ಮ೦ಗಳೂರು: ನಗರದ ಮೇರಿ ಹಿಲ್ ಜಂಕ್ಷನ್ ಬಳಿ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ,ಕಾವೂರು ನಿವಾಸಿ ನಿಶಾಂಕ್ (23 ) ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ನಿಶಾಂಕ್ ಗುರುವಾರ ರಾತ್ರಿ ಸ್ಕೂಟರ್ ನಲ್ಲಿ ಏರ್ಪೋರ್ಟ್ ರಸ್ತೆಯಲ್ಲಿ KPT ಕಡೆಯಿಂದ ಪದವಿನಂಗಡಿ ಕಡೆಗೆ ಹೋಗುತ್ತಿದ್ದಾಗ ಮೇರಿ ಹಿಲ್ ಜಂಕ್ಷನ್ ಬಳಿಯ ನೆಕ್ಸಾ ಶೋರೂಮ್ ಎದುರುಗಡೆ ರಸ್ತೆ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದರು. ಪರಿಣಾಮ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಎಜೆ ಆಸ್ಪತ್ರೆಗೆ ದಾಖಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 12:30 ಗಂಟೆಗೆ ಮೃತಪಟ್ಟರು. ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
