ಮಂಗಳೂರು: ಜಿಲ್ಲೆಯ ಕೃಷಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ 2023ರ ಪ್ರಯುಕ್ತ ಸಿರಿಧಾನ್ಯ ನಡಿಗೆ ಕಾರ್ಯಕ್ರಮ 2024ರ ಜನವರಿ 3 ಬುಧವಾರ ಬೆಳಿಗ್ಗೆ 7 ಗಂಟೆಗೆನಗರದ ಪುರಭವನದಿಂದ ಪ್ರಾರಂಭಗೊಂಡು ಹಂಪನಕಟ್ಟೆ ಸರ್ಕಲ್, ವಿಶ್ವಭವನ, ಸಿಟಿಸೆಂಟರ್, ನವಭಾರತ್ ಸರ್ಕಲ್, ಬೆಸೆಂಟ್, ಬಳ್ಳಾಲ್ಬಾಗ್ ಸರ್ಕಲ್, ಮಂಗಳೂರು ಮಹಾನಗರಪಾಲಿಕೆ ರಸ್ತೆ ಮೂಲಕ ಲೇಡಿಹಿಲ್ ಸರ್ಕಲ್ ಆಗಿ ಮಂಗಳಾ ಕ್ರೀಡಾಂಗಣದವರೆಗೆ ಸಾಗಲಿದೆ.
ಮಂಗಳ ಕ್ರೀಡಾಂಗಣದಲ್ಲಿ ಶಾರದಾ ಯೋಗ ಮತ್ತು ನ್ಯಾಚೋರಪತಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ತಲಪಾಡಿ ಮಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಇದರ ಸದುಪಯೋಗವನ್ನು ಪಡೆಯುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.