ಮಂಗಳೂರು:. ಖ್ಯಾತ ನಟ, ನಾಟಕ ಕಲಾವಿದ, ಹಾಡುಗಾರ ಪ್ರಸಾಧನಕಾರ ಎಸ್. ರಾಮದಾಸ್ (86) ಇಲ್ಲಿನ ಟಿ. ಟಿ. ರಸ್ತೆ ನಿವಾಸಿ ಅಲ್ಪ ಕಾಲದ ಅಸೌಖ್ಯದಿಂದಾಗಿ 27.03.2024 ರಂದು ನಗರದ ಸ್ವಗ್ರಹದಲ್ಲಿ ನಿಧನ ಹೊಂದಿದರು. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ಇವರು ಕಲ್ಕೂರ ಜಾಹಿರಾತು ಸಂಸ್ಥೆಯಲ್ಲಿ ಕೆಲವು ವರ್ಷ ಕೆಲಸ ಮಾಡಿದ್ದರು
.ದಶಕಗಳ ಕಾಲದ ಹಿಂದೆ ಪ್ರಾಥಮಿಕ ನವೋದಯ ಕಲಾವೃoದದಲ್ಲಿ ಮಸಣಕ್ಕೆ, ತರಂಗ ತರಂಗ ಅಂತರಂಗ, ಹೆಗಲಿಗೆ ಇರುಳು, ಅಸ್ತಮಾನ, ಕಲ್ಜಿಗದ ಕುರುಕ್ಷೇತ್ರ, ಕೋಟಿ ಚೆನ್ನಯ್ಯ ಪ್ರಮುಖ ಪಾತ್ರ ದಲ್ಲಿ ನಟಿಸಿದ್ದ ಇವರು ಎನ್. ಎಸ್. ರಾವ್ ರಚಿಸಿದ ಕಲಿ ಕಂಠೀರವ ನಾಟಕದಲ್ಲಿ ನಂಜಯ್ಯನ ಪಾತ್ರದಲ್ಲಿ ಮಿಂಚಿದ್ದರು. ಸೀತಾರಾಮ್ ಕುಲಾಲ್ ರವರ ಮಣ್ಣಿನ ಮಗಳು ಅಬ್ಬಕ್ಕ ದಲ್ಲಿ ನಾರ್ಣಪ್ಪಯ್ಯ ಪಾತ್ರ ಸ್ಮರಿಸುವಂತದ್ದು. ಮಾಸ್ಟರ್ ವಿಠ್ಠಲ್ ಜತೆ ಯಲ್ಲಿ 40 ವರ್ಷ ಗಳಿಂದ ಹಾಡುಗಾರನಾಗಿ ಪ್ರಸಾಧಾನ ಕಲಾವಿದರಾಗಿ, ಮಾಯ ಮೃಗ ಶಕುಂತಳಾ, ಮೋಹಿನಿ ಭಸ್ಮಾಸುರ, ಇನ್ನೂ ಅನೇಕ ರೂಪಕಗಳಿಗೆ ಹಾಡುಗಾರನಾಗಿ, ಪ್ರಸಾಧಾನ ಕಲಾವಿದನಾಗಿ ಪ್ರಸಿದ್ದಿ ಹೊಂದಿದ್ದರು . ದಿ. ರಾಮ ಕಿರೋಡಿಯನ್ ರವರ ಬಿರ್ದ್ ದ ಬೈರವೆರ್, ತುಳಸಿ ಜಲoಧರ, ಕಾಂತಾಬಾರೆ ಬೂದಾಬಾರೆ, ರಾಣಿ ಅಬ್ಬಕ್ಕ ನಾಟಕದಲ್ಲಿ ಮಂತ್ರಿ ನಾರ್ಣಪಯ್ಯನ ಪಾತ್ರದಲ್ಲಿ, ರತ್ನಾಕರ್ ರಾವ್ ಕಾವೂರು ರಚಿಸಿದ ರಾಘವೇಂದ್ರ ವೈಭವ ನಾಟಕದಲ್ಲಿ ವೆಂಕಣ್ಣಯ್ಯ ಪಾತ್ರದಲ್ಲಿ, ಯು. ಆರ್ ಚಂದನ್ ರವರ ಹೆಣ್ಣಿನ ಕಣ್ಣೀರು, ಹೀಗೆ ಅನೇಕ ನಾಟಕದಲ್ಲಿ ಅತ್ಯುತ್ತಮ ಪಾತ್ರವಹಿಸಿ ಜನಮನ ಗೆದ್ದಿದ್ದರು. ಡಾ. ಮೋಹನ್ ಆಳ್ವರ ಅನೇಕ ಕಾರ್ಯಕ್ರಮ ಗಳಲ್ಲಿ ಹಿನ್ನೆಲೆ ಗಾಯಕನಾಗಿ ಪ್ರಶಂಸೆಗೆ ಪಾತ್ರ ರಾಗಿದ್ದರು. ಮಂಗಳೂರು ಆಕಾಶವಾಣಿಯಲ್ಲಿ ಭಾವಗೀತೆ ಕಾರ್ಯಕ್ರಮ, ರೇಡಿಯೋ ನಾಟಕ ಕೋಟಿ ಚೆನ್ನಯ್ಯದಲ್ಲಿ ಧ್ವನಿ ನೀಡಿದ್ದರು. ಅನೇಕ ನಾಟಕಗಳಲ್ಲಿ, ಭರತ ನಾಟ್ಯ ಸಂಸ್ಥೆಗಳ ಕಲಾವಿದರಿಗೆ, ಶಾಲಾ ಕಾಲೇಜು, ಹಬ್ಬದ ದಿನಗಲ್ಲಿ ಸಹಸ್ರಾರು ಮಕ್ಕಳಿಗೆ ವರ್ಣಲಂಕಾರಧಾರಿ ಯಾಗಿದ್ದರು. ಅನೇಕ ಕಡೆಯಲ್ಲಿ ಕನ್ನಡ ದಾಸ ಕೀರ್ತನೆ, ಭಜನಾ ಕಾರ್ಯಕ್ರಮಗಳಲ್ಲಿ, ಸ್ಪರ್ಧೆ ಗಳಲ್ಲಿ ಭಾಗವಹಿಸಿದ್ದ ಇವರು ಮುಖ್ಯ ವಾಗಿ ಪೇಜಾವರ ಮಠ ಶ್ರೀ ಪಾದಂಗಳವರಿಂದ ಪ್ರಥಮ ಪ್ರಶಸ್ತಿಗೆ ಭಾಜನಾರಾಗಿದ್ದರು. ಇವರ ಮಹತ್ತರ ಸಾಧನೆಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. ಅಲ್ಲದೇ ಮಂಜುನಾಥ ಕ್ರಪಾಪೋಷಿತ ನಾಟಕ ಸಭಾ, ಲಕುಮಿ ತಂಡ, ಸಂಸ್ಕಾರ ಭಾರತೀ, ಕದಿರೆಯ ಕಲಾವಿದರು ಹೀಗೇ ಹತ್ತು ಹಲವಾರು ಸಂಘ ಸಂಸ್ಥೆ ಗಳು ಸನ್ಮಾನಿಸಿದ್ದಾರೆ. ಮೃತರು ಪತ್ನಿ, ಎರಡು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಕಲ್ಕೂರ ಜಾಹಿರಾತು ಸಂಸ್ಥೆ ಯ ಪದೀಪ್ ಕಲ್ಕೂರ ಸೇರಿ ದಂತೆ ಜಿಲ್ಲೆಯ ಅನೇಕ ಭಜನಾ ಸಂಸ್ಥೆಗಳು, ನಾಟಕ ಸಂಸ್ಥೆಗಳು, ಭರತ ನಾಟ್ಯ ಸಂಸ್ಥೆಗಳು ಸಂತಾಪ ಸೂಚಿಸಿದ್ದಾರೆ.