17.9 C
Karnataka
Saturday, November 23, 2024

ಡಾ ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಹಕಾರ ಕ್ಷೇತ್ರದ ಶಕ್ತಿ:ಯು.ಟಿ.ಖಾದರ್

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರಕ್ಕೆ ನವಚೈತನ್ಯವನ್ನು ತುಂಬಿ ತನ್ನದೇ ಆದ ಮಾದರಿಗಳನ್ನು ಈ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ ಸಹಕಾರ ರತ್ನ ಡಾ ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಹಕಾರ ಕ್ಷೇತ್ರದ ಶಕ್ತಿ. ಸಹಕಾರಿ ಕ್ಷೇತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಿದ್ದಾರೆ ಎ೦ದು ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಏಳನೆ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡಿರುವ ‘‘ಸಹಕಾರ ರತ್ನ’’ ಡಾ ಎಂ.ಎನ್. ರಾಜೇಂದ್ರ ಕುಮಾರ್ ಅವರ ಪದಗ್ರಹಣ ಸಮಾರ೦ಭ ಹಾಗೂ ೭೫ ನೇ ಹುಟ್ಟುಹಬ್ಬ ಆಚರಣೆಯ
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿರಿಯರು ಕಟ್ಟಿದ ಸಹಕಾರಿ ಕ್ಷೇತ್ರವನ್ನು ಡಾ ಎಂ.ಎನ್.ರಾಜೇಂದ್ರ ಕುಮಾರ್ ಅವರು ಪರಿಶ್ರಮದಿಂದ ಬೆಳೆಸುತ್ತಾ ಶಕ್ತಿ ನೀಡಿದವರು. ಇಂದು ಜಿಲ್ಲೆಯ ಸಹಕಾರ ಕ್ಷೇತ್ರ ರಾಜ್ಯದ ಮತ್ತು ರಾಷ್ಟ್ರದ ಸಹಕಾರ ಸಂಸ್ಥೆಗಳಿಗೆ ಮಾದರಿಯಾಗಿ ಬೆಳೆದಿದೆ. ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರದ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಕ್ಕೆ ಪಾತ್ರರಾಗಿರುವ ಕಾರಣ ಅವಿರೋಧ ವಾಗಿ ಆಯ್ಕೆಯಾಗಲು,ನಿರಂತರ ಗೆಲುವು ಸಾಧಿಸಲು ಕಾರಣವಾಯಿತು.ಸಹಕಾರಿ ಬ್ಯಾಂಕ್ ಹಲವು ಸಂಸ್ಥೆ ಗಳು ಬೆಳೆಯಲು ಸಹಾಯ ನೀಡಿದ ಕಾರಣ ಜಿಲ್ಲೆಯಲ್ಲಿ ಸಾಕಷ್ಟು ಕುಟುಂಬ ಗಳಿಗೆ ಆಧಾರವಾಗಿದೆ. ಮುಂದೆಯೂ ಸಹಕಾರಿಗಳ ಕನಸು ನನಸು ಮಾಡು ವಂತಾಗಲಿ ಎಂದು ಖಾದರ್ ಶುಭ ಹಾರೈಸಿದರು.
ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಸಹಕಾರ ರತ್ನ ಡಾ .ಎಂ.ಎನ್.ರಾಜೇಂದ್ರ ಕುಮಾರ್ ಅವರ ಸಾಧನೆ ಅಪೂರ್ವವಾದುದು. 28 ವರ್ಷಗಳಿಂದ ನಿರಂತರ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ ಏಳನೆ ಬಾರಿಗೆ ಅವಿರೋಧ ಆಯ್ಕೆಗೊಂಡಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದರು.
ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರು ಮಾತನಾಡಿ ಡಾ ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಹಕಾರಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಅಭಿನ೦ದಿಸಿದರು.
ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಾಧಿಸಿರುವ ಸಾಧನೆಯ ಮೂಲಕ ಜಿಲ್ಲೆಯ ರೈತಾಪಿ ವರ್ಗದ ಆಶಾಕಿರಣವಾಗಿದೆ .ಅವರಿಂದ ಸಹಕಾರ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಲಭಿಸಲಿ .
ಎಂದರು.
ರಾಜ್ಯಕ್ಕೆ ಮಾದರಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ಅವಿರೋಧ ಆಯ್ಕೆಯಲ್ಲಿ ಸಹಕರಿಸಿದ ಎಲ್ಲಾ ನಿರ್ದೇಶಕರುಗಳಿಗೆ ,ಸಹಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವಿಭತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿಗಳು ತನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸದಿಂದ ಈ ಉನ್ನತ ಸ್ಥಾನವನ್ನು ಮತ್ತೊಮ್ಮೆ ಪಡೆಯಲು ಸಾಧ್ಯವಾಯಿತು ಎಂದು ಡಾ ಎಂ.ಎನ್ ರಾಜೇಂದ್ರಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಎಲ್ಲರ ಸಾಮೂಹಿಕ ಪ್ರಯತ್ನ ದ ಫಲವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ.ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.ಸಹಕಾರಿ ರಂಗದ ಧುರೀಣ ಮೊಳಹಳ್ಳಿ ಶಿವರಾಯ ಮೂಲಕ ಈ ಸಂಸ್ಥೆ ಹೆಮ್ಮರವಾಗಿ ರಾಷ್ಟ್ರದಲ್ಲಿ ಮಾದರಿ ಸಂಸ್ಥೆ ಯಾಗಿ ಬೆಳೆದಿದೆ.ರೈತರ ಆತ್ಮಹತ್ಯೆ ತಡೆಯುವಲ್ಲಿ ಸಹಾಯ ವಾಗಿದೆ.ರೈತರ ನಿಬಡ್ಡಿ ಸಾಲವನ್ನು ತ್ವರಿತವಾಗಿ ನೀಡುವ ಮೂಲಕ ಅವರಿಗೆ ಆಧಾರ ನೀಡುವ ಸಂಸ್ಥೆ ಯಾಗಿದೆ ಎಂದವರು ಹೇಳಿದರು.
ನಿರ್ದೇಶಕರಾಗಿ ಆಯ್ಕೆಯಾದ ವಿನಯ ಕುಮಾರ್‌ ಸೂರಿಂಜೆ, ಭಾಸ್ಕರ ಎಸ್‌. ಕೋಟ್ಯಾನ್‌, ಕೆ. ಹರಿಶ್ಚಂದ್ರ, ಟಿ.ಜಿ. ರಾಜರಾಮ ಭಟ್ ,ದೇವಿ ಪ್ರಸಾದ್‌ ಶೆಟ್ಟಿ, ಬಿ. ಅಶೋಕ್‌ ಕುಮಾರ್‌ ಶೆಟ್ಟಿ, ಶಶಿಕುಮಾರ್‌ ರೈ.ಬಿ., ಎಸ್‌. ರಾಜು ಪೂಜಾರಿ, ಎಂ.ವಾದಿರಾಜ ಶೆಟ್ಟಿ, ಕುಶಾಲಪ್ಪ ಗೌಡ,ಎಸ್‌.ಎನ್‌. ಮನ್ಮಥ, ತಾಲೂಕು ಕೃಷಿ ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್‌ ಬಿ. ರೈ ,ಎಸ್‌.ಬಿ. ಜಯರಾಮ ರೈ ದ.ಕ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ ಮೊದಲಾ ದವರು ಉಪಸ್ಥಿತರಿದ್ದರು.
ದೇವಿ ಪ್ರಸಾದ್‌ ಶೆಟ್ಟಿ ಸ್ವಾಗತಿಸಿದರು.ಶಶಿಕುಮಾರ್‌ ರೈ.ಬಿ. ವ೦ದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles