ಮಂಗಳೂರು: ಶ್ರೀ ಪತಂಜಲಿ ಯೋಗ ಪ್ರತಿಷ್ಠಾನದ ವತಿಯಿಂದ ಪಾಂಡೇಶ್ವರದ ದ. ಕ. ಜಿ. ಪ. ಪ್ರೌಡ ಶಾಲೆಯ ಮಕ್ಕಳಿಗೆ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಲತಿಫ್ ವಹಿಸಿದ್ದರು. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.ಎಸ್ ಡಿಎಂಸಿ ಅಧ್ಯಕ್ಷೆ ಬೃಂದಾ,ಗಾಯತ್ರಿ ಅತಿಥಿಯಾಗಿದ್ದರು. ಉದ್ಯಮಿ ಮುನೀರ್ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಜೊತೆ ಕಾರ್ಯದರ್ಶಿ ಪ್ರಭಾ, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಶಿಕ್ಷಕ ಅಶೋಕ ಪೂಜಾರಿಯವರು ಭಾಗವಹಿಸಿದ್ದರು.ಮುಖ್ಯ ಅತಿಥಿ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಪ್ರಭಾರವರು ಸೂರ್ಯನಮಸ್ಕಾರ ಮತ್ತು ಯೋಗದ ಮಹತ್ವ ಮತ್ತು ರಥಸಪ್ತಮಿಯ ವಿಶೇಷತೆಯನ್ನು ತಿಳಿಸಿದರು.
ಸುಮಾರು 50 ಮಕ್ಕಳು ಸ್ವಯಂಪ್ರೇರಿತರಾಗಿ ಮಕ್ಕಳು 60 ಸೂರ್ಯನಮಸ್ಕಾರ ಮಾಡಿ ಆಯೋಜಕರನ್ನು ಅಚ್ಚರಿಗೊಳಗಾಗಿಸಿದರು.
ರಮಾ ಲಕ್ಷ್ಮಿನಾರಾಯಣ ಶಾಖೆಯ ಶಿಕ್ಷಕ ಪ್ರೇಮನಾಥ ಸುವರ್ಣ, ವಸಂತ ಶೆಟ್ಟಿ ಮಾರಿಗುಡಿ ಶಾಖೆಯ ಶಿಕ್ಷಕಿ ಹರಿಣಿ ಮತ್ತು ಮೂರೂ ಶಾಖೆಗಳ ಬಂಧುಗಳು ಭಾಗವಹಿಸಿದ್ದರು.ಶಿಕ್ಷಕಿ ವೀಣಾ ಪ್ರಾರ್ಥನೆ ಮಾಡಿದರು. ಶಿಕ್ಷಕಿ ಸಾವಿತ್ರಿ ವಂದನಾರ್ಪಣೆಗೈದರು. ಶಿಕ್ಷಕಿ ತೇಜಶ್ರೀ ನಿರೂಪಣೆ ಮಾಡಿದರು. ಮುಖ್ಯೋಪಾಧ್ಯಾಯಿನಿ ಶಾಲಿನಿಯವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.