ಮ೦ಗಳೂರು: ಮಂಜೇಶ್ವರದ ಪಾವೂರಿನಲ್ಲಿರುವ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವು ತನ್ನ ಸೇವೆಯ ಹದಿನೈದನೇ ವರ್ಷಗಳನ್ನು ಕಳೆದು ಹದಿನಾರನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಈ ಐತಿಹಾಸಿಕ ಕ್ಷಣದಲ್ಲಿ ಸ್ನೇಹಾಲಯದ ಸ್ಪೂರ್ತಿಯಾದ ಸಂತ ಮದರ್ ತೆರೆಸಾರವರ ಗ್ರೊಟ್ಟೊ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯ, ಸಾಂಭ್ರಮಿಕ ಬಲಿಪೂಜೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಅತಿ ವಂದನೀಯ ಅಲೋಶಿಯಸ್ ಪಾವ್ಲ್ ಡಿ ಸೋಜಾರವರು ನೆರವೇರಿಸಿದರು.
ಸ್ನೇಹಾಲಯದ ಸಭಾಂಗಣದಲ್ಲಿ ಪುಟ್ಟ ಸಭಾಕಾರ್ಯಕ್ರಮವು ನಡೆಯಿತು . ಮುಖ್ಯಅತಿಥಿಯಾಗಿ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿ ಸೋಜಾ , ಗೌರವ ಅತಿಥಿಗಳಾಗಿಎಡ್ಯುಕೇರ್ ಸಂಯೋಜಕ ಸ್ಟೀಫನ್ ಪಿಂಟೋ, ,ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಸಮಾಜ ಕಾರ್ಯಕರ್ತ ಮತ್ತು ಸಂಗೀತ ಸಂಯೋಜಕ ಓಸ್ವಾಲ್ಡ್ ಡಿಸೋಜಾ ಸಂಪಿಗೆ, ಡಿಎಎಂ ಆಯುರ್ವೇದ ರತ್ನ ಡಾ..ಮಹಮ್ಮದ್ ಶಾಲಿಮಾರ್,ಶ್ರೀ ಕ್ಷೇತ್ರ ಅರಸು ಮಂಜಿಷ್ಣರ ಉದ್ಯಾವರ, ಮಾಡ ಇದರ ಮುಖ್ಯಸ್ಥ ರಾಜಾ ಬೆಳ್ಚಡ, ಡೈಜಿವರ್ಲ್ಡ್ ಟಿವಿಪ್ರೊಡಕ್ಷನ್ ಡೈರೆಕ್ಟರ್ ಸ್ಟ್ಯಾನಿ ಬೇಳಾ,ಕೆಥೋಲಿಕ್ಸಭಾ, ಮಂಗಳೂರು ಧರ್ಮಪ್ರಾಂತ್ಯ ಅಧ್ಯಕ್ಷ ಶ್ರೀ ಅಲ್ವಿನ್ ಡಿಸೋಜಾ, ಮಂಜೇಶ್ವರ ಚರ್ಚಿನ ಧರ್ಮಗುರುಗಳಾದ ವಂದನೀಯ ಎಡ್ವಿನ್ ಪಿಂಟೋ,ಸ್ನೇಹಾಲದ ಆಧ್ಯಾತ್ಮಿಕ ನಿರ್ದೇಶಕ ಸಿರಿಲ್ ಡಿಸೋಜಾರವರು ಉಪಸ್ಥಿತರಿದ್ದರು.
ಸ್ನೇಹಾಲಯ ವ್ಯಸನ ಮುಕ್ತಿ ಕೇಂದ್ರದ ಧನ ಸಹಾಯಕ್ಕಾಗಿ ಏರ್ಪಡಿಸಿದ ಲಕ್ಕಿಡಿಪ್ ಡ್ರಾ ಈ ಸಂದಭ೯ದಲ್ಲಿ ನಡೆಯಿತು.ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ ಸ್ವಾಗತಿಸಿದರು. ಒಲಿವಿಯಾ ಕ್ರಾಸ್ತಾ ವ೦ದಿಸಿದರು. ಜಿಯೋ ಅಗ್ರಾರ್ ಮತ್ತು ವಿಯೊಲಾ ಕಾರ್ಯಕ್ರಮದ ನಿರೋಪಣೆಯನ್ನು ಮಾಡಿದರು. ಸ್ನೇಹಾಲಯದ ಹದಿನೈದನೆ ವರ್ಷದ ಈ ಸಂಭ್ರಮಾಚರಣೆಯುಸಹಭೋಜನದೊಂದಿಗೆ ಮುಕ್ತಾಯಗೊಂಡಿತು.