17.5 C
Karnataka
Friday, November 22, 2024

ಸ್ನೇಹಾಲಯದಲ್ಲಿ ನಿವಾಸಿಗಳು ಮತ್ತು ಸಿಬ್ಬಂದಿಗಳಿಂದ ಕ್ರಿಸ್‌ಮಸ್ ಹಬ್ಬದ ಸಂಭ್ರಮ

ಮಂಜೇಶ್ವರ,: ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ತನ್ನ ನಿವಾಸಿಗಳಿಗೆ ಕ್ರಿಸ್‌ಮಸ್ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿ ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.
ಸಿಬ್ಬಂದಿ ಮತ್ತು ನಿವಾಸಿಗಳು ಪ್ರದರ್ಶಿಸಿದ ಆಕರ್ಷಕ ಕ್ರಿಸ್ಮಸ್ ಸ್ಕಿಟ್‌ನೊಂದಿಗೆ ಆಚರಣೆಯು ಪ್ರಾರಂಭವಾಯಿತು. ಕ್ರಿಸ್‌ಮಸ್ ಕ್ಯಾರೋಲ್‌ಗಳಿಗೆ ಹೆಸರುವಾಸಿಯಾದ ತಂಡ ‘ಜಿಜಿ 100’ದಿಂದ ಮಧುರವಾದ ಕ್ರಿಸ್‌ಮಸ್ ಗೀತೆಗಳನ್ನು ಸಾದರಪಡಿಸಲಾಯಿತು. ಅದರಂತೆಯೇ ಅರ್ಬನ್ ಗ್ರೂವ್ ತಮ್ಮ ಶಕ್ತಿಯುತ ಮತ್ತು ಆಕರ್ಷಕ ನೃತ್ಯ ಪ್ರದರ್ಶನಗಳೊಂದಿಗೆ ಹಬ್ಬದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. ಹಿಪ್-ಹಾಪ್, ಸಮಕಾಲೀನ ಮತ್ತು ಜಾಝ್ ನೃತ್ಯವಿಧಗಳನ್ನು ಬೆಸೆಯುವ ಅವರ ವಿಶಿಷ್ಟ ನೃತ್ಯ ಸಂಯೋಜನೆಯು ಪ್ರೇಕ್ಷಕರ ಮನರಂಜಿಸಿತು. ಈ ಸಂದರ್ಭದಲ್ಲಿ ಸ್ವಯಂಸೇವಕರು ಮತ್ತು ದಾನಿಗಳು ಉದಾರವಾಗಿ ಉಡುಗೊರೆಗಳು ಮತ್ತು ಆರ್ಥಿಕ ಬೆಂಬಲವನ್ನು ನೀಡಿದ್ದರು.


“ಕ್ರಿಸ್ಮಸ್ ಹಬ್ಬಗಳು ನಮ್ಮ ನಿವಾಸಿಗಳ ಭಾವನಾತ್ಮಕ ಯೋಗಕ್ಷೇಮವನ್ನು ಬಲಪಡಿಸಲು ಅವಕಾಶವನ್ನು ನೀಡುತ್ತವೆ, ಇವು ತಮ್ಮ ಜೀವನವನ್ನು ನವೀಕೃತ ಭರವಸೆಯೊಂದಿಗೆ ಪುನರ್ನಿರ್ಮಿಸಲು ಸಹಾಯ ಮಾಡುತ್ತವೆ ಮತ್ತು ಇದು ನಮಗೆ ಸಂತೋಷವನ್ನು ನೀಡುತ್ತದೆ”, ಎಂದು ಕೇಂದ್ರದ ನಿರ್ದೇಶಕರಾದ ಜೋಸೆಫ್ ಕ್ರಾಸ್ತಾರವರು ನುಡಿದರು.
ಕಾರ್ಯಕ್ರಮದಲ್ಲಿ ರಶೀದ್ ವಿಟ್ಲ, ಸ್ಥಾಪಕರು, ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು; ಯೋಗೀಶ್ ವಿ. ಸಾಲಿಯಾನ್, ಮಾಲಿಕರು, ಅಮ್ಮಾ ಎಲೆಕ್ಟ್ರಾನಿಕ್ಸ್ ತೊಕ್ಕೊಟ್ಟು ಮತ್ತು ಟೈಟಸ್ ನೊರೊನ್ಹಾ, ಮಾಲಿಕರು, ರಾಹುಲ್ ಜಾಹೀರಾತು ಸಂಸ್ಥೆ, ಮಂಗಳೂರು ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿದ್ದರು.
ಗೌರವ ಅತಿಥಿಗಳಾಗಿ ಜಿಯಾನ್ ಲವಿನಾ ಮೊಂತೇರೊ, ಅಧ್ಯಕ್ಷರು, ಮಂಜೇಶ್ವರ ಗ್ರಾಮ ಪಂಚಾಯತ್; ಸ್ಟ್ಯಾನಿ ಬೆಳಾ, ನಿರ್ಮಾಣ ನಿರ್ದೇಶಕರು, ದಾಯ್ಜಿವರ್ಲ್ಡ್ ಟಿವಿ; ರೆ. ಸಿರಿಲ್ ಡಿಸೋಜಾ, ಸ್ನೇಹಾಲಯದ ಚಾಪ್ಲಿನ್; ಸ್ಟ್ಯಾನಿ ಫೆರ್ನಾಂಡಿಸ್ ಮತ್ತು ವಿದ್ಯಾ ಫೆರ್ನಾಂಡಿಸ್, ಬಾಹ್ರೇಯ್ನ್, ವಿನ್ಸೆಂಟ್ ಜೆರೋಮ್ ಡಿಸಿಲ್ವಾ ಮತ್ತು ಸಿಲ್ವಿಯಾ ರೀಟಾ ಡಿಸಿಲ್ವಾ ಹಾಗೂ ಡೆನ್ಜಿಲ್ ಮೊನಿಸ್ ಮತ್ತು ಮರಿಟಾ ಮೊನಿಸ್ (ಕುವೇಯ್ಟ್) ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles