ಮ೦ಗಳೂರು: ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಶನ್ ತನ್ನ ಮತ್ತೊಂದು ಹೊಸ ಅಪಾರ್ಟ್’ಮೆಂಟ್ ಯೋಜನೆ ‘ರೋಹನ್ ಮಿರಾಜ್’ಗೆ ಏ.5 ರಂದು) ಸಂಜೆ 5 ಗಂಟೆಗೆ ಭೂಮಿಪೂಜೆಯನ್ನು ನಡೆಸಲಿದೆ. ಈ ಹೊಸ ಯೋಜನೆಯು ಕುಲಶೇಖರ ಬೈತುರ್ಲಿಯ ಪ್ರಧಾನ ರಸ್ತೆಯ ರೋಹನ್ ಎಸ್ಟೇಟ್ ಬಡಾವಣೆಯ ಮುಖ್ಯದ್ವಾರದಲ್ಲಿ ತಲೆ ಎತ್ತಲಿದೆ.
ರೋಹನ್ ಮಿರಾಜ್:
ರೋಹನ್ ಮಿರಾಜ್ ಮಂಗಳೂರಿನ ನಗರ ಜೀವನವನ್ನು ಪುನರ್ವ್ಯಾಖ್ಯಾನಿಸುವ ಉದ್ದೇಶದಿಂದ ಯೋಜನಾಬದ್ಧವಾಗಿ ರೂಪಿಸಲಾದ ಅತ್ತ್ಯುತ್ತಮ ರೆಸಿಡೆನ್ಶಿಯಲ್ ಯೋಜನೆಯಾಗಿ ಈ ಪ್ರಾಜೆಕ್ಟ್ 50 ಉತ್ತಮವಾಗಿ ವಿನ್ಯಾಸಗೊಳಿಸಲಾದ 2 ಬಿ.ಎಚ್.ಕೆ. ಅಪಾರ್ಟ್’ಮೆಂಟ್’ಗಳನ್ನು ಒಳಗೊಂಡಿದೆ, ಇದು ಹತ್ತು ಮಹಡಿಗಳಲ್ಲಿ ಹರಡಿಕೊಂಡಿದ್ದು, ಪ್ರತಿ ಘಟಕವು ಸ್ಥಳಾವಕಾಶ ಮತ್ತು ಸೊಗಸನ್ನು ಹೊಂದಿದೆ. 1060 ರಿಂದ 1080 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್’ಮೆಂಟ್’ಗಳು ಆಧುನಿಕ ನಗರ ಕುಟುಂಬಗಳ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ, ಹಾಗೂ ಸೌಕರ್ಯ, ಶೈಲಿ ಮತ್ತು ಕಾರ್ಯಕ್ಷಮತೆಯ ಮಿಶ್ರಣವನ್ನು ಹೊಂದಿದೆ.
ಸ್ವಯಂಚಾಲಿತ ಲಿಫ್ಟ್’ಗಳು, ಪವರ್ ಬ್ಯಾಕಪ್, ವಿಟ್ರಿಫೈಡ್ ಟೈಲ್ ಫ್ಲೋರಿಂಗ್, ಮತ್ತು ಸುರಕ್ಷತೆಗಾಗಿ ಸರ್ವಿಲೆನ್ಸ್ ಕ್ಯಾಮೆರಾಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಮಳೆನೀರಿನ ಕೊಯಿಲು ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ನಿರ್ಮಾಣ ಪದ್ಧತಿಗಳನ್ನು ಒಳಗೊಂಡಿದೆ. ಅತ್ತ್ಯುತ್ತಮ ದರ್ಜೆಯ ಕಟ್ಟಡ ನಿರ್ಮಾಣ ಪರಿಕರಗಳನ್ನು ಉಪಯೋಗಿಸಲಿದ್ದು, ಸಧೃಡ ಬಹುಮಹಡಿ ರೆಸಿಡೆನ್ಶಿಯಲ್ ಕಟ್ಟಡವು ನಿರ್ಮಾಣಗೊಳ್ಳಲಿದೆ.
ಕುಲಶೇಖರ ಬೈತುರ್ಲಿಯಲ್ಲಿನ ರೋಹನ್ ಮಿರಾಜ್, ಮಂಗಳೂರಿನ ಹಚ್ಚಹಸುರಿನ ಪರಿಸರದಲ್ಲಿದ್ದು, ಶಿಕ್ಷಣಸಂಸ್ಥೆಗಳು, ಚರ್ಚ್ ಪೂಜಾ ಸ್ಥಳಗಳು ಮತ್ತು ಮಂಗಳೂರು-ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿದ್ದು ಕೆಲವೇ ನಿಮಿಷಗಳಲ್ಲಿ ನಂತೂರ್ ಜಂಕ್ಷನ್ ತಲುಪಬಹುದಾಗಿದೆ.
ರೋಹನ್ ಕಾರ್ಪೊರೇಶನ್:
ಮೂರು ದಶಕಗಳಿಗೂ ಹೆಚ್ಚು ಕಾಲದ ಉನ್ನತ ಪರಂಪರೆಯನ್ನು ಹೊಂದಿರುವ ರೋಹನ್ ಕಾರ್ಪೊರೇಶನ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರನ್ನು ಗಳಿಸಿದೆ. ಕಂಪನಿಯು ಕರಾವಳಿ ಕರ್ನಾಟಕದಾದ್ಯಂತ ಅನೇಕ ರೆಸಿಡೆನ್ಶಿಯಲ್, ಕಮರ್ಶಿಯಲ್ ಮತ್ತು ಲೇಔಟ್ ಪ್ರಾಜೆಕ್ಟ್’ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ಗುಣಮಟ್ಟ ಮತ್ತು ವಿನ್ಯಾಸಗಳಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ರೋಹನ್ ಕಾರ್ಪೊರೇಶನ್ನಿನ ಹಲವು ಯೋಜನೆಗಳು ಸದ್ಯದಲ್ಲೇ ಆರಂಭಗೊಳ್ಳಲಿವೆ, ಅಲ್ಲದೆ ರೋಹನ್ ಮಿರಾಜ್ ಅಪಾರ್ಟ್ಮೆಂಟ್ಗಳು ಅತ್ಯಾಕರ್ಷಕ ಕಂತುಗಳಲ್ಲಿ ದೊರೆಯಲಿವೆ.
ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ,
ಬಿಜೈ, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
