಸುವುದು ಖಚಿತವಾಗಿದೆ. ಈ ಸಮೀಕ್ಷೆಯ ಅನುಮೋದನೆ ಮೂಲಕ ಭಾರತೀಯ ರೈಲ್ವೆ ಬೆಂಗಳೂರಿನ ಭವಿಷ್ಯಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ರೂಪಿಸುತ್ತಿದ್ದು, ನಗರ ಅಭಿವೃದ್ಧಿಗೆ ಅನುಗುಣವಾದ ಶಾಶ್ವತ ಪರಿಹಾರ ನೀಡುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎ೦ದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. .

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles