22 C
Karnataka
Thursday, May 22, 2025

ಹೋಟೇಲ್ ವುಡ್‌ಲ್ಯಾಂಡ್ಸ್‌ : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್, ಕರಕುಶಲ ವಸ್ತುಗಳ ಮಾರಾಟ ಮೇಳ

ಮಂಗಳೂರು : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ “ರಾಜಸ್ಥಾನ ಬೃಹತ್ ಮಾರಾಟ ಮೇಳ”ಬುಧವಾರ ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್‌ಲ್ಯಾಂಡ್ಸ್‌ ನಲ್ಲಿ ಆರಂಭಗೊಂಡಿತು.

ಖ್ಯಾತ ಲೇಖಕ ಹಾಗೂ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ಮೇಳವನ್ನು ಉದ್ಘಾಟಿಸಿ ಶುಭಾ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಟಸಾಯಿ ಕೃಷ್ಣ ಕುಡ್ಲ ಹಾಗೂ ಚಿತ್ರನಟಿ ಕುಮಾರಿ ವೆನ್ಸಿಟಾ ಡೈಸ್ ಇವರು ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮೇಳದ ಬಗ್ಗೆ ಮಾಹಿತಿ ನೀಡಿದ ಮೇಳದ ಅಯೋಜಕ ಪ್ರಮೋದ್ ಸಿಂಗ್ ಅವರು, ಈ ಗ್ರಾಮೀಣ ಮೇಳದಲ್ಲಿ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದ್ದು, ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್‌ಶೀಟ್‌ಗಳು, ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್‌ಶೀಟ್‌ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು ಎಂದು ಹೇಳಿದರು.

ಜೋಧ್ಪುರ್ ಕರಕುಶಲ ಮರದ ಪಿಠೋಪರಣಗಳು, ಸಾರಂಗ್ಪುರ್ ಮರದ ಪಿಠೋಪರಣಗಳು, ಹೈದಾರ್ಬಾದ್ ಕಪ್ಪು ಮೇಟಲ್ನ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು, ನೀಲಿ ಬಣ್ಣದ ಕ್ರಾಕಾರಿ ಐಟಮ್ಗಳ ಬೃಹತ್ ಸಂಗ್ರಹಗಳಿವೆ ಎಂದು ಶ್ರೀ ಪ್ರಮೋದ್ ಸಿಂಗ್ ತಿಳಿಸಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles