24.8 C
Karnataka
Wednesday, April 16, 2025

ಕ್ರೀಡಾ ವಸತಿ ಶಾಲೆ/ನಿಲಯ: ವಿಶೇಷ ಆಯ್ಕೆ ಶಿಬಿರ

ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ. ಮಟ್ಟದ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಪ್ರವೇಶಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ರಾಜ್ಯದ ಕೆಲವು ಸ್ಥಳಗಳಲ್ಲಿ “ವಿಶೇಷ ಆಯ್ಕೆ ಶಿಬಿರ”ಗಳನ್ನು ಆಯೋಜಿಸಲಾಗಿದೆ.
ಏಪ್ರಿಲ್ 17 ರಂದು ಕಲ್ಬುರ್ಗಿ ಜಿಲ್ಲಾ ಕ್ರೀಡಾಂಗಣ – ಅಥ್ಲೆಟಿಕ್ಸ್ ವಾಲಿಬಾಲ್, ಉಡುಪಿ ಜಿಲ್ಲಾ ಕ್ರೀಡಾಂಗಣ – ಅಥ್ಲೆಟಿಕ್ಸ್, ಬಾಸ್ಕೆಟ್‍ಬಾಲ್, ವಾಲಿಬಾಲ್, ಕಬಡ್ಡಿ. ಬೀದರ್ ಜಿಲ್ಲಾ ಕ್ರೀಡಾಂಗಣ – ಸೈಕ್ಲಿಂಗ್. ಬಳ್ಳಾರಿ ಫುಟ್ಬಾಲ್ ಕ್ರೀಡಾಂಗಣ – ಫುಟ್ಬಾಲ್, ಗದಗ ಜಿಲ್ಲಾ ಕ್ರೀಡಾಂಗಣ – ಹಾಕಿ ಚಿಕ್ಕಮಗಳೂರು ಹಾಗೂ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜೂಡೋ ಆಯ್ಕೆ ಶಿಬಿರ ನಡೆಯಲಿದೆ

ವಿಶೇಷ ಆಯ್ಕೆ ಶಿಬಿರಗಳಲ್ಲಿ ರಾಜ್ಯದ ಯಾವುದೇ ಭಾಗದ ಕ್ರೀಡಾಪಟುಗಳು ಭಾಗವಹಿಸಲು ಮುಕ್ತ ಅವಕಾಶವಿದೆ. 2025-26ನೇ ಸಾಲಿನ ಆಯ್ಕೆ ಶಿಬಿರದಲ್ಲಿ ಭಾಗವಹಿಸದ ಅಭ್ಯರ್ಥಿಗಳು ಈ ವಿಶೇಷ ಶಿಬಿರಗಳಲ್ಲಿ ಭಾಗವಹಿಸಬಹುದು. ಈಗಾಗಲೇ ಆಯ್ಕೆ ಶಿಬಿರಗಳಲ್ಲಿ ಭಾಗಿಯಾಗಿರುವ ಆದರೆ, ರಾಜ್ಯ ಮಟ್ಟದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳು ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಉದ್ದೇಶಿಸಿದಲ್ಲಿ ಈ ಬಗ್ಗೆ ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ದಾಖಲಿಸಿ ವಿಶೇಷ ಆಯ್ಕೆ ಶಿಬಿರದಲ್ಲಿ ಭಾಗವಹಿಸಬಹುದು.
8ನೇ ತರಗತಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 8ನೇ ತರಗತಿ ಪ್ರವೇಶಕ್ಕೆ ಜೂನ್ 2025ಕ್ಕೆ ಅನ್ವಯವಾಗುವಂತೆ 14 ವರ್ಷ ವಯಸ್ಸಿನ ಒಳಗೆ ಇರಬೇಕು. ಪ್ರಥಮ ಪಿ.ಯು.ಸಿ. ಪ್ರವೇಶ ಬಯಸುವ ಅಭ್ಯರ್ಥಿಗಳ ವಯಸ್ಸು ಜೂನ್-2025ಕ್ಕೆ ಅನ್ವಯವಾಗುವಂತೆ 18 ವರ್ಷ ವಯಸ್ಸಿನ ಒಳಗೆ ಇರಬೇಕು.
ಎಪ್ರಿಲ್ 15 ರಂದು ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿರುವ ಸ್ಥಳ ಮತ್ತು ಆಯ್ಕೆ ಪ್ರಕ್ರಿಯೆ ನಡೆಯುವ ಕ್ರೀಡೆಗಳು:- ಬೆಂಗಳೂರು ಶ್ರೀ ಕಂಠೀರವ ಕ್ರೀಡಾಂಗಣ – ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ವಾಲಿಬಾಲ್, ಫೆನ್ಸಿಂಗ್, ಅರ್ಚರಿ ಆಯ್ಕೆ ಶಿಬಿರ ನಡೆಯಲಿದೆ.
ಧಾರವಾಡ ಜಿಲ್ಲಾ ಕ್ರೀಡಾಂಗಣ – ಅಥ್ಲೆಟಿಕ್ಸ್, ಬಾಸ್ಕೆಟ್‍ಬಾಲ್, ವಾಲಿಬಾಲ್, ಸೈಕ್ಲಿಂಗ್. , ದಾವಣಗೆರೆ ಜಿಲ್ಲಾ ಕ್ರೀಡಾಂಗಣ – ಕುಸ್ತಿ ಮತ್ತು ಕಬಡ್ಡಿ, ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್ಬಾಲ್. ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣ – ಹಾಕಿ, ತುಮಕೂರು ಜಿಲ್ಲಾ ಕ್ರೀಡಾಂಗಣ – ಜಿಮ್ನಾಸ್ಟಿಕ್ ಹಾಗೂ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜೂಡೋ ಆಯ್ಕೆ ಶಿಬಿರ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles