ಮಂಗಳೂರು: ಪುಣೆಯ ಎಂ.ಐ.ಟಿ. ವಲ್ಡ್‌೯ ಪೀಸ್ ವಿಶ್ವವಿದ್ಯಾಲಯದಲ್ಲಿ 13ನೇ ಭಾರತೀಯ ಚಾತ್ರಾ ಸಂಸದ್ (ಇಂಡಿಯನ್ ಸ್ಟೂಡೆಂಟ್ ಪಾರ್ಲಿಮೆಂಟ್) ವತಿಯಿಂದ ನಡೆಯುತ್ತಿರುವ ದುಂಡುಮೇಜಿನ ಸಮ್ಮೇಳನದಲ್ಲಿ ಶೈಕ್ಷಣಿಕ ಅಧಿವೇಶನದ ಅಧ್ಯಕ್ಷತೆಯನ್ನು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ವಹಿಸಿದ್ದರು.
ಸಮ್ಮೇಳನದಲ್ಲಿ “ಪ್ರಜಾಪ್ರಭುತ್ವ 2.0: ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮಗಳು ಯಾವ ರೀತಿ ಪ್ರಜಾಪ್ರಭುತ್ವ ಪ್ರಜಾತಂತ್ರ ವ್ಯವಸ್ಥೆಯನ್ನು ಮನ್ವಂತರಗೊಳಿಸುತ್ತಿವೆ? ವಿಷಯದ ಬಗ್ಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಸಭಾಧ್ಯಕ್ಷರು ಭಾಷಣ ಮಾಡಿದರು.