ಮಂಗಳೂರು: ಮಂಗಳೂರಿನ ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್ ಮೈಸೂರಿನ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರಾದೇಶಕ ಕಲೆಗಳ ವಿಶ್ವವಿದ್ಯಾನಿಲಯದೊಂದಿಗೆ ಸಂಗೀತ ಮತ್ತು ಲಲಿತಾಕಲೆಗಳ ಸರ್ಟಿಪಿಕೇಟ್ ಕೋರ್ಸ್‌ಗಳ ಶಿಕ್ಷಣ ಕುರಿತು ಒಡಂಬಡಿಕೆ ಮಾಡಿಕೊಂಡಿದೆ ಎಂದು ಸಂದೇಶ ಪ್ರತಿಷ್ಠಾನ ನಿರ್ದೇಶಕ ಫಾ ಸಂದೀಪ್ ಪೌಲ್ ಅವರು ಶುಕ್ರವಾರ
ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಈಗಾಗಲೇ ಪ್ರವೇಶಾತಿ ಆರಂಭವಾಗಿದ್ದುಜನವರಿಯಿಂದ ಕೋರ್ಸ್‌ಗಳು ಪ್ರಾರಂಭವಾಗಲಿದೆ . ವಿಶ್ವವಿದ್ಯಾನಿಲಯದ ಮಾರ್ಗಸೂಚಿಯಂತೆ ತರಗತಿಗಳು ನಡೆಯಲಿವೆ ಎಂದವರು ಹೇಳಿದರು.
ಹಿಂದೂಸ್ತಾನ್ ಶಾಸ್ತ್ರೀಯ ಸಂಗೀತ, ಕೀಬೋರ್ಡ್ , ಮೀಡಿಯಾ, ಪಾಶ್ಚಾತ್ಯ ನೃತ್ಯ ಹಾಗೂ ಭರತನಾಟ್ಯದಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಹಾಗೂ ಭರತನಾಟ್ಯದಲ್ಲಿ ಡಿಪ್ಲೋಮಾ ಕೋರ್ಸ್ ನೀಡಲಾಗವುದು. ಈ ಕೋರ್ಸ್‌ಗಳನ್ನು ಇತರ ಶಿಕ್ಷಣದೊಂದಿಗೆ ಪಡೆಯಲು ಸಾಧ್ಯವಾಗುವಂತೆ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಇದು ಹೆಚ್ಚುವರಿ ಅರ್ಹತೆಯಾಗಲಿದ್ದು
ಉದ್ಯೋಗಾವಕಾಶಗಳಿಗೆ ಪೂರಕವಾಗಲಿದೆ ಎಂದು ಸಂದೇಶ ಪ್ರತಿಷ್ಠಾನದ ಟ್ರಸ್ಟಿ ರಾಯ್ ಕ್ಯಾಸ್ತಲಿನೋ ವಿವರಿಸಿದರು.
ಸಂಸ್ಥೆಯ ಶಿಕ್ಷಕಿ ವಾಣಿ ರಾಜಗೋಪಾಲ್, ಫೋರ್‌ವಿಂಡ್ಸ್ ಸಂಸ್ಥೆಯ ಮುಖ್ಯಸ್ಥ ಎಲಿಯಾಸ್ ಫೆರ್ನಾಂಡೀಸ್ ಅವರು ಉಪಸ್ಥಿತರಿದ್ದರು.‡
ಕ್ರಿಸ್ಮಸ್ ಸಂದೇಶ :
ಕ್ರಿಸ್ಮಸ್ ಸಂದೇಶ ನೀಡಿದ ಸಂದೇಶ ಪ್ರತಿಷ್ಠಾನ ನಿರ್ದೇಶಕ ಫಾ ಸಂದೀಪ್ ಪೌಲ್ ಅವರು ಶಾಂತಿಗಾಗಿ ಕರೆಯೊಂದಿಗೆ ಕ್ರಿಸ್ಮಸ್ ಆಚರಿಸಲಾಗುತ್ತಿದೆ.ಕ್ರಿಸ್ಮಸ್ ಉತ್ಸಾಹವನ್ನು ಆಚರಿಸಲು ನಾವು ಒಟ್ಟುಗೂಡುತ್ತಿರುವಾಗ, ಸಂದೇಶ ಪ್ರತಿಷ್ಠಾನವು ನಮ್ಮೊಳಗೆ ಶಾಂತಿಯನ್ನು ಪೋಷಿಸುವ ಅವರ ಬದ್ಧತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಶಾಂತಿಯು ಸರ್ವೋಚ್ಚವಾದ ಜಗತ್ತನ್ನು ನಿರ್ಮಿಸುವತ್ತ ಈ ಉದಾತ್ತ ಪ್ರಯತ್ನವನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತದೆ. ಈ ಋತುವಿನ ಮಾರ್ಗದರ್ಶಿ ಬೆಳಕು ನಮ್ಮ ಮಾರ್ಗವನ್ನು
ಬೆಳಗಿಸಲಿ ಮತ್ತು ನಾವುಹೋದಲ್ಲೆಲ್ಲಾ ಸೌಹಾರ್ದತೆ ಮತ್ತು ಸಹಾನುಭೂತಿಯನ್ನು ಹರಡುವ ಶಾಂತಿಯ
ರಾಯಭಾರಿಗಳಾಗಿರಲು ನಮ್ಮನ್ನು ಪ್ರೇರೇಪಿಸಲಿ ಎ೦ದರು.