22.7 C
Karnataka
Wednesday, April 2, 2025

“ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ” ನಾಮಫಲಕ ಅನಾವರಣ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್.ಟಿ.ಓ ಕಚೇರಿ ಬಳಿ “ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ” ಎಂಬ ನಾಮಫಲಕವನ್ನು ಶಾಸಕ ವೇದವ್ಯಾಸ ಕಾಮತ್ ರವರು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಶಾಸಕರು ಮಂಗಳಾದೇವಿ ದೇವಸ್ಥಾನ ಎಂಬುದು ಈ ಊರಿಗೆ ಮಾತ್ರವಲ್ಲ, ಪರವೂರು ಸೇರಿದಂತೆ ನಾಡಿನ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲೊಂದಾಗಿದೆ. ಇಂತಹ ಪುಣ್ಯಕ್ಷೇತ್ರದ ಹೆಸರಿನಲ್ಲಿ ಇನ್ನು ಮುಂದೆ ಈ ರಸ್ತೆ ಕರೆಯಲ್ಪಡುವುದು ಹರ್ಷ ತಂದಿದೆ ಎಂದರು.

ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆಯಿಂದ, ಎಬಿ ಶೆಟ್ಟಿ ವೃತ್ತದಿಂದ, ಮಂಕಿಸ್ಮಾಂಡ್ ಮುಖಾಂತರ ಮಂಗಳಾದೇವಿ ದೇವಸ್ಥಾನ ಶಮಿ ಕಟ್ಟೆಯಾಗಿ ಫಸ್ಟ್ ರೈಲ್ವೆ ಬ್ರಿಡ್ಜ್ ವರೆಗಿನ ರಸ್ತೆ ಇದಾಗಿದ್ದು “ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ” ಎಂದು ನಾಮಕರಣವಾಗಿದೆ.

ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ರಮೇಶ್ ಕಂಡೆಟ್ಟು, ಮಾಜಿ ಮೇಯರ್ ಗಳಾದ ಮನೋಜ್ ಕುಮಾರ್ ಕೋಡಿಕಲ್, ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ, ಮಾಜಿ ಉಪ ಮೇಯರ್ ಭಾನುಮತಿ, ಶೈಲೇಶ್ ಶೆಟ್ಟಿ, ಭರತ್ ಕುಮಾರ್, ಲತೀಫ್ ಕಂದುಕ, ರೇವತಿ ಶ್ಯಾಮ್ ಸುಂದರ್ ಶೆಟ್ಟಿ, ನಿತಿನ್ ಕುಮಾರ್, ಭಾಸ್ಕರ ಚಂದ್ರ ಶೆಟ್ಟಿ ಸೇರಿದಂತೆ ಅನೇಕ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles