ಬೆಂಗಳೂರು: – ಮಂಗಳೂರಿನ ಪ್ರಮುಖ ಬಿಲ್ಡರ್ ಹಾಗೂ ಡೆವಲಪರ್ ರೋಹನ್ ಕಾರ್ಪೊರೇಷನ್, ಕರ್ನಾಟಕಕ್ಕೆ ತನ್ನ ಅಧಿಕೃತ ಬ್ರ್ಯಾಂಡ್ ರಾಯಭಾರಿಯಾಗಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಘೋಷಿಸಿದೆ.
ಮಂಗಳೂರಿನಲ್ಲಿ ಸ್ಥಾಪನೆಯಾದ ಮತ್ತು ಕೇಂದ್ರಕಚೇರಿ ಹೊಂದಿರುವ, ರೋಹನ್ ಕಾರ್ಪೊರೇಷನ್ ವಿಶ್ವಾಸ, ಗುಣಮಟ್ಟ ಹಾಗೂ ಅತ್ಯುತ್ತಮತೆಗೆ ಅನುರೂಪ ಪದವಾಗಿದೆ. ಕಳೆದ ಮೂರು ದಶಕಗಳಿಂದ, ಕಂಪನಿ ಹಿಲ್ ಕ್ರೆಸ್ಟ್, ಹೈ ಕ್ರೆಸ್ಟ್, ರೋಹನ್ ಸಿಟಿ ಮತ್ತು ರೋಹನ್ ಸ್ಕ್ವೇರ್ ಇತ್ಯಾದಿ ಪ್ರಮುಖ ಡೆವಲಪ್‌ಮೆಂಟ್‌ಗಳೊಂದಿಗೆ ಮಂಗಳೂರಿನ ಆಕಾಶದೆತ್ತರದ ಕಟ್ಟಡಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.- ಈ ಯೋಜನೆಗಳು ಆಧುನಿಕತೆ, ಸಮುದಾಯ ಚಾಲಿತ ನಗರ ಸ್ಥಳದ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ.
ರೋಹನ್ ಕಾರ್ಪೊರೇಷನ್‌ನ ಸಂಸ್ಥಾಪಕರು ಹಾಗೂ ಅಧ್ಯಕ್ಷ ಡಾ. ರೋಹನ್ ಮೊಂತೇರೊ ಅವರು “ಶಾರುಖ್ ಖಾನ್‌ರನ್ನು ಹೊಂದಿರುವುದು ರೋಹನ್ ಕಾರ್ಪೊರೇಷನ್ ಪಾಲುದಾರಿಕೆಗಿಂತ ಹೆಚ್ಚಿನದ್ದೆಂದು ಪ್ರತಿನಿಧಿಸುತ್ತದೆ- ಇದು ಕನಸು ಹಾಗೂ ಬದ್ಧತೆಯ ಸಮ್ಮಿಲನವಾಗಿದೆ. ಶಾರುಖ್ ಖಾನ್ ತಮ್ಮ ಪರಿಶ್ರಮ ಹಾಗೂ ಬದ್ಧತೆಯಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿರುವಂತೆ, ರೋಹನ್ ಕಾರ್ಪೊರೇಷನ್ ಜೀವನವನ್ನು ಮಾರ್ಪಡಿಸುವ ಮೂಲಕ ಸ್ಫೂರ್ತಿ ನೀಡುವ ಆಕಾಂಕ್ಷೆ ಹೊಂದಿದೆ. ಅವರನ್ನು ನಮ್ಮೊಂದಿಗೆ ಹೊಂದುವ ಮೂಲಕ, ನಾವು ಕರ್ನಾಟಕ ಹಾಗೂ ಅದರಾಚೆಗೆ ನಗರ ಜೀವನವನ್ನು ಮರುವ್ಯಾಖ್ಯಾನಿಸುವ ನಮ್ಮ ಭರವಸೆಗೆ ಬದ್ಧರಾಗಿದ್ದೇವೆ ಎ೦ದು ಹೇಳಿದ್ದಾರೆ..”
ಶಾರುಖ್ ಖಾನ್ ಅವರು “ನನ್ನ ಪರಿಶ್ರಮ, ನಾವೀನ್ಯತೆ ಮತ್ತು ಹೃದಯವನ್ನು ಪ್ರತಿಫಲಿಸುವ ಬ್ರ್ಯಾಂಡ್ ಆಗಿರುವ ರೋಹನ್ ಕಾರ್ಪೊರೇಷನ್‌ನೊಂದಿಗೆ ಕೈಜೋಡಿಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಸುಸ್ಥಿರ, ಸಮುದಾಯ ಚಾಲಿತ ಜಾಗಗಳು ನನ್ನಲ್ಲಿ ಆಳವಾಗಿ ಪ್ರತಿಧ್ವನಿಸುತ್ತಿದೆ. ಹೃದಯ ಹಾಗೂ ದೃಷ್ಟಿಕೋನದೊಂದಿಗೆ ನಾಳಿನ ನಗರಗಳನ್ನು ರೂಪಿಸುವ ಅದ್ಭುತ ಪ್ರಯಾಣದ ಭಾಗವಾಗಿರಲು ನಾನು ಎದುರು ನೋಡುತ್ತಿದ್ದೇನೆಎ೦ದು ಹೇಳಿದ್ದಾರೆ .”
ಸಮಗ್ರತೆ, ಅತ್ಯುತ್ತಮತೆ, ನಾವೀನ್ಯತೆ, ಹಾಗೂ ಸುಸ್ಥಿರತೆಯ ಪ್ರಮುಖ ಮೌಲ್ಯಗಳೊಂದಿಗೆ, ಶಾರುಖ್ ಖಾನ್‌ರೊಂದಿಗೆ ರೋಹನ್ ಕಾರ್ಪೊರೇಷನ್‌ರವರ ಪಾಲುದಾರಿಕೆ ಹೊಸ ಕ್ರಿಯಾತ್ಮಕ ಬೆಳವಣಿಗೆ, ವ್ಯಾಪಕ ತೊಡಗುವಿಕೆ ಮತ್ತು ದೃಢವಾದ ಬ್ರ್ಯಾಂಡ್ ಅಸ್ತಿತ್ವದ ನವಯುಗವನ್ನು ಸಂಕೇತಿಸುತ್ತಿದ್ದು – ಇದು ಕರ್ನಾಟಕದಾದ್ಯಂತ ಕನಸುಗಾರರ ಹೊಸ ತಲೆಮಾರು ಮತ್ತು ಮನೆ ಮಾಲೀಕರಿಗೆ ಸ್ಫೂರ್ತಿಯಾಗಿದೆ ರೋಹನ್ ಕಾರ್ಪೊರೇಷನ್ ಪ್ರಕಟನೆ ತಿಳಿಸಿದೆ.
