ಮ೦ಗಳೂರು: ನಂದಿನಿ ನದಿಯ ಹಿನ್ನೀರಿನ ತಟದಲ್ಲಿ ರೋಹನ್ ಎಸ್ಟೇಟ್ ಮುಕ್ಕ ಬಡಾವಣೆ ನಿರ್ಮಾಣವಾಗಿದೆ. ಪರಿಸರದ ಶ್ರೀಮಂತಿಕೆಯ ಜತೆಗೆ ಅತ್ಯಂತ ಸುರಕ್ಷಿತ ಹಾಗೂ ಆಕರ್ಷಕವಾಗಿ ಬಡಾವಣೆಯು ಮೂಡಿ ಬಂದಿದೆ. ಪ್ರಕೃತಿ ಜತೆಗೆ ಮಿಳಿತವಾದ ಆರಾಮದಾಯಕ ಬದುಕಿಗಾಗಿ ಈ ಬಡಾವಣೆಯನ್ನು ವಿನ್ಯಾಸಗೊಳಿಸಲಾಗಿದೆ. ಇದೊಂದು ಪರಿಪೂರ್ಣವಾದ ರೆಸಾರ್ಟ್ ಮಾದರಿಯ ಬಡಾವಣೆಯಾಗಿ ರೂಪುಗೊಂಡಿದೆ.ಮುಂದಿನ 15 ದಿನಗಳ ಒಳಗೆ ಬುಕ್ಕಿಂಗ್ ಮಾಡುವವರಿಗೆ ಶೇ 15 ರಿಯಾಯಿತಿ ನೀಡಲಾಗುವುದು ಎಂದು ರೋಹನ್ ಕಾರ್ಪೊರೇಷನ್ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ತಿಳಿಸಿದ್ದಾರೆ.
ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿ ಕೊಂಡ ಸುದ್ದಿಗೋಷ್ಥಿಯನ್ನುದ್ದೇಶಿಸಿ ಮಾತನಾಡಿದ ಅವರು ರೋಹನ್ ಎಸ್ಟೇಟ್ ಮುಕ್ಕ. ಇದು ರೆಸಾರ್ಟ್ ಅಲ್ಲ. ರೆಸಾರ್ಟ್ ಶೈಲಿಯ ವಸತಿ ಬಡಾವಣೆ. ಶ್ರೀಮಂತಿಕೆ, ಐಶಾರಾಮಿ ಮಾದರಿ ಎಂಬಂತೆ ಪ್ರಕೃತಿಯ ಮಡಿಲಿನಲ್ಲಿ ತಲೆ ಎತ್ತಿ ನಿಂತಿರುವ ವಸತಿ ಬಡಾವಣೆಯಾಗಿದೆ. ಇಲ್ಲಿ ವಾಸಿಸುವವರಿಗೆ ಆಭಿಜಾತ ರೆಸಾರ್ಟ್ ಶೈಲಿಯ ಜೀವನದ ಅನುಭವ ಸಿಗಲಿದೆ. ನದಿ ಕಿನಾರೆಯಲ್ಲಿ ಸೂಕ್ತ ರೀತಿಯ ತಡೆ ಗೋಡೆಯನ್ನು ಪ್ರವಾಸೋದ್ಯಮದ ನೆಲೆಯಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಲಾಗಿದೆ ಎ೦ದರು.
ಈ ರೀತಿಯ ಶ್ರೀಮಂತಿಕೆಯ ಲೇಔಟ್ ಇಂದಿನವರೆಗೆ ಕರಾವಳಿ ಭಾಗದಲ್ಲಿ ನಿರ್ಮಾಣವಾಗಲಿಲ್ಲ ಎಂಬಂತೆ ತಲೆ ಎತ್ತಿದೆ. ಈ ರೀತಿಯ ನದಿ ಕಿನಾರೆಯು ಸಿಗುವುದೇ ಅಪರೂಪ. ಈ ರೀತಿಯ ಅಪರೂಪದ ಸ್ಥಳ, ಪ್ರಮುಖ ಸ್ಥಳದಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡುವುದರಿಂದಾಗಿಯೇ ರೋಹನ್ ಕಾರ್ಪೋರೇಷನ್ನ ಪ್ರತಿಯೊಂದು ವಸತಿ ಸಮುಚ್ಚಯ ಹಾಗೂ ಬಡಾವಣೆಗೆ ಅತ್ಯಂತ ಹೆಚ್ಚಿನ ಬೇಡಿಕೆ ಇರುತ್ತದೆ. ಇತರ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಹೋಲಿಸಿದರೆ ಶ್ರೇಷ್ಠತೆಯಿಂದ ಭಿನ್ನವಾಗಿ ಕಾಣಸಿಗುತ್ತದೆ ಎ೦ದವರು ವಿವರಿಸಿದರು.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿರುವ ಮಂಗಳೂರಿನ ರೋಹನ್ ಕಾರ್ಪೋರೇಷನ್, ನಗರದ ಪ್ರತಿಷ್ಠಿತ ಪ್ರದೇಶದಲ್ಲಿ, ಅತಿ ಹೆಚ್ಚು ವಸತಿ ಸಮುಚ್ಚಯ ಹಾಗೂ ವಸತಿ ಬಡಾವಣೆಯನ್ನು ಆಕರ್ಷಕವಾಗಿ ನಿರ್ಮಾಣ ಮಾಡಿದ ಸಂಸ್ಥೆ ಎಂದು ಖ್ಯಾತಿಗೆ ಪಾತ್ರವಾಗಿದೆ. ಮಂಗಳೂರು ನಗರದ ಯಾವುದೇ ಪ್ರಮುಖ ಬೀದಿಗಳಲ್ಲಿ ರೋಹನ್ ಕಾರ್ಪೋರೇಷನ್ ಹೆಸರು ರಾರಾಜಿಸುತ್ತಿರಬೇಕು ಎಂಬ ಕನಸಿನಿಂದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೊದಲೇ ಸ್ಥಳಕ್ಕೆ ಪ್ರಮುಖ ಒತ್ತು ನೀಡುತ್ತಾರೆ.ಕಪಿತಾನಿಯೋ ಬಳಿ ರೋಹನ್ ಸ್ಕ್ವೇರ್ ಎಂಬ ಬೃಹತ್ ಯೋಜನೆ ಕೈಗೆತ್ತಿಕೊಂಡು ಗ್ರಾಹಕರಿಗೆ ಆಕರ್ಷಕ ಕೊಡುಗೆ ನೀಡಿ ತಿಂಗಳಿನೊಳಗೆ ಶೇ. 90ರಷ್ಟು ಮನೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಮಾರಾಟ ಮಾಡಿ ಕ್ರಾಂತಿಯನ್ನೇ ಮಾಡಿದರು. ಇದು ಹೂಡಿಕೆಯ ಉದ್ದೇಶದಿಂದ ಖರೀದಿ ಮಾಡಿದ ಗ್ರಾಹಕರಿಗೆ ಹೆಚ್ಚಿನ ಲಾಭವಾಗಿದೆ. ಬಳಿಕ ಪಕ್ಷಿಕೆರೆಯಲ್ಲಿ ಬೃಹತ್ ವಸತಿ ಬಡಾವಣೆ ನಿರ್ಮಾಣ ಮಾಡಿ, ಎಲ್ಲವನ್ನೂ ದಾಖಲೆ ಅವಧಿಯಲ್ಲಿ ಮಾರಾಟ ಮಾಡಿದ ಹೆಗ್ಗಳಿಕೆ ರೋಹನ್ ಕಾರ್ಪೋರೇಷನ್ಗೆ ಸಲ್ಲುತ್ತದೆ. ಈ ನಡುವೆ ಬಿಜೈ ಬಳಿ ರೋಹನ್ ಸಿಟಿ ಎಂಬ ಬೃಹತ್ ಯೋಜನೆ ಕೈಗೆತ್ತಿಕೊಂಡು ವಾರ್ಷಿಕವಾಗಿ ಶೇ. 7.5ರಷ್ಟು ಖಾತರಿ ರಿಟರ್ನ್ ಅನ್ನು ಗ್ರಾಹಕರಿಗೆ ನೀಡುತ್ತಿರುವ ಹೆಗ್ಗಳಿಕೆಯಾಗಿದೆ. ಮಂಗಳೂರು ನಗರದ ಪ್ರಮುಖ ಪ್ರದೇಶದಲ್ಲಿ ಆಕರ್ಷಕ ವಸತಿ ಸಮುಚ್ಚಯ ನಿರ್ಮಾಣ ಮಾಡಿ, ನಗರಕ್ಕೆ ಹೊಸ ರೂಪವನ್ನು ಸಂಸ್ಥೆಯು ನೀಡುತ್ತಿದೆಎ೦ದರು.
ರೋಹನ್ ಎಸ್ಟೇಟ್ ಮುಕ್ಕ – ವಿಶೇಷತೆಗಳು:
• ನದಿ ತೀರದಲ್ಲಿನ ವಸತಿ ಬಡಾವಣೆ• ಗೇಟೆಡ್ ಕಮ್ಯೂನಿಟಿ• ಅಂತಾರಾಷ್ಟ್ರೀಯ ಗುಣಮಟ್ಟದ ಕ್ಲಬ್ ಹೌಸ್• ಮರೀನಾ-ಮನರಂಜನಾ ಬೋಟಿಂಗ್ ಚಟುವಟಿಕೆಗಳ ತಾಣ (ಬೋಟಿಂಗ್ ಮತ್ತು ಕಯಾಕಿಂಗ್)
• ಇನ್ಫಿನಿಟಿ ಈಜುಕೊಳ• ಮಕ್ಕಳಿಗೆ ಪ್ರತ್ಯೇಕ ಈಜುಕೊಳ• ಬಡಾವಣೆಯೊಳಗೆ ಫ್ಯಾಮಿಲಿ ರೆಸ್ಟೋರೆಂಟ್• ಸೈಕ್ಲಿಂಗ್ ಟ್ರ್ಯಾಕ್• ವಾಕಿಂಗ್ ಟ್ರ್ಯಾಕ್• ಔಟ್ಡೋರ್ ಜಿಮ್• ಯೋಗ ಲಾನ್• ಮೆಡಿಟೇಷನ್ ಸೆಂಟರ್• ಸ್ಪಾ• ಲೈಫ್ ಸೈಜ್ ಚೆಸ್ •ಮಕ್ಕಳಿಗೆ ಆಟದ ಮೈದಾನ • ಸ್ಕೇಟಿಂಗ್ ರಿಂಕ್• ಬ್ಯಾಡ್ಮಿಂಟನ್ ಕೋರ್ಟ್• ಬಿಲಿಯಡ್ರ್ಸ್ • ಸಭಾಂಗಣ• ಲಾಡ್ಜಿಂಗ್• ಆ್ಯಂಪಿಥಿಯೇಟರ್ • ಸುರಕ್ಷತೆ ದೃಷ್ಟಿಯಿಂದ ಬಡಾವಣೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಬೃಹತ್ ಕಾಂಪೌಂಡ್ ಮತ್ತು ಸುರಕ್ಷತಾ ಗೇಟ್• 40 ಅಡಿ ಕಾಂಕ್ರೀಟ್ ಮುಖ್ಯ ರಸ್ತೆ• 30 ಅಡಿ ಕಾಂಕ್ರೀಟ್ ಒಳ ರಸ್ತೆ • ಆಕರ್ಷಕ ಸೋಲಾರ್ ಬೀದಿ ದೀಪ ಅಳವಡಿಕೆ• ಪ್ರಧಾನ ದ್ವಾರದಲ್ಲಿ ದಿನದ 24 ಗಂಟೆಯೂ ಸೆಕ್ಯೂರಿಟಿ ವ್ಯವಸ್ಥೆ• ಆಕರ್ಷಕ ಲ್ಯಾಂಡ್ ಸ್ಕೇಪಿಂಗ್• ವಾಸ್ತು ಪ್ರಕಾರ ಪ್ರತಿ ನಿವೇಶನಕ್ಕೂ ಸಂಪರ್ಕ• ಮಳೆ ನೀರು ಕೊಯ್ಲು, ನೀರು ಶುದ್ಧೀಕರಣ ಘಟಕ• ಭೂಗತ ಒಳಚರಂಡಿ ಪೈಪ್ಲೈನ್ • ಹೂಡಿಕೆ ಮತ್ತು ಮನೆ ನಿರ್ಮಾಣ ಎರಡಕ್ಕೂ ಯೋಗ್ಯ• ಬ್ಯಾಂಕ್ ಸಾಲ ಸೌಲಭ್ಯ• ಸೂಪರ್ ಮಾರ್ಕೆಟ್• ಹಸಿರೀಕರಣಕ್ಕೆ ವಿಶೇಷ ಒತ್ತು • ಭವಿಷ್ಯದಲ್ಲೂ ಸಂಸ್ಥೆಯಿಂದಲೇ ಲೇ ಔಟ್ ನಿರ್ವಹಣೆ
ಹೆಚ್ಚಿನ ವಿವರಗಳಿಗಾಗಿ:ROHAN CORPORATIONRohan City, Main Road Bejai, Mangalore 575004Ph: 98456 07725, 98454 90100, 90363 92628, 98456 07724 www.rohancorporation.in ಸಂಪರ್ಕಿಸಬಹುದಾಗಿದೆ.
ಸುದ್ದಿ ಗೋಷ್ಠಿಯಲ್ಲಿ ರೋಹನ್ ಕಾರ್ಪೊರೇಷನ್ ಜನರಲ್ ಮ್ಯಾನೇಜರ್ ಸುಮನ,ನಿರ್ದೇಶಕ ಡಿಯಾನ್,ಮಾರುಕಟ್ಟೆ ಮ್ಯಾನೇಜರ್ ಜೊಯೆಲ್ ಕ್ರಾಸ್ತಾ ಉಪಸ್ಥಿತರಿದ್ದರು.