20.7 C
Karnataka
Thursday, January 9, 2025

ಸ್ನೇಹಾಲಯ ಸೈಕೊ ಸೋಶಿಯಲ್ ಪುನರ್ವಸತಿ ಕೇಂದ್ರ : “ಸ್ನೇಹ ಮಿಲನ-2024 “

ಮ೦ಜೇಶ್ವರ : ಸ್ನೇಹಾಲಯ ಸೈಕೊ ಸೋಶಿಯಲ್ ಪುನರ್ವಸತಿ ಕೇಂದ್ರ ಮಂಜೇಶ್ವರಂದಲ್ಲಿ “ಸ್ನೇಹ ಮಿಲನ-2024 ” ಎಂಬ ಕ್ರಿಸ್‌ಮಸ್ ಕಾರ್ಯಕ್ರಮವನ್ನು ಡಿಸೆಂಬರ್ 21ರಂದು ಆಚರಿಸಲಾಯಿತು ಸ್ನೇಹಾಲಯದ ವಾರ್ಷಿಕ ಕ್ರಿಸ್‌ಮಸ್ ಆಚರಣೆಯು ನಿವಾಸಿಗಳಲ್ಲಿಹೊಸ ಉತ್ಸಾಹವನ್ನು ಜೀವಂತವಾಗಿರಿಸಿತು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರಾದ ಶಿಲ್ಪಾ ದ್ಯಾವಯ್ಯ , ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕ ಡಾ.ಶಿವಪ್ರಕಾಶ್ ಡಿ.ಎಸ್ ಸೇರಿದಂತೆ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.

ಹೊಸಂಗಡಿಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಫಾ. ಲೋಯಸ್ ಮರಿಯದಾಸ್, ಸ್ನೇಹಾಲಯದ ನಿವಾಸಿ ಗುರುಗಳಾದ ಫಾ. ಸಿರಿಲ್ ಡಿ ಸೋಜಾ, ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ದೆಹಲಿ, ನಿರ್ದೇಶಕರಾದ ಮತ್ತು PTI ಕನ್ಸಲ್ಟೆನ್ಸಿ ಬಾಂಬೆಯ ಮಾಲೀಕರಾದ ಶ್ರೀ ಜೋಸೆಫ್ ಇಲಿಯಾಸ್ ಮಿನೇಜಸ್. ಮತ್ತು ಮಂಗಳೂರಿನ ಪ್ರೇರಕ ಭಾಷಣಕಾರ ರಫೀಕ್ ಮಾಸ್ಟರ್ ಸಂಭ್ರಮದ ಗೌರವ ಅತಿಥಿಗಳಾಗಿದ್ದರು . ಮಂಗಳೂರಿನ ಜಿಜಿ100 ಕೋರಸ್ ತಂಡ ಸುಂದರ ಕ್ರಿಸ್ಮಸ್ ಸಂಗೀತದೊಂದಿಗೆ ಸಭಿಕರನ್ನು ರಂಜಿಸಿತು.

ಕಾರ್ಯಕ್ರಮವನ್ನು ಜಿಯೋ ಡಿಸಿಲ್ವಾ ನಿರೂಪಿಸಿದರು. ಸ್ನೇಹಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಜೋಸೆಫ್ ಕ್ರಾಸ್ತಾ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳ ಜೊತೆ ಸಂಭ್ರಮಕ್ಕೆ ಚಾಲನೆ ನೀಡಿದರು.

ಅತಿಥಿಗಳು ಕ್ರಿಸ್ಮಸ್ ಕೇಕ್ ಕತ್ತರಿಸಿ ಸಾಂತಕ್ಲೋಸ್ ಸಮ್ಮುಖದಲ್ಲಿ ಎಲ್ಲರಿಗೂ ಸಿಹಿ ಹಂಚಿದರು. ಕಾರ್ಯದರ್ಶಿ / ಟ್ರಸ್ಟಿ ಒಲಿವಿಯಾ ಕ್ರಾಸ್ತಾ ಅವರು ಧನ್ಯವಾದ ಅರ್ಪಿಸಿದರು.

ಸ್ನೇಹಾಲಯ : “ಸ್ನೇಹ ಮಿಲನ-2024 “

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles