ಮಂಗಳೂರು : ಪುಟ್ಟ ಮಕ್ಕಳನ್ನು ಹಿಡಿದುಕೊಂಡು ನಗರದ ಲಾಲ್‍ಬಾಗ್ ಜಂಕ್ಷನ್ ಸಿಗ್ನಲ್ ಬಳಿ ಬಿಕ್ಷಾಟನೆ ನಡೆಸುತ್ತಿದ್ದ ತಾಯಿ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪತ್ತೆ ಹಚ್ಚಿ ಅವರ ಊರುಗಳಿಗೆ ಕಳುಹಿಸಿಕೊಟ್ಟಿದ್ದಾರೆ.
ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಮಕ್ಕಳ ರಕ್ಷಣಾ ಘಟಕ ಪೋಲೀಸರ ಸಹಯೋಗದೊಂದಿಗೆ ಲಾಲ್‍ಬಾಗ್ ಸಿಗ್ನಲ್ ಬಳಿ ಭಿಕ್ಷಾಟನೆ ನಡೆಸುತ್ತಿದ್ದ 4 ಮಹಿಳೆಯರು, 4 ಪುರುಷರು, 4 ಮಕ್ಕಳನ್ನು ರಕ್ಷಣೆ ಮಾಡಿ ಅವರ ಸ್ವಂತ ಊರು ರಾಜಸ್ಥಾನಕ್ಕೆ ರೈಲಿನ ಮೂಲಕ ಕಳುಹಿಸಿಕೊಡಲಾಯಿತು.
ಹೆಂಗಸರು ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಇರಿಸಿಕೊಂಡು ಭಿಕ್ಷಾಟನೆಯಲ್ಲಿ ನಿರತರಾಗಿರುವುದು ಕಂಡುಬಂದರೆ ಕೂಡಲೇ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡುವಂತೆ ಸೂಚಿಸಲಾಗಿದೆ.
