ಸುರತ್ಕಲ್: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಎ.26ರಂದು ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಉಗ್ರಾಣ ಮುಹೂರ್ತ ಕಾರ್ಯಕ್ರಮವು ತಂತ್ರಿವರೇಣ್ಯ ವೇದಮೂರ್ತಿ ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಸೋಮವಾರ ಬೆಳಗ್ಗೆ ನಡೆಯಿತು.
ಪ್ರಾರಂಭದಲ್ಲಿ ಕೊಡಮಣಿತ್ತಾಯ ದೈವಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತಾಡಿದ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ರಾವ್ ಎಕ್ಕಾರ್ ಅವರು, “ಶಿಬರೂರು ಕ್ಷೇತ್ರಕ್ಕೆ ತಲೆತಲಾಂತರಗಳ ಇತಿಹಾಸವಿದೆ. ಇಲ್ಲಿನ ಮಣ್ಣಿಗೂ ರೋಗ ಗುಣಪಡಿಸುವ ಶಕ್ತಿಯಿದ್ದು ಭಕ್ತರು ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುನೀತರಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಇಂದು ನಡೆದಿರುವ ಉಗ್ರಾಣ ಮುಹೂರ್ತ ಕಾರ್ಯಕ್ರಮದಿಂದ ಮೊದಲ್ಗೊಂಡು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ” ಎಂದರು.
ಕಟೀಲು ದೇವಳದ ಆಡಳಿತ ಮೊಕ್ತೇಸರ ಸನತ್ ಶೆಟ್ಟಿ ಮಾತನಾಡಿ, “ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ಅಡಚಣೆಯಿಲ್ಲದೆ ಕಟೀಲು ದೇವಿಯ ಅನುಗ್ರಹದಿಂದ ನಡೆಯಲಿ. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ದೈವದ ಅನುಗ್ರಹಕ್ಕೆ ಪಾತ್ರರಾಗಲಿ” ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕಟೀಲು ಕ್ಷೇತ್ರದ ಅನುವಂಶಿಕ ಆರ್ಚಕರಾದ ವೇ.ಮೂ. ಲಕ್ಷ್ಮೀನಾರಾಯಣ ಆಸ್ರಣ್ಣರು, ಶಿಬರೂರು ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಕಟೀಲು ಕ್ಷೇತ್ರದ ಅನುವಂಶಿಕ ಮೊತ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳು ಶಿಬರೂರು ಮಠ, ಸಹಾಯಕ ಆಯುಕ್ತ ಹರ್ಷವರ್ಧನ ಎಸ್.ಜೆ. ಎಂ. ದುಗ್ಗಣ್ಣ ಸಾವಂತರು, ವೇ.ಮೂ. ವೆಂಕಟರಾಜ ಉಡುಪರು, ಅತ್ತೂರುಬೈಲು, ವೇ.ಮೂ. ಶ್ರೀನಿವಾಸ ಭಟ್, ವೇ.ಮೂ. ಹರಿದಾಸ ಉಡುಪರು ಗೋಪಾಲಕೃಷ್ಣ ಮಠ, ಡಾ.ಸುರೇಶ್ ರಾವ್ ಮುಂಬೈ, ಟ್ರಷ್ಟಿ ಮಧುಕರ್ ಅಮೀನ್, ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ವೇದವ್ಯಾಸ ಉಡುಪ ದೇವಸ್ಯ ಮಠ ಕೊಡೆತ್ತೂರು, ಭುವನಾಭಿರಾಮ ಉಡುಪ, ಗಣಪತಿ ಮಯ್ಯ, ಸುಬ್ರಹ್ಮಣ್ಯ ಭಟ್, ನಾಗೇಂದ್ರ ಭಾರಧ್ವಾಜ ಜ್ಯೋತಿಷ್ಯರು, ಹಯವದನ ಭಟ್ ಕೈಯೂರು, ಪ್ರಭಾಕರ ಶೆಟ್ಟಿ ಕೋಂಜಾಲಗುತ್ತು, ನಿತಿನ್ ಹೆಗ್ಡೆ ಯಾನೆ ತಿಮ್ಮ ಕಾವ, ಕಾವರ ಮನೆ ಎಕ್ಕಾರು, ಶಂಭು ಮುಕ್ಕಾಲ್ಟಿ, ಜಯರಾಮ್ ಶೆಟ್ಟಿ, ದಿನೇಶ್ ಭಂಡ್ರಿಯಾಳ್ ತಾಳಿಪಾಡಿಗುತ್ತು, ಬಾಬು ಭಂಡ್ರಿಯಾಲ್ ಪಡ್ರೆ ಚಾವಡಿ ಮನೆ, ಗುರುರಾಜ್ ಮಾಡ ಬೊಳ್ಕೊಳ್ಳಿಮಾರುಗುತ್ತು, ಸೀತಾರಾಮ ಶೆಟ್ಟಿ, ಲಕ್ಷ್ಮಣ ಅಮೀನ್ ಕೋಡಿಕಲ್, ಅತುಲ್ ಕುಡ್ವ, ಶಂಕರ ರೈ ಕುಳಾಯಿಗುತ್ತು, ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟುಗುತ್ತು, ಚಿನ್ನಯ ಮಾಡ, ಶಂಕರ ಹೆಗ್ಡೆ, ಮದ್ಯಬೀಡು, ವಿಶ್ವನಾಥ ಶೆಟ್ಟಿ ಯಾನೆ ಸದಾಶಿವ ಶೆಟ್ಟಿ ಏತಮೊಗರುಗುತ್ತು, ಸುಧಾಕರ ಶೆಟ್ಟಿ ಗುತ್ತಿನಾರ್ ದೆಪ್ಪುಣಿಗುತ್ತು- ಅತಿಕಾರಿದೆಟ್ಟು, ಪ್ರಭಾಕರ ಶೆಟ್ಟಿ, ಪನೋಡಿಗುತ್ತು, ಕರಿಯ ಮಾರ್ಲ ಮದಕಾಡಿಗುತ್ತು, ಮುಚೂರು ಬಾಳಿಕೆ ಪ್ರಸಾದ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಅಂಗಡಿಗುತ್ತು, ವಿವಾಕರ ಆಳ್ವ ತೋಕೂರುಗುತ್ತು, ಬಂಕಿ ನಾಯ್ಕರು ಸುರತ್ಕಲ್, ಸುಧಾಕರ ಶೆಟ್ಟಿ ಮೂಡಗುತ್ತು, ಆತ್ತೂರು, ರಘುರಾಮ ಮಾಡ ಮಾಡರಮನೆ ಕಿಲೆಂಜೂರು, ಸದಾಶಿವ ಸಂಕು ಶೆಟ್ಟಿ ಶಿಬರೂರುಗುತ್ತು, ಯಾದವಕೃಷ್ಣ ಶೆಟ್ಟಿ, ಲಕ್ಷ್ಮೀನಾರಾಯಣ ರಾವ್ ಕೈಯೂರುಗುತ್ತು, ಬಾಲಕೃಷ್ಣ ಪುತ್ತುರಾಯರು ಕೈಯೂರು, ನಾಗೇಂದ್ರ ಕಾಮತ್, ಸುಧಾಕರ್ ಶೇಣವ, ಶ್ರೀಧರ ನಾಯ್ಕ ಕೋರ್ಯಾರು ಗುತ್ತು, ಆನಂದ ಆಳ್ವ ಕೋರ್ಯಾರ್ ಬಾಳಿಕೆ, ಶಿವಾನಂದ ಶೆಟ್ಟಿ ಪಡುಮನೆ, ತುಕರಾಮ ಶೆಟ್ಟಿ ಪರ್ಲಬೈಲುಗುತ್ತು, ರಘುನಾಥ ಶೆಟ್ಟಿ ಅಶ್ವತ್ವದಡಿ, ಸುಧಾಕರ ಶೆಟ್ಟಿ, ಪಾತ್ರಿ ಪ್ರಸಾದ್ ಶೆಟ್ಟಿ ಪೆರ್ವಾಜೆ ಮೊದಲಾದವರು ಉಪಸ್ಥಿತರಿದ್ದರು.
ತನಿಷ್ಕಾ ಶೆಟ್ಟಿ ಸ್ವಾಗತಿಸಿದರು. ಕೋರ್ಯಾರು ಗುತ್ತು ಜೀತೇಂದ್ರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಿಜೇಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಣೆಗೈದರು. ಸುರೇಂದ್ರ ಶೆಟ್ಟಿ ದೇಲಂತಬೆಟ್ಟು ವಂದಿಸಿದರು.