17.9 C
Karnataka
Saturday, November 23, 2024

ವಿಚಾರಣಾಧೀನ ಕೈದಿ ಆತ್ಮಹತ್ಯೆ

ಮ೦ಗಳೂರು:ವಿಚಾರಣಾಧೀನ ಕೈದಿ ವೆನ್ಲಾಕ್ ಆಸ್ಪತ್ರೆಯ ಜೈಲು ವಾರ್ಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊ೦ಡಿರುವ ಘಟನೆ ಸೋಮವಾರ ನಡೆದಿದೆ.ಕೇರಳದ ಕಡುರುಗೋಡು ನಿವಾಸಿ ಮುಹಮ್ಮದ್ ನೌಫಲ್ (26) ಆತ್ಮಹತ್ಯೆ ಮಾಡಿಕೊ೦ಡಿರುವ ಕೈದಿ.

ಕೊಣಾಜೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 109/2022 ರ ಅಡಿಯಲ್ಲಿ 2022 ರ ಡಿಸೆಂಬರ್ 26 ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುಹಮ್ಮದ್ ನೌಫಲ್ ಮಾನಸಿಕ ಖಿನ್ನತೆಯ ಕಾರಣ ವೆನ್ಲಾಕ್ ಆಸ್ಪತ್ರೆಯ ಜೈಲು ವಾರ್ಡ್‌ಗೆ ದಾಖಲಾಗಿದ್ದ. ಆಸ್ಪತ್ರೆಯ ಜೈಲು ವಾರ್ಡ್‌ನಲ್ಲಿದ್ದಾಗ ಸೋಮವಾರ ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊ೦ಡಿದ್ದಾನೆ. ಅವನನ್ನು ರಕ್ಷಿಸಲು ಕರ್ತವ್ಯದಲ್ಲಿದ್ದ ಗಾರ್ಡ್‌ಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಪ್ರಯತ್ನಿಸಿದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.ಮ೦ಗಳೂರು ನಗರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles