29 C
Karnataka
Tuesday, March 4, 2025

ರೋಟರಿ ಜಿಲ್ಲಾ ಮಟ್ಟದ ರಸಪ್ರಶ್ನಾ ಸ್ಪರ್ಧಾಕೂಟ

ಮಂಗಳೂರು : ರೋಟರಿ ಮಂಗಳೂರು ಸೆಂಟ್ರಲ್ಸಂಸ್ಥೆಯ ಆಶ್ರಯದಲ್ಲಿ ರೋಟರಿ ಮಾಹಿತಿ ಮತ್ತು ಜಾಗೃತಿಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ ವಾರ್ಷಿಕ ‘‘ಅಂತರ
ರೋಟರಿ ಕ್ಲಬ್ ಸ್ಪರ್ಧಾ ಕೂಟ’’ ವನ್ನು ಫೆ. 28 ರಂದು ನಗರದ ಹೋಟೇಲ್ ಮೋತಿ ಮಹಲ್ ಸಭಾಂಗಣದಲ್ಲಿ ಸಂಜೆ 8ಕ್ಕೆ ಆಯೋಜಿಸಲಾಗಿದೆ. ಈ ಸ್ಪರ್ಧಾ ಕೂಟವು ಕೇವಲ
ರೋಟರಿ ಸಂಸ್ಥೆಯ ಆಡಳಿತ, ವಿಷಯ ಹಾಗೂ ಚಟುವಟಿಕೆಗಳ ಬಗ್ಗೆ ಜರಗಿಸಲಾಗುವುದು.
ಮೈಸೂರು ನಗರ ಮೂಲದ ಖ್ಯಾತ ವಾಣಿಜೋದ್ಯಮಿ ಹಾಗೂ ಮಾಜಿ ರೋಟರಿ ಗವರ್ನರ್ ರೋ ಗುರುರಾಜ್ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ಕೂಟದ ವಿಜೇತರಿಗೆ ರೋಟರಿ
ಆಕರ್ಷಕ ಪ್ರಶಸ್ತಿ, ಪ್ರಮಾಣ ಪತ್ರ, ನಗದುಬಹುಮಾನವನ್ನು ಹಸ್ತಾಂತರಿಸಲಿರುವರು. ವಲಯ ಸಹಾಯಕಗವರ್ನರ್ ರೋ ಕೆ.ಎಂ. ಹೆಗ್ಡೆ ಅವರು ಗೌರವ ಅತಿಥಿಯಾಗಿಪಾಲ್ಗೊಂಡು ಸಂಸ್ಥೆಯ ವಾರ್ತಾ ಪತ್ರಿಕೆಯನ್ನು
ಬಿಡುಗಡೆಗೊಳಿಸಲಿರುವರು. ಕ್ಲಬ್‌ನ ಅಧ್ಯಕ್ಷರಾದ ರೋಬ್ರಿಯಾನ್ ಪಿಂಟೋ ಅಧ್ಯಕ್ಷತೆ ವಹಿಸಲಿರುವರು.
ರೋಟರಿ ಜಿಲ್ಲಾ 3181 ಗೆ ಒಳಪಟ್ಟ ರೋಟರಿ ಕ್ಲಬ್‌ನ 2ಸದಸ್ಯರನ್ನೊಳಗೊಂಡ ತಂಡದ ಹೆಸರನ್ನು ಫೆ.27ರ ಒಳಗೆ ಉಚಿತವಾಗಿ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ
ಸ್ಪರ್ಧಾಕೂಟ ನಿರೂಪಕರಾದ ರೋ ಡಾ. ದೇವದಾಸ್ ರೈ ಅವರನ್ನು 98450 81145 ಮೂಲಕ ಸಂಪರ್ಕಿಸಬಹುದು ಎ೦ದು ಪ್ರಕಟನೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles