ಮಂಗಳೂರು:ಯಾವುದೇ ನಿರ್ದಿಷ್ಟವಾದ ವಿಚಾರಗಳ ಜ್ಞಾನಸಂಪಾದನೆಗೆ ಸಂಶೋಧನೆ ಕೈಗೊಳ್ಳುವ ಜೊತೆಗೆ ಸಂಶೋಧನಾ
ವಿಧಾನವೂ ಅಗತ್ಯ. ಒಟ್ಟಾರೆಯಾಗಿ ಸಂಶೋಧನೆ ಒಂದು ತಾರ್ಕಿಕ ಚಿಂತನೆಎಂದು ನಿಟ್ಟೆ ಉಷಾ ನಸಿರ್ಂಗ್ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯಕೇಂದ್ರದ ಮುಖ್ಯಸ್ಥೆ ಡಾ. ನೀತಾ ಕಾಮತ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ,ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗ ಹಾಗೂ ಸ್ನಾತಕೋತ್ತರ ಹಿಂದಿ ವಿಭಾಗ, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ’ಸಂಶೋಧನಾ ವಿಧಾನ’ ವಿಷಯದ ಕುರಿತು ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವರದಿಯ ಆಧಾರದ ಮೇಲೆ ಸಂಶೋಧನೆಯ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ ಎಂದು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಅಬ್ಬೋಕರ್ ಸಿದ್ದಿಕ್ ಹೇಳಿದರು. ಸಂಶೋಧನೆಯಲ್ಲಿ ಭಾಷೆಯ ಪ್ರಾಮುಖ್ಯತೆ ಮತ್ತು ಸೃಜನಾತ್ಮಕ ಭಾಷಾಂತರ, ಸಂಶೋಧನಾ ಬರವಣಿಗೆ ಕುರಿತು ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ದೇವದಾಸ್ ಪೈ ಬಿ. ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಪ್ರೊ. ಲತಾ ಎ. ಪಂಡಿತ್, ಯಾರಾದರೂ ಪ್ರಶ್ನೆ ಕೇಳಿದರೆ ಅದನ್ನು ಸೂಕ್ತಿರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಇಲ್ಲದ ಹೊರತು; ಅವರ ಪ್ರಶ್ನೆಗೂ ನಮ್ಮ ಉತ್ತರಕ್ಕೂ ಅರ್ಥಾತ್ ಸಂಬಂಧವೇ ಇಲ್ಲದಂತಾಗುತ್ತದೆ ಪ್ರಶ್ನೆ ಕೇಳುವುದು ಸಂಶೋಧಕನ ಮುಖ್ಯ ಲಕ್ಷಣ ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಚಾಲಕಹಾಗೂ ಪ್ರಾಧ್ಯಾಪಕ ಡಾ. ರಾಮಕೃಷ್ಣ ಬಿ. ಎಂ., ಸ್ನಾತಕೋತ್ತರ
ಪುರಾತತ್ವ್ತ ಶಾಸ್ತ್ರ ಹಾಗೂ ಇತಿಹಾಸ ವಿಭಾಗದ ಸಂಚಾಲಕಿ ಡಾ. ಮೀನಾಕ್ಷಿ ಎಂ. ಎಂ.,ಸ್ನಾತಕೋತ್ತರ ಹಿಂದಿ ವಿಭಾಗದ ಸಂಚಾಲಕಿ ನಾಗರತ್ನ ಎನ್. ರಾವ್ ಹಾಗೂಮಂಗಳೂರು ವಿಶ್ವದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಂಚಾಲಕ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯವಂತ ನಾಯಕ್