ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ವಿಭಾಗ ಸಂಖ್ಯೆ 31, ಬಿಜೈ ನ್ಯೂರೋಡ್ ಪ್ರದೇಶದ ರಸ್ತೆ ಅಗಲೀಕರಣ, ಒಳಚರಂಡಿ, ವಿದ್ಯುತ್ ಕಂಬ ಸ್ಥಳಾಂತರ ಮತ್ತು ಕಾಂಕ್ರೀಟೀಕರಣ ಕಾಮಗಾರಿಕೆಯನ್ನು ಪಾಲಿಕೆಯ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ.
ಕಾಮಗಾರಿ ಸುಗಮ ರೀತಿಯಲ್ಲಿ ತ್ವರಿತವಾಗಿ ನಿರ್ವಹಿಸಲು ರಸ್ತೆಯನ್ನು ಮಾರ್ಚ್ 11 ರಿಂದ ಮುಚ್ಚಲಾಗುತ್ತದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಕಾಮಗಾರಿಯನ್ನು ನಿರ್ವಹಿಸುವ ಅವಧಿಯಲ್ಲಿ ಅನುಕೂಲವಾಗುವಂತೆ ಪರ್ಯಾಯವಾಗಿ ಬಿಜೈ, ಕಾಪಿಕಾಡು ರಸ್ತೆಯನ್ನು ಉಪಯೋಗಿಸುವಂತೆ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ