ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ 60 ವಾರ್ಡ್‍ಗಳ ಉದ್ದಿಮೆದಾರರ ಪರವಾನಿಗೆ ನವೀಕರಣ ಪ್ರಕ್ರಿಯೆಯು ಜನವರಿ 15 ರಿಂದ ಆರಂಭಗೊಳ್ಳಲಿದ್ದು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು.
ಆನ್‍ಲೈನ್ ತಂತ್ರಾಂಶದ ಮೂಲಕ ಹೊಸ /ನವೀಕರಣ ಉದ್ದಿಮೆ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಬಹುದು. ಪ್ರಸಕ್ತ (2025-26)ನೇ ಸಾಲಿನ ಆರ್ಥಿಕ ತೆರಿಗೆ ಪಾವತಿ ಆದ ತರುವಾಯ ಆರೋಗ್ಯ ನಿರೀಕ್ಷಕರು ಸ್ಥಳ ತನಿಖೆ ನಡೆಸಿದ ನಂತರ ಉದ್ದಿಮೆ ಪರವಾನಿಗೆ ತಂತ್ರಾಂಶದಲ್ಲಿ ಉದ್ದಿಮೆದಾರರಿಗೆ ಶುಲ್ಕ ಪಾವತಿ ಅವಕಾಶ ನೀಡಲಾಗುತ್ತದೆ.
ಹಿಂದಿನ ಆರ್ಥಿಕ ವರ್ಷದಲ್ಲಿ ಪಡೆದುಕೊಂಡಿರುವ ಉದ್ದಿಮೆ ಪರವಾನಿಗೆ ಮಾರ್ಚ್ 31ರೊಳಗೆ ದಂಡ ರಹಿತವಾಗಿ ನವೀಕರಿಸಬಹುದಾಗಿದೆ. ನಂತರ ಪ್ರತಿ ಮೂರು ತಿಂಗಳಿಗೊಮ್ಮೆ ಶೇಕಡ 25ರಷ್ಟು ಹೆಚ್ಚುವರಿ ದಂಡ ವಿಧಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 6364016555 ಸಂಪರ್ಕಿಸುವಂತೆ ಮಹಾನಗರಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.