ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಸಂಶೋಧನೆ ಮತ್ತು ನಾವೀನ್ಯತೆ ಮಂಡಳಿಯು ಹೋಟೆಲ್ ಶ್ರೀನಿವಾಸ್‌ನಲ್ಲಿ ಜೂನ್ 22ರಂದು ಸಂಶೋಧನಾ ಕಾನ್ಕ್ಲೇವ್ ಅನ್ನು ಆಯೋಜಿಸಿತ್ತು.
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿಎ ಎ.ರಾಘವೇಂದ್ರರಾವ್, ಕಾರ್ಯಕ್ರಮದ ಉದ್ಘಾಟಿಸಿ,ದೇಶದ ಅಭಿವೃದ್ಧಿಗೆ ಸಹಕಾರಿಯಾಗುವುದರಿಂದ ಸಂಶೋಧನೆಯಲ್ಲಿ ಆಸಕ್ತಿ ತೋರಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು. .
ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಮಾತನಾಡಿ ವೈಜ್ಞಾನಿಕ ಸಂಶೋಧನೆಗೆ ಭಾರತೀಯ ಕೊಡುಗೆಗಳು ಗಣನೀಯವಾಗಿದೆ ಎಂದರು. ಉಪಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ ,ಮೌಲ್ಯಮಾಪನ ಕುಲಸಚಿವ ಡಾ. ಶ್ರೀನಿವಾಸ್ ಮಯ್ಯ , ಅಭಿವೃದ್ಧಿ ಕುಲಸಚಿವ ಡಾ. ಅಜಯ್ ಕುಮಾರ್ ಉಪಸ್ಥಿತರಿದ್ದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ನಾವೀನ್ಯತೆ ಮಂಡಳಿ ನಿರ್ದೇಶಕ ಡಾ. ಪ್ರವೀಣ್ ಬಿ ಎಂ – ವಾರ್ಷಿಕ ಸಂಶೋಧನಾ ವರದಿ ಮತ್ತು ವಿಶ್ವವಿದ್ಯಾಲಯದ ಪ್ರಕಟಣೆಗಳು, ಪೇಟೆಂಟ್‌ಗಳು ಮತ್ತು ಹಕ್ಕುಸ್ವಾಮ್ಯಗಳ ಅಂಕಿಅಂಶಗಳನ್ನು ನೀಡಿದರು. ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ್ ಕುಮಾರ್ ಸ್ವಾಗತಿಸಿದರು. ಸಂಶೋಧನಾ ಸಂಯೋಜಕಿ ಡಾ.ಶೈಲಶ್ರೀ ವಂದಿಸಿದರು. ಪ್ರೊ. ಶ್ವೇತಾ ಪೈ ಮತ್ತು ಪ್ರೊ. ರೋಹನ್ ನಿರೂಪಿಸಿದರು.