ಮ೦ಗಳೂರು: ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಎಐಎ೦ಐಟಿ ಕೇಂದ್ರವು ಡಾ. ಫಾ. ಕಿರಣ್ ಕೋತ್ (ಎಐಎ೦ಐಟಿ ನಿರ್ದೇಶಕ) ಮತ್ತು ಡಾ. ನಿಕ್ಕಿ ಫೆನ್ನರ್ನ್ (ಜಡ್ಸನ್ ವಿಶ್ವವಿದ್ಯಾಲಯದ ಉಪಾಧ್ಯಕ್ಷ) ಅವರ ನೇತೃತ್ವದಲ್ಲಿ ಯುಎಸ್ ಎ ಜಡ್ಸನ್ ವಿಶ್ವವಿದ್ಯಾಲಯ ಜೊತೆ ಒಪ್ಪಂದದ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದದ ಉದ್ದೇಶವೆಂದರೆ ಜಡ್ಸನ್, ಸಂತ ಅಲೋಸಿಯಸ್ ವಿಶ್ವವಿದ್ಯಾನಿಲಯ ಮತ್ತು ಕ್ಯಾಂಪಸ್ ಸಂಸ್ಥೆಗಳ ನಡುವೆ ಶೈಕ್ಷಣಿಕ ಸಹಯೋಗ, ಸಂಶೋಧನೆ, ಸಂಪನ್ಮೂಲ ಹಂಚಿಕೆ ಮತ್ತು ಶ್ರೇಷ್ಠತಾ ಕೇಂದ್ರ ಸ್ಥಾಪನೆಯ ಸಾಧ್ಯತೆಯನ್ನು ಅನ್ವೇಷಿಸುವುದು. ಇದರ ಮೂಲಕ ಅಂತರರಾಷ್ಟ್ರೀಯ ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸಲು ಮತ್ತು ಎಲ್ಲಾ ಭಾಗಿಗಳಿಗೆ ಲಾಭದಾಯಕವಾದ ಶಿಕ್ಷಣ ಅವಕಾಶಗಳನ್ನು ರೂಪಿಸುವುದು.
